ವಿಶೇಷ ನೇಮಕಾತಿಯಡಿ ಪೌರಕಾರ್ಮಿಕ ಕಾಯಂ ಆಗ್ರಹ

ರಾಯಚೂರು, ಫೆ.೨೮- ನಗರಸಭೆಯಲ್ಲಿ ಕಳೆದ ೨೦ ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಪೌರಕಾರ್ಮಿಕನ್ನು ವಿಶೇಷ ನೇಮಕಾತಿಯಡಿಯಲ್ಲಿ
ಕಾಯಂಗೊಳಿಸುವಂತೆ ಪೌರಕಾರ್ಮಿಕರು ನಗರಾಭಿವೃದ್ದಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ವಿಶೇಷ ೨೦೨೩ ರ ನೇರ ನೇಮಕಾತಿಯಲ್ಲಿ ವಂಚಿತಗೊಂಡ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು ಎಂದು ಆಗ್ರಹಿಸಿದರು.ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಪೌರಕಾರ್ಮಿಕರ ವಿಶೇಷ ನೇಮಕಾತಿಯಲ್ಲಿ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಗರಸಭೆಯಲ್ಲಿ ೨೦೦೨ ರಿಂದ ಕೆಲಸ ನಿರ್ವಸುತ್ತಿರುಪೌರಕಾರ್ಮಿಕರನ್ನುಕಾಯಂಗೊಳಿಸಬೇಕೆಂದು ಈಗಾಗಲೇ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ನಗರಸಭೆಯಲ್ಲಿ ಸುಮಾರು ೨೦ ವರ್ಷಗಳಿಂದ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ ನಿಜವಾದ ಪೌರಕಾರ್ಮಿಕ ಕಾಯಂಗೊಳಿಸಬೇಕೆಂದು ಒತ್ತಾಯಿಸಿದರು.
ಸೇವೆಯಲ್ಲಿ ಮೊದಲಿನಿಂದ ಕೆಲಸ ಮಾಡುವ
ಪೌರಾಕಾರ್ಮಿಕರನ್ನು ಗಣನೆಗೆ ತೆಗೆದುಕೊಂಡು ಅವರ ಕುಟುಂಬಗಳಿಗೆ ನ್ಯಾಯದೊರಿಸಿಸಿಕೊಡಬೇಕೆಂದು ಒತ್ತಾಯಿಸಿದರು.
ನಾವು ಸುಮಾರು ೨೦ ವರ್ಷಗಳಿಂದ ರಾಯಚೂರು ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರದ ಆದೇಶದಂತೆ ವಿಶೇಷ ನೇಮಕಾತಿ ಅಡಿಯಲ್ಲಿ ನಮಗೆ ಅನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರಸಭೆ ನಾಮನಿರ್ದೇಶನ ಸದಸ್ಯ ರಾಜು, ಪೌರಕಾರ್ಮಿಕರು ಸೇರಿದಂತೆ ಉಪಸ್ಥಿತರಿದ್ದರು.