ವಿಶೇಷ ಟಮೊಟೊ ಅಂಚೆ ಲಕೋಟೆ ಬಿಡುಗಡೆ ಸಮಾರಂಭ

ಕೋಲಾರ,ಜ. ೨- ಕೇಂದ್ರ ಸರ್ಕಾರದ ಅಂಚೆ ಇಲಾಖೆ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿಯಲ್ಲಿ ಟಮೊಟೋ ಹಣ್ಣನ್ನು ಗುರುತಿಸಿ ಇದರ ಚಿತ್ರವುಳ್ಳ ವಿಶೇಷ ಅಂಚೆ ಲೋಟೆಯನ್ನು ಅಂತರಾಷ್ಟ್ರೀಯ ಮಟ್ಟದ ಪ್ರದರ್ಶದಲ್ಲಿ ಪ್ರಚಲಿತಗೊಳಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ರೋಟರಿ ಜಿಲ್ಲಾ ಅಧ್ಯಕ್ಷ ಹಾಗೂ ಅಂಚೆ ಲಕೋಟೆ ಪ್ರಯೋಜಕ ಸಿ.ಎಂ.ಆರ್. ಶ್ರೀನಾಥ್ ಅಭಿಪ್ರಾಯ ಪಟ್ಟರು,
ನಗರದ ಪ್ರಧಾನ ಅಂಚೆ ಇಲಾಖೆಯ ಕಚೇರಿಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿಯಲ್ಲಿ ಟಮೊಟೂ ಹಣ್ಣಿನ ಚಿತ್ರದ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು,
ಟಮ್ಯೊಟೂ ಹಣ್ಣು ಕಳೆದ ೨೦೦ ವರ್ಷಗಳಿಂದ ಭಾರತದಲ್ಲಿ ಬೆಳೆಯಲಾಗುತ್ತಿದೆ. ಟಮ್ಯೊಟು ಹಣ್ಣನ್ನು ಕನ್ನಡದಲ್ಲಿ ಬೂದಿ ಹಣ್ಣು ಎಂದು ಕರೆಯಲಾಗುತ್ತಿತ್ತು. ಬ್ರಿಟಿಷ್‌ರು ಇದನ್ನು ಟಮೊಟೋ ಎಂದು ಕರೆಯುತ್ತಿದ್ದರು, ಟಮೊಟೊ ಎಂದೆ ಪ್ರಚಲಿತದಲ್ಲಿದೆ. ಇದನ್ನು ಹೈಬ್ರೀಡ್ ತಳಿ ಮತ್ತು ದೇಶಿಯ ತಳಿ ಎರಡು ವಿಧಗಳಿದ್ದು ತನ್ನದೆ ಅದಾ ವಿಶೇಷ ಲಕ್ಷಣಗಳನ್ನು ಹೊಂದಿದೆ ಎಂದರು,
ಕೋಲಾರದಲ್ಲಿ ಟಮೊಟೊ ಬೆಳೆಯನ್ನು ಅತಿ ಹೆಚ್ಚಾಗಿ ಬೆಳೆಯುವಂತ ಭಾರತದ ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದ ಎಲ್ಲಡೆ ಕಳೆದ ೧೦ ವರ್ಷಗಳಿಂದ ಪೂರೈಕೆ ಮಾಡುತ್ತಿದ್ದ ಟಮೋಟೂ ಇಂದು ದೇಶ ವ್ಯಾಪ್ತಿ ನಮ್ಮ ಜಿಲ್ಲೆಯಿಂದ ಸರಬರಾಜು ಅಗುತ್ತಿದೆ ಎಂದರೆ ಇದರ ಗೌರವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಯ ರೈತರಿಗೆ ಸಲ್ಲುತ್ತದೆ ಎಂದು ಹೇಳಿದರು,
ಕೇಂದ್ರ ಸರ್ಕಾರದಿಂದ ಟಮೊಟೋ ಬೆಳೆಯ ವಿವಿಧ ಉತ್ಪನ್ನ ಘಟಕಗಳಿಗೆ ಶೇ ೫೦ರಷ್ಟು ಹಾಗೂ ರಾಜ್ಯ ಸರ್ಕಾರದಿಂದ ಶೇ ೨೫ ರಷ್ಟು ಸಹಾಯ ಧನ ನೀಸುವ ಮೂಲಕ ಉತ್ತೇಜಿಸಲಾಗುತ್ತಿದೆ.ಈಗಾಗಲೇ ಅಂಧ್ರ ಪ್ರದೇಶದ ರೈತರಿಗೆ ಈ ಸೌಲಭ್ಯ ಸಿಗುತ್ತಿದ್ದು, ನಮ್ಮ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಸೌಲಭ್ಯ ಸಿಗುತ್ತಿದೆ ಅದರೆ ರಾಜ್ಯ ಸರ್ಕಾರದಲ್ಲಿ ಸಿಗುತ್ತಿಲ್ಲ ಅಂದ್ರ ಪ್ರದೇಶದ ಮಾದರಿಯಲ್ಲಿ ರಾಜ್ಯದವರಿಗೆ ಶೇ ೨೫ ರಷ್ಟು ಸಹಾಯ ಧನ ವಿತರಿಸುವಂತಾಗ ಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹೈನುಗಾರಿಕೆ, ರೇಷ್ಮೆ, ಕುಕ್ಕುಟ ಹಾಗೂ ಟಮೋಟೊಗೆ ಹೆಚ್ಚು ಖ್ಯಾತಿ ಪಡೆದಿದೆ. ಹೆಚ್ಚು ಉತ್ಪನ್ನಗಳಿಗೆ ಅದ್ಯತೆ ನೀಡುವ ಮೂಲಕ ರಾಷ್ಟಕ್ಕೆ ಸಮರ್ಪಣೆ ಮಾಡ ಬೇಕಾಗಿದೆ ಎಂದು ಕರೆ ನೀಡಿದರು
ತೋಟಗಾರಿಕೆ ಸಹಭಾಗಿತ್ವದಲ್ಲಿ ಸುಮಾರು ೪೦ ಸಾವಿರ ಅಂಚೆ ಲಗೋಟೆಯನ್ನು ಪ್ರಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು,ಮೈಸೂರು,ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧಡೆಯ ಪ್ರಧಾನ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಈ ಲಕೋಟೆಯನ್ನು ವ್ಯವಹಾರಿಕವಾಗಿ ಅರ್ಥಿಕವಾಗಿ ಸಧೃಡಗೊಳಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ಅಂಚೆ ಲಕೋಟೆಯನ್ನು ಪ್ರದರ್ಶದಲ್ಲಿಡಲಾಗುವುದು. ಇದೊಂದು ಭಾವನಾತ್ಮಕ ಸಂಬಂಧದ ಅಭಿವೃದ್ದಿಗೆ ಪೂರಕವಾಗಲಿದೆ. ರೈತರ ಬದುಕಿನ ಸಂಕೇತವಾಗಿದೆ. ಈ ಕುರಿತು ಸಾಮಾನ್ಯ ಜನತೆಗೂ ಅರಿವುಂಟಾಗುವ ಪ್ರಯತ್ನವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಚೆ ಇಲಾಖೆಯ ಅಧೀಕ್ಷಕ ಆರ್. ಸುಭಾನಿ ಮತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತೋಟ ಗಾರಿಕೆ ಇಲಾಖೆ ಅಧಿಕಾರಿ ಪರಮೇಶ್ ಅವರು ಮಾತನಾಡಿ ಟಮೋಟೊ ಒಂದು ಪ್ರಸಿದ್ದವಾದ ಅಕರ್ಷಕ ಹಣ್ಣು ಅಗಿದೆ ಇದನ್ನು ಕಾಶ್ಮೀರಿ ಅಪಲ್‌ಗೆ ಹೋಲಿಕೆ ಮಾಡುತ್ತಾರೆ. ಟಮೊಟೋ ದಿಂದ ವಿವಿಧ ಉತ್ಪನ್ನಗಳು ತಯಾರು ಮಾಡಲಾಗುತ್ತದೆ ಎಂದರು.
ಭಾರತೀಯ ಅಹಾರ ಮತ್ತು ಸಂಸ್ಕರನೆಯ ಇಲಾಖೆಯು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಅಡಿಯಲ್ಲಿ ಇದನ್ನು ಗುರುತಿಸಲಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಗುಣಮಟ್ಟದ ಹಣ್ಣನ್ನು ದೇಶ ವಿದೇಶಗಳಲ್ಲಿ ಗುರುತಿಸ್ಪಟ್ಟಿದೆ. ಈ ಉತ್ಪನ್ನದ ಅಡಿಯಲ್ಲಿ ಅಂಚೆ ಲಕೋಟೆಯನ್ನು ಗುರುತಿಸಿದೆ ಎಂದು ತಿಳಿಸಿದರು.
ಅಂಚೆ ಇಲಾಖೆಯ ರಾಜು ಅವರು ಮಾತನಾಡಿ ಟಮೊಟೋ ಚಿತ್ರದ ಅಂಚೆ ಲಕೋಟೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶೀಸಲಾಗುವುದು ಅಂಚೆ ಚೀಟಿ ಸಂಗ್ರಹಾಕಾರರು ಸುಮಾರು ೭ ಸಾವಿರ ಮಂದಿ . ಇದೇ ಲಕೋಟೆ ಮುಂದಿನ ದಿನಗಳಲ್ಲಿ ಸುಮಾರು ೫ ಸಾವಿರ ರೂ ಮೌಲ್ಯದ್ದಾಗಿರುತ್ತದೆ ಎಂದು ಹೇಳಿದರು,
ಕಾರ್ಯಕ್ರಮದಲ್ಲಿ ಅಂಚಿ ಇಲಾಖೆಯ ಭಾಗೀರಥಿ.ಶ್ರೀನಾಥ್, ಸೋಮಶೇಖರ್ ಮುಂತಾದವರು ಉಪಸ್ಥಿತರಿದ್ದರು