ವಿಶೇಷ ಕಂದಾಯ ವಸೂಲಾತಿ ಆಂದೋಲನ 

ದಾವಣಗೆರೆ.ಜ.೧೨ : ನಗರದ ಹಳೇ ಪೇಟೆಯ ದುರ್ಗಾಂಭಿಕ ದೇವಸ್ಥಾನ ಬಳಿಯ ಶ್ರೀ ವೀರಭದ್ರೇಶ್ವರ ಸ್ವಾಮಿ ರಂಗಮAಟಪದ ಅವರಣದಲ್ಲಿ ಮಹಾನಗರ ಪಾಲಿಕೆ ವತಿಯಿಂದ ವಿಶೇಷ ಕಂದಾಯ ವಸೂಲಾತಿ ಆಂದೋಲನಾ ಹಾಗೂ ಇ –ಅಸ್ತಿ ಕಾಲೋಚಿತಗೊಳಿಸಲು ಮತ್ತು ಕೆ.ಎಂ.ಎಫ್ -24 ಅಪ್‌ಡೇಷನ್ ಮಾಡುವ ಕಾರ್ಯಕ್ರಮ ವಾರ್ಡ್ 06 ಮತ್ತು 10 ರಲ್ಲಿ ನಡೆಯಿತು. ವಲಯ ಕಚೇರಿ 01 ರ ವಲಯ ಆಯುಕ್ತರಾದ ಎಂ.ಜಿ.ಸವಿತಾ, ಕಂದಾಯ ಅಧಿಕಾರಿ ಎನ್ ನಾಗರತ್ನಮ್ಮ ಮತ್ತು ಕಂದಾಯ ಪರಿವೀಕ್ಷಕರಾದ ಹೆಚ್.ಸಿ ಪ್ರಕಾಶ್, ಹೆಚ್.ಕೆ.ಚಂದ್ರಕುಮಾರ, ಯಮುನೇಶ್ ಬಿ. ಷಣ್ಮುಖಪ್ಪ ಕೆ, ಟಿ. ಕಲ್ಲೇಶ್, ಸಿಬ್ಬಂದಿ ಸುನಿಲ್ ಕುಮಾರ್ ಇದ್ದರು.