ವಿಶೇಷ ಕಾರ್ತಿಕೋತ್ಸವ


ಶಿರಹಟ್ಟಿ,ಡಿ6: ತಾಲೂಕಿನ ಶ್ರೀಮಂತಗಡದ ಆದಿಶಕ್ತಿ ಶ್ರೀ ಹೊಳಲಮ್ಮದೇವಿಗೆ ಕಾರ್ತಿಕಮಾಸದ ಕೊನೆ ಮಂಗಳವಾರದಂದು ಕಮೀಟಿಯ ಸದಸ್ಯರಿಂದ ಕಾರ್ತಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಅಂದು ಬೆಳಿಗ್ಗೆ 6 ಗಂಟೆಗೆ ವಿಶೇಷವಾದ ಅಭಿಷೇಕ ಮತ್ತು ಪೂಜೆಯನ್ನು ಕೈಗೊಳ್ಳಲಾಗುವುದು.
ಸಾಯಂಕಾಲ 6 ಗಂಟೆಗೆ ದೇವಸ್ಥಾನದ ಬಳಿ ದೀಪ ಹಚ್ಚುವ ಕಾರ್ಯಕ್ರಮ ಜರುಗುವುದು. ನಂತರ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಜರುಗುವುದು ಎಂದು ಕಮೀಟಿಯ ಅಧ್ಯಕ್ಷ ವಿಠೋಭ ಕಾಶಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.