ವಿಶೇಷ ಚೇತನ ಮಕ್ಕಳ ದಿನಾಚರಣೆ

ಬೀದರ:ಜ.2: ನಗರದ ಜನವಾಡಾ ರಸ್ತೆಯ ನೀರಿನ ಟಾಕಿ ಹತ್ತಿರ ಶ್ರೀ ವಿಜಯದೇವಿ ಫೌಂಡೇಶನ್ ಅಧೀನದಲ್ಲಿ ನಡೆಯುತ್ತಿರುವ ಉಟಗೆ ನಿರೊ ಮತ್ತು ಸೈಕ್ರ್ಯಾಟಿಸ್ಟ್ ಕೇಂದ್ರದ ವತಿಯಿಂದ ವಿಶೇಷ ಚೇತನ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಜಗದೀಶ ಕೆ. ಅಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೀದರ ರವರು ಕೇಕ್ ಕತ್ತರಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಧುನಿಕ ಯುಗದಲ್ಲಿ ವಿಶೇಷ ಚೇತನ ಮಕ್ಕಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಇದೊಂದು ಮಾದರಿಯಾಗಿದೆ, ಇದರ ಉಪಯೋಗವು ಸಾರ್ವಜನಿಕರು ಪಡೆಯಬೇಕೆಂದು ಕರೆ ನೀಡಿದರು. ಅಧ್ಯಕ್ಷತೆಯನ್ನು ಡಾ. ಅಭಿಜೀತ ಎಸ್. ಪಾಟೀಲ ಮನೋವೈದ್ಯರು ಪ್ರತಿಯೊಂದು ಸಾಮಾಜಿಕ, ಮಾನಸಿಕ, ದೈಹಿಕ, ನ್ಯೂನ್ಯತೆಗೆ ಒಳಪಡದಂತೆ ಪಾಲಕ ಹಾಗೂ ಪೋಷಕರು ಮುಂಜಾಗೃತಾ ಕ್ರಮಾನುಗುಣವಾಗಿ ಸಂಬಂಧಪಟ್ಟ ವೈದ್ಯಕೀಯ ತಪಾಸಣೆಯ ಜೊತೆಗೆ ಮಗುವಿನ ಭವಿಷ್ಯತ್ತಿಗೆ ಜೀವನ ಹಾಗೂ ಆರೋಗ್ಯ ವೃದ್ಧಿಸಲು ಸಲಹೆ ನೀಡಿದರು.

ಕಾರ್ಯಕ್ರಮದ ಅತಿಥಿಗಳಾಗಿ ಡಾ. ಚಿನ್ಮಯ ಎ. ಪಾಟೀಲ ರವರು ಪ್ರತಿಯೊಂದು ಮಗು ತನ್ನ ಮಾತನಾಡುವುದು, ದೈಹಿಕ ನ್ಯೂನ್ಯತೆ ಭದ್ರವಾಗಿ ನೇರೂರಲು ಪಾಲಕ ಮತ್ತು ಪೋಷಕರು ತುರ್ತು ಅನುಗುಣವಾಗಿ ಮಗು ಯಾವುದೇ ಅಂಗ ವೈಫಲ್ಯಗೆ ಒಳಪಟ್ಟರೆ ಸಂಬಂಧಪಟ್ಟ ವೈದ್ಯಕೀಯ ತಪಾಸಣೆ ಜೊತೆಗೆ ತುರ್ತು ಚಿಕಿತ್ಸೆ ಪಡೆಯಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಡಾ. ಅರ್ಚನಾ ಕುಲಕರ್ಣಿ ಫಿಜಿಯೊ ಥೆರಾಪಿಸ್ಟ್, ಡಾ. ವೇಂಕಟರಮಣ ಪಾಟೀಲ ಐಡಿಯೊಲೊಜಿಸ್ಟ್ ಸ್ಪೀಚ್ ಥೆರಾಪಿಸ್ಟ್, ಉಮಾಕಾಂತ ಸ್ಪೇಷಲ್ ಎಜುಕೇಟರ್, ಸಂಗಮೇಶ ಬಿರಾದಾರ, ರಾಘವ ಶೆಟ್ಟಿ, ದೀಪಕ, ಪ್ರಶಾಂತ, ವಿರೇಶ, ರಮೇಶ, ಅಶ್ವಿನಿ, ನೇಹಾ ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.