ವಿಶೇಷ ಚೇತನರಿಂದ ಮತದಾನ ಜಾಗೃತಿ ಅಭಿಯಾನ

ಹರಪನಹಳ್ಳಿ. ಏ.೧೪: ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಸ್ವೀಪ್ ಸಮಿತಿ ವಿಜಯನಗರ, ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ ತಾಲ್ಲೂಕು ಸ್ವೀಪ್ ಸಮಿತಿ ಹರಪನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನರಿಂದ ತ್ರಿಚಕ್ರ ವಾಹನದ ಮೂಲಕ ಮತದಾನ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು ಈ ಅಭಿಯಾನವನ್ನು ಟಿ.ವಿ.ಪ್ರಕಾಶ್ ಉಪವಿಭಾಗಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು ಚಾಲನೆ ನೀಡಿದರು, ನಂತರ ಐ.ಬಿ ಸರ್ಕಲ್ ನಿಂದ ಸಾರಿಗೆ ಬಸ್ ನಿಲ್ದಾಣ ಮೂಲಕ ಕೊಟ್ಟೂರು ರಸ್ತೆ ಬೈಪಾಸ್ ರಸ್ತೆ ವರೆಗೆ ಮೆರವಣಿಗೆ ಮೂಲಕ ತೆರಳಿ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಲಾಯಿತು ಕಾರ್ಯನಿರ್ವಾಹಕ ಅಧಿಕಾರಿಗಳು ಕೆ.ಆರ್. ಪ್ರಕಾಶ್, ತಹಶೀಲ್ದಾರ್ ಮತ್ತು ಸಹಾಯಕ ಚುನಾವಣಾಧಿಕಾರಿಗಳು ಶಿವಕುಮಾರ್ ಬಿರಾದಾರ ಮುಖ್ಯಾಧಿಕಾರಿಗಳು ಎರಗುಡಿ ಶಿವಕುಮಾರ್, ಎಂ.ಆರ್ ಡಬ್ಲ್ಯೂ ಆರ್. ಧನರಾಜ್ ವಿಕಲಚೇತನರ ಸಂಘ ಸಂಸ್ಥೆಗಳು ವಿ.ಆರ್ ಡಬ್ಲ್ಯೂ ಯು.ಆರ್ .ಡಬ್ಲ್ಯೂ ವಿಕಲಚೇತನರು ಇತರರು ಭಾಗವಹಿಸಿದ್ದರು