ವಿಶೇಷ ಗೋಪೂಜೆ: ಸಂತತಿ ಸಂರಕ್ಷಣೆಗೆ ಅಂಡಗಿ ಮನವಿ

ಕಲಬುರಗಿ.ನ.19: ಸಗಣಿ, ಸೋಮೂತ್ರ, ತೊಗರಿ ಹೊಟ್ಟು ಖರೀದಿಸದಿ, ಗೋವು, ಜಾನುವಾರುಗಳ ಸಂತತಿಯನ್ನು ಸರ್ಕಾರ ರಕ್ಷಿಸಬೇಕು ಎಂದು ವಚನೋತ್ಸವ ಯುವ ಪ್ರತಿಷ್ಠಾನದ ಅಧ್ಯಕ್ಷ, ಕರ್ನಾಟಕ ಕೃಷಿಕ ಸಮಾಜದ ಸದಸ್ಯರೂ ಆದ ನ್ಯಾಯವಾದಿ ಶಿವರಾಜ್ ಅಂಡಗಿ ಅವರು ಒತ್ತಾಯಿಸಿದ್ದಾರೆ.
ದೀಪಾವಳಿ ಹಬ್ಬದ ನಿಮಿತ್ಯ ನಗರದ ಕೋರಂಟಿ ಹನುಮಾನ್ ದೇವಸ್ಥಾನದಲ್ಲಿರುವ ಗೋಶಾಲೆಗೆ ಭೇಟಿ ನೀಡಿ, ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬೆಳೆದ ಭತ್ತಕ್ಕೆ ಬೆಲೆಯಲ್ಲ, ಅಕ್ಕಿಯಾದ ದಲ್ಲಾಳಿಗೆ ಲಗಾಮುಯಿಲ್ಲಾ ಎನ್ನುವಂತೆ ಆಗಿದೆ ರೈತನ ಪರಿಸ್ಥಿತಿ ಉದಾ: ಒಂದು ಕ್ವಿಂಟಾಲ್ ಭತ್ತ ಮಿಲ ಮಾಡಿದರೆ 60 ಕೆ.ಜಿ ಅಕ್ಕಿ ಸಿಗುತ್ತದೆ. ಇದರ ಜೊತೆ ನುಚ್ಚಕ್ಕಿ ಮತ್ತು ತೌಡು ಮಿಲ್‍ನವರಿಗೆ ಲಭಿಸುತ್ತದೆ. ಆ ತೌಡು ಮಾರಾಟ ಮಾಡಿ ಬಹುತೇಕ ಮಿಲ್‍ನ ಖರ್ಚನ್ನು ಸರಿದೂಗಿಸುತ್ತದೆ. ಹೀಗಾಗಿ ಬೆಳೆಗಾರನಿಗೆ ಮೂರಾಣಿ ವ್ಯಾಪಾರಿಗೆ ಆರಾಣೆ ಎನ್ನುವಂತಾಗಿದೆ. ರೈತರ ಪರಿಸ್ಥಿತಿ ಎಂದು ಕಳವಳ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ವಿಶೇಷವಾಗಿ ತೊಗರಿ ಕಣಜ ಎಂದೇ ಪ್ರಖ್ಯಾತಿ ಪಡೆದ ಈ ನೆಲದಲ್ಲಿ ಭತ್ತದಿಂದ ಬರುವ ತೌಡಿಗೆ ಬೆಲೆಯಿದೆ ಆದರೆ ತೊಗರಿ ಬರುವ ಹೊಟ್ಟಿಗೆ ಕಮ್ಮತ್ತೇ ಇಲ್ಲ ಆ ಹೊಟ್ಟು ಅಲ್ಲೆ ಕೊಳೆತು ಹಾಳಾಗುತ್ತದೆ. ಹಾಗಾಗಿ ಸರಕಾರ ತೊಗರಿ, ಕಡಲೆ ಹೊಟ್ಟು ಕಳಕಿ, ಹಾಗೂ ಅನೇಕ ಔಷದ ಗುಣಗಳಿಂದ ಕೂಡಿದ ಗೊಮೂತ್ರ ಅವುಗಳನ್ನು ಸರ್ಕಾರದ ಬೆಂಬಲ ಬೆಲೆಗೆ ಖರೀದಿಸಿದರೆ ಹೈನುಗಾರಿಕೆ ಹಾಗೂ ಜಾನುವಾರಗಳ ಸಂತತ್ತಿ ಉಳಿಸಲು, ಬೆಳೆಸಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೀಪಾವಳಿ ಹಬ್ಬದಲ್ಲಿ ಆಕಳು, ಎತ್ತು, ಎಮ್ಮೆಗಳ ರೈತನ ಜೀವಾಳ ವರ್ಷ ಇಡೀ ಕೃಷಿ ಚಟುವಟಿಕೆಗಳ ಅನ್ನದಾತನಿಗೆ ಹಾಲು, ಬಣ್ಣೆ, ತುಪ್ಪ ಸೇರಿದಂತೆ ಇತರೆ ಜೀವನಾವಶ್ಯಕ ಪದಾರ್ಥಗಳನ್ನು ಒದಗಿಸುವ ಅವುಗಳ ಋಣವನ್ನು ತೀರಿಸಬೇಕೆಂಬ ಉದ್ದೇಶದಿಂದ ಅವುಗಳು ಆರೋಗ್ಯದಿಂದ ಬಾಳಲಿ ಹಾಗು ಪಶು ಸಂತತಿ ಹೆಚ್ಚಿಸಲಿ ಎಂದು ಅವುಗಳಿಗೆ ಪೂಜಿಸಿ ಅಕ್ಕಿ, ಬೆಲ್ಲ ಉಣಿಸುವುದು ಸಂಪ್ರದಾಯವನ್ನು ಪರಿಪಾಲಿಸಲು ವಿಶೇಷ ಗೋಪೂಜೆ ಕೈಗೊಂಡಿರುವುದಾಗಿ ಅವರು ಹೇಳಿದರು.