ವಿಶೇಷ ಕಾರ್ಯಾಚರಣೆ ಕೈಗೊಂಡು ಟ್ರ್ಯಾಕ್ಟರ ಕಳ್ಳನನ್ನು ಬಂಧಿಸಿದ ಪೊಲೀಸರು

ಚಿಂಚೋಳಿ,ನ.17- ಚಂದಾಪೂರ ಪಟ್ಟಣದ ಬಸವನಗರ ನಿವಾಸಿ ನಾರಾಯಣ ನಾಗಯ್ಯ ಕೋಟರಕ್ಕಿ ಎಂಬುವರ ಟ್ರ್ಯಾಕ್ಟರ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಕಳ್ಳನನ್ನು ಟ್ರ್ಯಾಕ್ಟರ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಂಚೋಳಿಯಲ್ಲಿರುವ ತಮ್ಮ ಪಾಲೀಶ ಮಶೀನ ಆವರಣದಲ್ಲಿ ನಿಲ್ಲಿಸಲಾಗಿದ್ದ 6.50 ಲಕ್ಷ.ರೂ.ಗಳ ಮೌಲ್ಯದ ಟ್ರ್ಯಾಕ್ಟರ ಕಳದೆ ನ.14ರಂದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಚಿಂಚೋಳಿ ಪೊಲೀಸ ಠಾಣೆಯಲ್ಲಿ ನ.15ರಂದು ದೂರು ದಾಖಲಿಸಿದ್ದರು.
ದೂರನ್ನು ದಾಖಲಿಸಿಕೊಂಡ ಪೊಲೀಸರು, ಟ್ರ್ಯಾಕ್ಟರ ಮತ್ತು ಕಳ್ಳನನ್ನು ಬಂಧಿಸಲು ಎಸ್‍ಪಿ ಅವರ ಆದೇಶದ ಮೇರೆಗೆ ವಿಶೇಷ ತನಿಖಾ ತಂಡವನ್ನು ರಚಿಸಿಕೊಂಡು 24 ತಾಸುಗಳ ಒಳಗಾಗಿ ಕಾರ್ಯಾಚರಣೆ ಕೈಗೊಂಡ ಈ ತಂಡ ತುಮಕುಂಟಾ ಘಾಟದಲ್ಲಿನ ಕೊಳ್ಳದಗ್ನಿ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಳ್ಳತನವಾಗಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆದು, ಕಳ್ಳತನ ಮಾಡಿದ ಆರೋಪಿ ಕಾಶಿನಾಥ ಅಲಿಯಾಸ ಕಾಶಪ್ಪಾ ತಂದೆ ಸಂಗಪ್ಪಾ ಮಡಿವಾಳ (36) ಸಾ.ಕರ್ಚಖೇಡ ಎನ್ನುವವರನ್ನು ನ.16ರಂದು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಲಬುರಗಿ ಎಸ್ಪಿ, ಎಎಸ್ಪಿ ಹಾಗೂ ಚಿಂಚೋಳಿ ಡಿಎಸ್‍ಪಿ ಅವರ ಮಾರ್ಗದರ್ಶನದಲ್ಲಿ ಚಿಂಚೋಳಿ ಸಿಪಿಐ ಮಹಾಂತೇಶ ಪಾಟೀಲ, ಪಿಎಸ್‍ಐ ರಾಜಶೇಖರ, ಸಿಬ್ಬಂದಿಗಳಾದ ಶಿವರಾಜ ಮಿರಿಯಾಣ, ಈಶ್ವರ ಮಿರಿಯಾಣ, ನಾಗರಾಜ ಚಿಂಚೋಳಿ ಅವರನ್ನೊಳಗೊಂಡ ಈ ತಂಡ ಟ್ರ್ಯಾಕ್ಟರ ಕಳ್ಳನನ್ನು ಬಂಧಿಸಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.