ವಿಶೇಷ ಕೋವಿಡ್ ಕೇಂದ್ರ ಆರಂಭಕ್ಕೆ ಸವದಿ ಮನವಿ

ಬೆಂಗಳೂರು,ಮೇ ೧೮- ರಾಜ್ಯದಲ್ಲೂ ಡಿಆರ್‌ಡಿಓ ವತಿಯಿಂದ ವಿಶೇಷ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸುವಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕೇಂದ್ರದ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರಿಗೆ ಪತ್ರ ಬರೆದಿರುವ ಲಕ್ಷ್ಮಣ ಸವದಿ ಅವರು ದೆಹಲಿ, ವಾರಣಸಿ, ಅಹಮದಾಬಾದ್ ಮತ್ತು ಲಖನೌ ನಗರಗಳಲ್ಲಿ ಡಿಆರ್‌ಡಿಓ ವತಿಯಿಂದ ವಿಶೇಷ ಕೋವಿಡ್‌ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿರುವುದಕ್ಕೆ ಧನ್ಯವಾದ, ಅದೇ ಮಾದರಿಂiiಲ್ಲೂ ರಾಜ್ಯದಲ್ಲೂ ಚಿಕಿತ್ಸಾ ಕೇಂದ್ರ ಆರಂಭಿಸುವಂತೆ ಕೋರಿದ್ದಾರೆ.
ಪ್ರಸ್ತುತ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಅಧಿಕವಾಗಿದೆ. ಹಾಗಾಗಿ ಕರ್ನಾಟಕದಲ್ಲೂ ಡಿಆರ್‌ಡಿಓ ವತಿಯಿಂದ ಸುಸಜ್ಜಿತ
ಕೋವಿಡ್ ಚಿಕಿತ್ಸಾ ಕೇಂದ್ರ ಆರಂಭಿಸುವುದು ಸೂಕ್ತ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಕೇಂದ್ರದ ರಕ್ಷಣಾ ಇಲಾಖೆಗೆ ಸೇರಿದ ಖಾಲಿ ಸ್ಥಳಗಳಿದ್ದು, ಇದನ್ನು ಬಳಕೆ ಮಾಡಿಕೊಂಡು ಕೋವಿಡ್ ಕೇಂದ್ರ ಆರಂಭಿಸಿದರೆ ಸಾಕಷ್ಟು ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.