ವಿಶೇಷ ಉಪನ್ಯಾಸ

ಧಾರವಾಡ,ಜು24: ಶ್ರೀ ಮಹದೇವಪ್ಪ ಬಸಲಿಂಗಪ್ಪ ಹಳ್ಳಿ ಪ್ರಥಮ್ ದರ್ಜೆ ಕಾಲೇಜು, ಅಣ್ಣಿಗೇರಿ ಯಲ್ಲಿ, ಮಾಧ್ಯಮ ಮತ್ತು ಸಾಮಾಜಿಕ ಮಾದ್ಯಮಗಳ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಅರುಣ್ ಹೂಗಾರ್, ವಿದ್ಯಾರ್ಥಿಗಳಿಗೆ ಮಾಧ್ಯಮಗ ಬೆಳವಣಿಗೆ ಮತ್ತು ಸಮಾಜ ಕಟ್ಟುವಲ್ಲಿ ಅವುಗಳ ಪಾತ್ರದ ಬಗ್ಗೆ ಸವಿಸ್ತರವಾಗಿ ತಿಳಿಸಿಕೊಟ್ಟರು.
ರಾಜೇಶ್ ಮಣ್ಣನವರ್ ಸಾಮಾಜಿಕ ಮಾದ್ಯಮವು ಪೂರಕ ಮತ್ತು ಮಾರಕ ವಾಗಿದ್ದು,ಇದನ್ನು ಜವಾಬ್ದಾರಿ ಮತ್ತು ಜಾಗರೂಕತೆಯಿಂದ ಬಳಸಬೇಕು ಎಂದರು. ಕಾರ್ಯಕ್ರಮವನ್ನು ಆಯೋಜಿಸಿದ್ದ, ಇಂಗ್ಲಿಷ್ ವಿಭಾಗದ ಮುಖ್ಯ್ಥರಾಗಿದ್ದ ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ ರವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶ್ರೀಧರ ಲೊಣಕರ್, ಗ್ರಂಥಪಾಲಕರು ಮತ್ತು ಶ್ರೀಮತಿ ಭಾರತಿ ಮಣ್ಣುರ ರವರು ಮಾಧ್ಯಮ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಡಾ. ಮೋತಿಲಾಲ್ ರಾಥೋಡ್, ಪ್ರಾಂಶುಪಾಲರು ಅಧ್ಯಕ್ಷೀಯ ಭಾಷಣ ಮಾಡಿದರು. ಕುಮಾರಿ ರಿಯಾನ, ವಂದನಾರ್ಪಣೆ ಮಾಡಿದರು. ಅಭಿಷೇಕ್ ಮರಡ್ಡಿ, ನಿರೂಪಿಸಿದರು.