ವಿಶೇಷ ಕೈಮಗ್ಗ ಮೇಳ ಮುಕ್ತಾಯಗ್ರಾಹಕರಿಂದ ಉತ್ತಮ ಸ್ಪಂದನೆ: ವಿರೂಪಾಕ್ಷಪ್ಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.16: ನಗರದಲ್ಲಿ 15 ದಿನಗಳ ಕಾಲ ಇಲ್ಲಿನ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ.  ಕೈ ಮಗ್ಗ ವಸ್ತ್ರಗಳ ರಾಜ್ಯ ಮಟ್ಟದ ವಿಶೇಷ ಮೇಳದಲ್ಲಿ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆಂದು ಕಾವೇರಿ ಹ್ಯಾಂಡ್ ಲೂಮ್ ನಿರ್ದೇಶಕ ಎನ್.ವಿರೂಪಾಕ್ಷಪ್ಪ ಹೇಳಿದ್ದಾರೆ.
ಅವರು ನಿನ್ನೆ  ಮೇಳದಲ್ಲಿ ಭಾಗವಹಿಸಿದ್ದ ನೇಕಾರರಿಗೆ ನೆನಪಿನ‌ಕಾಣಿಕೆ ನೀಡಿ ಮಾತನಾಡುತ್ತಿದ್ದರು.  ಕೊವಿಡ್ ನಂತರ ಇಂತಹ ವಸ್ತು ಪ್ರದರ್ಶನ  ಮಾಡಿರಲಿಲ್ಲ
ಭಾರತ  ಸರ್ಕಾರದ ನೆರವಿನಿಂದ ಈ ವರ್ಷ ಬೆಂಗಳೂರು ಮೈಸೂರಿನಲ್ಲಿ ಪ್ರದರ್ಶನ ನಡೆಸಿತ್ತು. ಈಗ ಬಳ್ಳಾರಿಯಲ್ಲಿ ನಡೆಯಿತು.  ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಿತಿದೆ‌. ಆರು ತಿಂಗಳಿಗೆ ಒಮ್ಮೆ ಇಂತಹ ಪ್ರದರ್ಶನ ಮಾಡಬೇಕಿದೆ ಮತ್ತು ಜಿಲ್ಲಾ ಮಟ್ಟದ ಪ್ರದರ್ಶನ ಮಾಡುವ ಚಿಂತನೆ ಇದೆ ಎಂದರು.
ಭಾರತ ಸರ್ಕಾರದ ಜವಳಿ ಸಚಿವಾಲಯದಿಂದ  ಹಮ್ಮಿಕೊಂಡಿದ್ದ ಈ ಮೇಳದಲ್ಲಿ  ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ಕಾಶ್ಮೀರ, ಪಶ್ಚಿಮ‌ ಬಂಗಾಳ, ಆಂದ್ರ ಪ್ರದೇಶ,   ಮೊದಲಾದ ರಾಜ್ಯಗಳಿಂದ 60 ಮಳಿಗೆಗಳಲ್ಲಿ ಕೈ ಮಗ್ಗದಿಂದ ನೇಯ್ದ ಹತ್ತಿ, ರೇಷ್ಮೆಯ  ವಸ್ತ್ರಗಳು, ಗುಡಾರ, ಖನಾಥ, ಶಾಲು ಸೀರೆ ಮೊದಲಾದವುಗಳ ಮಾರಾಟ ನಡೆಯಿತು.
ರಾಜ್ಯದ ಇಲಕಲ್ಲು, ಮೊಳಕಾಲ್ಮುರು ಸೀರೆ, ತೆಕ್ಕಲಕೋಟೆಯ ಗುಡಾರ, ಹಾವೇರಿಯ ತುಮ್ಮೇನಗಟ್ಟಿಯ ಶರ್ಟ್, ಸಂಡೂರು ಕರ ಕುಸಲ ಕೇಂದ್ರದ ಬಿದಿರಿನ ವಸ್ತುಗಳು, ಜಮ್ಮ ಕಾಶ್ಮೀರದ ಉಣ್ಣೆ ಶಾಲುಗಳು ಗ್ರಾಹಕರ  ಗಮನ ಸೆಳೆದವು.
ನೇರವಾಗಿ ನೇಕಾರರಿಂದ ಮಾರಾಟದ ವ್ಯವಸ್ಥೆ ಇದೆ.  ಜೊತೆಗೆ ರಾಜ್ಯ ಸರ್ಕಾರದಿಂದ ಶೇ 20 ರಷ್ಟು ರಿಯಾಯಿತಿ ನೀಡಿದ್ದರಿಂದ ಸಂಕ್ರಾಂತಿ ಹಬ್ಬದ ವೇಳೆ ಉತ್ತಮ ವ್ಯಾಪಾರವಾಗಿದೆ. ಇಲ್ಲಿವರೆಗೆ ಒಂದು ಕೋಟಿ ರೂಗೂ ಹೆಚ್ಚು ವಹಿವಾಟು ನಡೆದಿದೆ. ಇದು ನೇಕರರ ಮುಖದಲ್ಲಿ ಸಂತಸ ಮೂಡಿಸಿದೆ.
ಮೇಳದಲ್ಲಿಭಾಗವಹಿಸಿ  ಸಂಜೆವಾಣಿಯೊಂದಿಗೆ  ಮಾತನಾಡಿದ ಹಾವೇರಿ ಜಿಲ್ಲೆ ತುಮ್ಮೇನಗಟ್ಟಿ ಗ್ರಾಮದ ನೇಕಾರ ಅಪ್ಪಣ್ಣ ಪದ್ಮಜ, ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. ನಿರೀಕ್ಷೆಗೂ ಮೀರಿ ವಹಿವಾಟು ಆಗಿದೆಂದರು
ಕೈಮಗ್ಗ ಇಲಾಖೆಯ ಉಪ ನಿರ್ದೇಶಕ ವಿಠ್ಠಲ್, ಕೈಮಗ್ಗದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆಗಾಗಿ ಈ ವಿಶೇಷ ಮೇಳ ಆಯೋಜಿಸಿದೆ.  ನೇಕಾರರಿಂದ ನೇರವಾಗಿ ಗ್ರಾಹಕರಿಗೆ ರಿಯಾಯಾತಿಯಲ್ಲಿ ನೀಡುತ್ತಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆಂದರು.
ಬಳ್ಳಾರಿ ಜಿಲ್ಲೆ ತೆಕ್ಕಲಕೋಟೆಯ ಗುಡಾರ ತಯಾರಕ ದಾದಾವಲಿ ನಾಮ್ಮ‌ಸೊಸೈಟಿಯಲ್ಲಿ ಎಂಟು ಮಗ್ಗಗಳಿವೆ ಹತ್ತು ಜನರು ದುಡಿಯುತ್ತಿದ್ದೇವೆ. ಯಾವುದೇ ಜಿಲ್ಲೆಯ ವಸ್ತುಪ್ರದರ್ಶನಗಳಲ್ಲಿ‌ ಭಾಗವಹಿಸುತ್ತೇ ನಮ್ಮ‌ಗುಡಾರಗಳಿಗೂ ಬೇಡಿಕೆ ತಗ್ಗಿಲ್ಲ ಎಂದರು.
ಒಟ್ಟಾರೆ 15 ದಿನಗಳ ಕಾಲ ನಡೆದ ಈ ಪ್ರದರ್ಶನ‌ ಮತ್ತು ಮಾರಾಟ ಮೇಳ ಅತ್ತ ನೇಕಾರರಿಗೆ ಇತ್ತ ಗ್ರಾಹಕರಿಗೆ ಸಹಕಾರಿಯಾಯ್ತು ಎಂದರೆ ತಪ್ಪಾಗಲಾರದು.

One attachment • Scanned by Gmail