
ಸಂಜೆವಾಣಿ ವಾರ್ತೆ
ಕುರುಗೋಡು:ಏ.22: ವಿಶೇಷ ಚೇತನರನ್ನು ಮಾಸಾಶನಕ್ಕೆ ಮಾತ್ರ ಸೀಮಿತಗೊಳಿಸದೇ, ಅವರ ಸರ್ವತೋಮುಖ ಅಭಿರುದ್ಧಿಗಾಗಿ ಮತ್ತು ಆರ್ಥಿಕವಾಗಿ ಸದೃಢಗೊಳ್ಳಲು ತಾಲೂಕಿನ ಎಲ್ಲಾ ಗ್ರಾಂ.ಪಂ ವತಿಯಿಂದ ನರೇಗಾ ಯೋಜನೆಯಲ್ಲಿ ವಿಶೇಷ ಚೇತನರಿಗೆ ಕೆಲಸ ಕೊಟ್ಟು ಸ್ವಾವಲಂಬನೆಯ ದಾರಿ ತೋರಿದ್ದಾರೆ.
ವಿಕಲಚೇತನರು ತಮ್ಮಲ್ಲಿರುವ ಕೀಳರಿಮೆ ದೂರ ಮಾಡಿಕೊಂಡು. ಸರಕಾರದ ಸವಲತ್ತುಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗುತ್ತಿದ್ದಾರೆ.
ದೈಹಿಕ ನ್ಯೂನ್ಯತೆಗಳಿಂದ ಎದುರಾಗುವ ವಿಕಲತೆಯನ್ನು ದೇವರ ಶಾಪ ಎಂದು ತಿಳಿದುಕೊಳ್ಳದೆ. ವಿಕಲತೆ ದೇಹಕ್ಕೆ ಹೊರತು ಮನಸ್ಸಿಗಲ್ಲ ಎಂದು ತಿಳಿದುಕೊಂಡು ತಮ್ಮ ಜೀವನ ರೂಪಿಸಿಕೊಳ್ಳತ್ತಿದ್ದಾರೆ.
ವಿಶೇಷ ಚೇತನರಿಗಾಗಿ ಇರುವ ಸಂಪನ್ಮೂಲ ಸದ್ಬಳಕೆಯಾಗಲು ಆಯಾಯ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ವಿಶೇಷ ಚೇತನರನ್ನು ಎಲ್ಲರಂತೆ ಮುಖ್ಯ ವಾಹಿನಿಗೆ ತರಲು ಶ್ರಮ ವಹಿಸುತ್ತಿದ್ದಾರೆ.
@12bc = ಮತದಾನ ಜಾಗೃತಿ:
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ 10 ರಂದು ನಡೆಯುವ ಮತದಾನ ದಿನದಂದು ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಸ್ಥಳೀಯ ಗ್ರಾಮ ಪಂಚಾಯತಿಗಳಿಂದ ನರೇಗಾ ಯೋಜನೆಯ ಕೆಲಸದಲ್ಲಿ ತೊಡಗಿಸಿಕೊಂಡ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ.