ವಿಶೇಷ ಕಾರ್‍ಯಪಡೆ ಕಾರ್ಯಾಚರಣೆ ೨,೫೦೦ಕೋಟಿ ಡ್ರಗ್ಸ್ ಜಪ್ತಿ

ನವದೆಹಲಿ, ಫೆ.೨೧-ಪುಣೆ ಹಾಗೂ ದೆಹಲಿಯಲ್ಲಿ ಏಕಕಾಲದಲ್ಲಿ ವಿಶೇಷ ಕಾರ್ಯಪಡೆಯ ಪೊಲೀಸರು ಬೃಹತ್ ಕಾರ್ಯಾಚರಣೆ ಕೈಗೊಂಡು ೨,೫೦೦ ಕೋಟಿ ಗೂ ಹೆಚ್ಚು ಮೌಲ್ಯದ ೧,೧೦೦ ಕೆಜಿ ಮಾದಕವಸ್ತುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆ ವೇಳೆ ವೈಭವ್ ಅಲಿಯಾಸ್ ಪಿಂತ್ಯ ಭರತ್ ಮಾನೆ, ಅಜಯ್ ಅಮರನಾಥ್ ಕೊರ್ಸಿಯಾ ಮತ್ತು ಹೈದರ್ ಶೇಖ್ ಸೇರಿ ಮೂವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ.
ಇದೇ ವೇಳೆ ಮಿಯಾಂವ್ ಮಿಯಾಂವ್ ನಶೆ ಎಂದೇ ಕುಖ್ಯಾತವಾಗಿರುವ ಈ ನಿಷೇಧಿತ ಮೆಫಡ್ರೋನ್ ಡ್ರಗ್ ಜಾಲವನ್ನು ಪುಣೆ ಬಂಧಿಸಲಾಗಿದೆ.
ಬಂಧಿತೆ ತೀವ್ರ ವಿಚಾರಣೆ ನಡೆಸಿದ ನಿಷೇಧಿತ ಡ್ರಗ್ ೭೦೦ ಕೆಜಿ ಮೆಫೆಡ್ರೋನ್ ವಶಪಡಿಸಿಕೊಳ್ಳಲಾಗಿದ್ದು, ಬಂಧಿತರ ವಿಚಾರಣೆಯ ಬಳಿಕ ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿನ ಗೋಡೌನ್‌ಗಳಿಂದ ಹೆಚ್ಚುವರಿ ೪೦೦ ಕೆಜಿ ಸಿಂಥೆಟಿಕ್ ಉತ್ತೇಜಕವನ್ನು ವಶಪಡಿಸಿಕೊಳ್ಳಲಾಗಿದೆ.
೧೦೦ ಕೋಟಿ ರೂ. ಮೌಲ್ಯದ ಡ್ರಗ್ಸ್ ಉಪ್ಪಿನ ಪ್ಯಾಕೆಟ್‌ನಲ್ಲಿತ್ತು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ . ಪುಣೆಯಲ್ಲಿ ವಿಶೇಷವಾಗಿ ಕುರ್ಕುಂಭ್ ಎಂಐಡಿಸಿ ಪ್ರದೇಶದಲ್ಲಿ ಸಂಗ್ರಹಿಸಲಾಗಿತ್ತು. ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪೊಲೀಸರು ಐದು ವ್ಯಕ್ತಿಗಳನ್ನು ಬಂಧಿಸಿದ್ದಾರೆ, ಇದರಲ್ಲಿ ಮೂವರು ಕೊರಿಯರ್ ಬಾಯ್ ಗಳು ಮತ್ತು ಇಬ್ಬರು ವಿಚಾರಣೆಯಲ್ಲಿದ್ದಾರೆ.
ಕಾರ್ಯಾಚರಣೆ ಸಂಬಂಧಿಸಿದಂತೆ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಕುಮಾರ್ ಮೂರು ದಿನಗಳ ಹಿಂದೆ ಮೂವರನ್ನು ಬಂಧಿಸಲಾಗಿದ್ದು, ಅವರಿಂದ ೩.೮೫ ಕೋಟಿ ಮೌಲ್ಯದ ಸುಮಾರು ೧.೭೫ ಕೆಜಿ ಮೆಫೆಡ್ರೋನ್ (ಎಂಡಿ) ವಶಪಡಿಸಿಕೊಳ್ಳಲಾಗಿದೆ. ತನಿಖೆಯ ಸಮಯದಲ್ಲಿ ನಾವು ಎರಡು ಗೋದಾಮುಗಳನ್ನು ಕಂಡುಕೊಂಡಿದ್ದೇವೆ, ಅಲ್ಲಿ ಇನ್ನೂ ೫೫ ಕೆಜಿ ಎಂಡಿ ಕಂಡುಬಂದಿದೆ. ಮೂವರ ವಿಚಾರಣೆಯಿಂದ ದೊರೆತ ಮಾಹಿತಿ ಆಧರಿಸಿ ಕುರ್ಕುಂಭ್ ಎಂಐಡಿಸಿ ಪ್ರದೇಶದಲ್ಲಿ ಮತ್ತೊಂದು ಕಾರ್ಯಾಚರಣೆ ನಡೆಸಿ ಅಲ್ಲಿನ ಘಟಕದಿಂದ ಸುಮಾರು ೫೫೦ ಕೆ.ಜಿ ಎಂ.ಡಿ. ವಶಪಡಿಸಿಕೊಳ್ಳಲಾಗಿದೆ.
ಇದುವರೆಗೆ ಸುಮಾರು ೧೧೦೦ ಕೋಟಿ ರೂಪ ಮೌಲ್ಯದ ೬೦೦ ಕೆಜಿಗೂ ಹೆಚ್ಚು ಮೆಫೆಡ್ರೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ವಿದೇಶಿ ವ್ಯಕ್ತಿಯೊಬ್ಬ ಮಾರಾಟ ಮಾಡಲು ನೀಡಿದ್ದ ಎಂದು ಒಬ್ಬರು ಬಾಯ್ಬಿಟ್ಟಿದ್ದಾರೆ. ಸ್ಥಳದಲ್ಲಿ ೫೨ ಕೆಜಿ ಮೆಫೆಡ್ರೋನ್ ಮಾದಕ ದ್ರವ್ಯ, ಸೆಂಕ್ ಬ್ಯಾಗ್, ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.