ವಿಶೇಷ ಚೇತನರ ಬಾಳಿಗೆ ಬೆಳಕಾಗಿ. ಅರ್ಥಪೂರ್ಣ ದೀಪಾವಳಿ ಆಚರಿಸಿದ ಶಾಸಕ ಲಕ್ಷ್ಮಣ ಸವದಿ,

ಅಥಣಿ : ವಿಶೇಷ ಚೇತನರಲ್ಲಿ ಸಾಕಷ್ಟು ಪ್ರತಿಭೆ ಅಡಗಿರುತ್ತದೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಅವರಿಗೆ ಪ್ರೀತಿ, ವಿಶ್ವಾಸ ಪೆÇ್ರೀತ್ಸಾಹ ಹಾಗೂ ಧೈರ್ಯ ನೀಡುವುದು ಅಗತ್ಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು,
ಅವರು ತಮ್ಮ ನಿವಾಸದಲ್ಲಿ ವಿದ್ಯುತ್ ಕಂಬದ ಮೇಲಿಂದ ಬಿದ್ದು ಬೆನ್ನುಹುರಿ ಅಪಘಾತಕ್ಕೊಳಗಾದ ಬಡಚಿ ಗ್ರಾಮದ ಬಸಪ್ಪ ಹೂವಣ್ಣ ಪೂಜಾರಿ ಹಾಗೂ ಹುಟ್ಟಿನಿಂದಲೇ ವಿಶೇಷ ಚೇತನನಾದ ದೇಸಾರಹಟ್ಟಿ ಗ್ರಾಮದ ಸಚೀನ್ ಗಾಂವಕರ್ ಎನ್ನುವ ಈ ಇಬ್ಬರೂ ವಿಶೇಷ ಚೇತನ ವ್ಯಕ್ತಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ತಲಾ ಒಂದು ಲಕ್ಷ ಐದು ಸಾವಿರ ರೂ, ಬೆಲೆಬಾಳುವ ಎರಡು ನ್ಯೂಯೋಮೋಷನ್ ಬ್ಯಾಟರಿ ಚಾಲಿತ ಗಾಲಿಕುರ್ಚಿ ವಾಹನ ವಿತರಿಸಿ ಮಾತನಾಡುತ್ತಿದ್ದರು, ಬೇನ್ನು ಹುರಿ ಅಪಘಾತಕ್ಕೊಳಗಾದ ಇವರಿಬ್ಬರೂ ಜೀವನ ನಡೆಸುವುದು ಸಾಕಷ್ಟು ತೊಂದರೆಯಾಗಿತ್ತು ಇವರಿಗೆ ವಿದ್ಯುತ್ ಚಾಲಿತ ವಾಹನ ವಿತರಣೆ ಮಾಡಿದರೆ ಇವರು ಜೀವನ ಕಟ್ಟಿಕೊಳ್ಳಲು ಸಹಾಯವಾಗುತ್ತದೆ ಎಂಬ ಉದ್ದೇಶದಿಂದ ದೀಪಾವಳಿ ಹಬ್ಬದ ಪ್ರಯುಕ್ತ ಈ ವಾಹನ ವಿತರಣೆ ಮಾಡಲಾಗಿದೆ.ಇವರು ತಮ್ಮ ಜೀವನದ ಉಜ್ವಲ ಭವಿಷ್ಯದ ಜೊತೆಗೆ ಒಳ್ಳೆಯ ಬದುಕನ್ನು ಕಟ್ಟಿಕೊಂಡು ದೀಪದಂತೆ ಬೆಳಗಿ ಈ ಇಬ್ಬರೂ ಇತರರಿಗೂ ಮಾದರಿ ವ್ಯಕ್ತಿಗಳಾಗಲಿ ಎಂದು ಶುಭ ಹಾರೈಸಿದರು.
ನಮ್ಮ ತಾಲೂಕಿನಲ್ಲಾಗಲಿ ಅಥವಾ ಪಕ್ಕ ಕಾಗವಾಡದಲ್ಲಾಗಲಿ ಯಾರಾದರೂ ಬೆನ್ನು ಹುರಿ ಅಪಘಾತಕ್ಕೊಳಗಾದವರು. ಇದ್ದರೆ ನನ್ನ ಗಮನಕ್ಕೆ ತಂದರೆ ಅವರಿಗೂ ಸಹಾಯ ಮಾಡುತ್ತೇನೆ ಎಂದರು,

ನಂತರ ಕಳೆದ ವರ್ಷ ದೀಪಾವಳಿ ಹಬ್ಬದಂದು ಬ್ಯಾಟರಿ ಚಾಲಿತ ಗಾಲಿಕುರ್ಚಿ ವಾಹನ ಉಡುಗೊರೆ ಪಡೆದ ಹನುಮಂತ ಕುರುಬರ ಮಾತನಾಡಿ ಶಾಸಕ ಲಕ್ಷ್ಮಣ ಸವದಿ ಅವರ ಸೇವಾ ಮನೋಭಾವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಲಕ್ಷ್ಮಣ ಸವದಿ ಅವರು ಕಳೆದ ವರ್ಷ ದೀಪಾವಳಿ ಹಬ್ಬದ ದಿನದಂದು ನನಗೆ ತ್ರಿಚಕ್ರ ವಾಹನ ವಿತರಣೆ ಮಾಡಿದ್ದರು ಇದರಿಂದ ನನಗೆ ತುಂಬಾ ಸಹಾಯವಾಗಿದೆ ಕರ್ನಾಟಕದ ಎಲ್ಲಾ ಮತಕ್ಷೇತ್ರದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಬರುವ ಬೇನ್ನು ಹುರಿ ಅಪಘಾತದಿಂದ ಬಳಲುತ್ತಿದ್ದವರಿಗೆ ಸಹಾಯ ಮಾಡಲು ಮುಂದೆ ಬರಬೇಕು ಹಾಗೂ ಸರ್ಕಾರದಿಂದಲೇ ಬೆನ್ನುಹುರಿ ಅಪಘಾತದಿಂದ ಬಳಲುತ್ತಿರುವ ರೋಗಿಗಳಿಗೆ ಮೋಟಾರ್ ಸೈಕಲ್ ನೀಡುವಂತೆ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಅವರಿಗೆ ಮನವಿ ಮಾಡಿದರು.

ನುಡಿದಂತೆ ನಡೆದು ಈ ದೀಪಾವಳಿಯಲ್ಲಿ ಇಬ್ಬರ ದಿವ್ಯಾಂಗರ ಬಾಳಲ್ಲಿ ಬೆಳಕಾದ ಶಾಸಕ ಲಕ್ಷ್ಮಣ ಸವದಿ :-
ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿಯವರು ಕೆಲವು ತಿಂಗಳಗಳ ಹಿಂದೆ ಬಡಚಿ ಹಾಗೂ ದೇಸಾರಟ್ಟಿ ಗ್ರಾಮಗಳ ಕಾರ್ಯಕ್ರಮಕ್ಕೆ ಹೋದಾಗ ಈ ಬೆನ್ನು ಹುರಿ ಅಪಘಾತಕ್ಕೊಳಗಾದ ಅಂಗವಿಕಲರು ಸವದಿಯವರನ್ನು ಭೇಟಿಯಾಗಿ ನಮಗೆ ಮನೆಯಲ್ಲಿ ಮತ್ತು ಮನೆಯ ಹೊರಗಡೆ ಓಡಾಡಲು ತುಂಬಾ ಕಷ್ಟವಾಗುತ್ತಿದೆ ಎಂದು ತಮ್ಮ ನೋವಿನ ಅಳಲನ್ನು ತೋಡಿಕೊಂಡಿದ್ದರು. ಈ ಇಬ್ಬರು ದಿವ್ಯಾಂಗರ ಕಷ್ಟ ಮತ್ತು ನೋವನ್ನು ನೋಡಲಾಗದೇ ಕೆಲವೇ ತಿಂಗಳುಗಳಲ್ಲಿ ತಮಗೆ ಏನನ್ನಾದರೂ ವ್ಯವಸ್ಥೆ ಕಲ್ಪಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಅವರು ನುಡಿದಂತೆ ನಡೆದು ತಮಿಳುನಾಡಿನ ಚೆನ್ನೈಯಲ್ಲಿ ತಯಾರಿಸಲ್ಪಡುವ ಒಂದು ಲಕ್ಷ ಐದು ಸಾವಿರದ ಬೆಲೆಬಾಳುವ ನ್ಯೂಯೋಮೋಷನ್ ಬ್ಯಾಟರಿ ಚಾಲಿತ ಗಾಲಿಕುರ್ಚಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ 2 ಲಕ್ಷ 10 ಸಾವಿರ ರೂಪಾಯಿ ವೆಚ್ಚದಲ್ಲಿ ಎರಡು ವಿದ್ಯುತ್ ಚಾಲಿತ ತ್ರಿಚಕ್ರ ಸೈಕಲ್ ಮೋಟಾರ್ ವಾಹನಗಳನ್ನು ದೀಪಾವಳಿ ಹಬ್ಬದಂದು ವಿತರಣೆ ಮಾಡಿ ಸಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿ ಕೊಟ್ಟಿದ್ದಾರೆ.

ಕ್ಷೇತ್ರದ ಜನರ ಮೆಚ್ಚುಗೆ :-
ಕಳೆದ ಎರಡು ವರ್ಷಗಳಿಂದ ದೀಪಾವಳಿ ಹಬ್ಬದ ಪ್ರಯುಕ್ತ ದಿವ್ಯಾಂಗರ ಪಾಲಿಗೆ ಸತತ ಬೆಳಕು ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿ ಬಡವರ ಪಾಲಿನ ಆಶಾಕಿರಣವಾಗಿರುವ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಸುರೇಶ ಮಾಯಣ್ಣವರ, ಪುರಸಭೆ ಸದಸ್ಯರಾದ ರಾಜು ಗುಡೊಡಗಿ, ಕಲ್ಲೇಶ ಮಡ್ಡಿ, ಆಸೀಫ್ ತಾಂಬೋಳಿ, ಪ್ರದೀಪ ನಂದಗಾಂವ, ಶಿವರುದ್ರ ಘೊಳಪ್ಪನವರ, ಮುಂತಾದವರು ಉಪಸ್ಥಿತರಿದ್ದರು.