ವಿಶೇಷ ಧರ್ಮ ಅದುವೇ ವೀರಶೈವ ಧರ್ಮ :ಶರಣಕುಮಾರ ಮೋದಿ

ಕಲಬುರಗಿ:ಮಾ. 05:ಕನ್ನಡ ನಾಡಿನ ಪ್ರಮುಖ ಧರ್ಮಗಳಲ್ಲಿ ಒಂದಾಂದ ಹಾಗೂ ವಿಶೇಷ ಧರ್ಮ ಅಂದರೆ ಅದುವೇ ವೀರಶೈವ ಧರ್ಮ ಇದು ಸಮಾಜದಲ್ಲಿ ಕಡೆಗಣಿತವಾಗಿರುವ ಅಂತ್ಯಜನರನ್ನು ಒಳಗೊಂಡಿರುವ ಧರ್ಮ ಕನ್ನಡ ನಾಡಿನ ಸರ್ವ ಜಾತಿ ಪಂಥಗಳ ಸಂಗಮವಾಗಿರುವ ಧರ್ಮವೇ ವೀರಶೈವ ಧರ್ಮ ಎಂದು ವೀರಶೈವ ಧರ್ಮದ ಉಗಮ ಮತ್ತು ಮಹತ್ವ ಕುರಿತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಶರಣಕುಮಾರ ಮೋದಿಯವರು ಮಾತನಾಡಿದ್ದರು.
ಕಾಳಗಿ ತಾಲ್ಲೂಕಿನ ಟೇಂಗಳಿ ಗ್ರಾಮದ ಶಾಂತೇಶ್ವರ ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರರ ಜಯಂತ್ಸೋವ ನಿಮಿತ ಹಮ್ಮಿಕೊಂಡ ಮಾತೋಶ್ರೀ ಬಸವಾಂಬೆ ಪುರಾಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶ್ರೀ ಮಠದ ಸನ್ಮಾನ ಸ್ವೀಕರಿಸಿ ಮಾತನಾಡಿದ್ದರು.
ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿಯವರು ಮಾತನಾಡುತ್ತಾ, ಪ್ರತಿವರ್ಷಕೊಮ್ಮೆ ಅಲ್ಲದೆ ಮಠದ ಅಂಗಳದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲೂ ತಪ್ಪದೇ ನೇಗಿಲ ಯೋಗಿಗಳಿಗೆ ನೇನೆಸುವ ಮತ್ತು ನಮೀಸುವ ಮಠ ಯಾವುದಾದ್ದರು ಇದ್ದರೆ ಅದುವೇ ಟೇಂಗಳಿ-ಮಂಗಲಗಿ ಶಾಂತೇಶ್ವರ ಮಠ ಇಲ್ಲಿ ಶೈಕ್ಷಣಿಕವಾಗಿ ನೂರಾರು ಮಕ್ಕಳಿಗೆ ವಿದ್ಯಾದಾನದ ಜೊತೆಗೆ ಧಾರ್ಮಿಕ ಹಾಗೂ ಆಧಾತ್ಮಿಕ ಕೇಂದ್ರವಾಗಿದ್ದು ಎಲ್ಲಾ ಜಾತಿ ಮತ, ಪಂಥದ ವರ್ಗದವರಿಗೂ ಒಳಗೊಂಡು ಸಾಂಸ್ಕøತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಜನಸಾಮಾನ್ಯರ ತಾಣವಾಗಿದೆ ಎಂದು ಶಿವರಾಜ ಅಂಡಗಿ ಅವರು ಪ್ರಸ್ತಾವಿಕವಾಗಿ ಮಾತಾನಾಡಿದ್ದರು.
ಜಿಲ್ಲಾ ವೀರಶೈವ ಮಹಾಸಭಾ ಸಂಘಟನಾ ಕಾರ್ಯದರ್ಶಿಗಳಾದ ಶರಣು ಟೇಂಗಳಿ, ಕಾರ್ಯಾಕಾರಿ ಮಂಡಲಿ ಸದಸ್ಯರಾದ ವಿನೋದಕುಮಾರ ಜನೇವರಿ ಹಾಗೂ ಹಿರಿಯರಾದ ಸೋಮಶೇಖರ ಹಿರೇಮಠ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶ್ರೀ ಷ.ಬ್ರ ಡಾ|| ಶಾಂತಸೋಮನಾಥ ಶಿವಚಾರ್ಯರರು ಅಧ್ಯಕ್ಷತೆ ವಹಿಸಿದ್ದರು.
ಪ್ರಾರಂಭದಲ್ಲಿ ಅಣ್ಣಾರಾವ ಶೇಳಿಗೆ, ಶರಣಕುಮಾರ ಹೂಗಾರ, ಸಂಗೀತಾ ಸೇವೆ ನಡೆಸಿಕೊಟ್ಟರು ಕುಕನೂರ ಹಿರೇಮಠದ ವೇ. ಮೂ ಶ್ರೀ ಬಸಯ್ಯಾಸ್ವಾಮಿಗಳಿಂದ ಪ್ರವಚನ ಜರುಗಿತು.
ಬಸವರಾಜ ಬೈರಿ ಕಾರ್ಯಕ್ರಮ ನಿರೂಪಿಸಿದ್ದರು, ಉಮಾದೇವಿ ಚೇಂಗಟಿ ಸ್ವಾಗತಿಸಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ಟೇಂಗಳಿ ವಲಯ ಘಟಕದ ಅಧ್ಯಕ್ಷರಾದ ಭೀಮಾಶಂಕರ ಅಂಕಲಗಿ, ಮಳಖೇಡ ವಲಯ ಘಟಕದ ಅಧ್ಯಕ್ಷರಾದ ಬಸವರಾಜ ದೇಶಮೂಖ ಟೇಂಗಳಿ ಗ್ರಾಮದ ಪ್ರಮುಖರಾದ ಚಂದ್ರಶೇಖರ ಮಂಗದ, ವಿಶ್ವನಾಥ ಬಾಳದೇ ಬಸವರಾಜ ತುಪ್ಪದ, ವಿಶ್ವನಾಥ ಹಿಲ್ಲಾ, ಗುಂಡಪ್ಪ ಪಟೇದ್ ಮಹಾದೇವ ಅಷ್ಠಗಿ ರಾಜಕುಮಾರ ಪಟೇದ್, ನಾಗರಾಜ ಮಹಾಗಾಂವ, ರೇವಶೇಟ್ಟಿ ಮಲಕೂಡ, ಓಂ ಪ್ರಕಾಶ ಹೆಬ್ಬಾಳ, ಗುರಣ್ಣ ತಳಕಿನ ಹಾಗೂ ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.