ವಿಶೇಷ ಅನುದಾನ ಕಲ್ಪಿಸಲು ಮನವಿ

ಲಕ್ಷ್ಮೇಶ್ವರ, ನ 23: ಗದಗ ಜಿಲ್ಲೆಯಲ್ಲಿ ವಿಶೇಷವಾದ ಶಿಲ್ಪಕಲೆಗೆ ಹೆಸರಾದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಧಾರ್ಮಿಕ ದತ್ತಿ ಇಲಾಖೆ ಸೇರಿ ಸಂಬಂಧಪಟ್ಟ ಇತರೇ ಇಲಾಖೆಗಳಿಂದ ವಿಶೇಷ ಅನುದಾನ ಕಲ್ಪಿಸಬೇಕು ಎಂದು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ ಶ್ರೀ ಸೋಮೇಶ್ವರ ದೇವಸ್ಥಾನವು ಐತಿಹಾಸಿಕ ಪ್ರಸಿದ್ಧ ಪ್ರಾಚೀನ ದೇವಾಲಯವಾಗಿದೆ. ದೇವಸ್ಥಾನಕ್ಕೆ ನಿತ್ಯ ರಾಜ್ಯಾದ್ಯಂತ ಅಪಾರ ಭಕ್ತರು, ಶಾಲಾ ವಿದ್ಯಾರ್ಥಿಗಳು ಬರುತ್ತಾರೆ. ಬರುವ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದಲ್ಲಿ ಅನೇಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ದೇವಸ್ಥಾನದ ಶಿಥಿಲಗೊಂಡ ಉತ್ತರದ್ವಾರ ಬಾಗಿಲ ಜೀರ್ಣೋದ್ಧಾರ, ನವರಂಗ ದುರಸ್ಥಿ, ಯಾತ್ರಿ ನಿವಾಸ, ಶುದ್ಧ ಕುಡಿಯುವ ನೀರಿನ ಘಟಕ, ಕಂಪೌಂಡ ಗೋಡೆ ನಿರ್ಮಾಣ ಮಾಡಬೇಕು ಹಾಗೂ ದೇವಸ್ಥಾನವನ್ನು ಪ್ರವಾಸಿ ತಾಣವೆಂದು ಘೋಷಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ಕಲ್ಪಿಸುವುದು ಮತ್ತು ಅಭಿವೃದ್ಧಿಗಾಗಿ ಸಹಾಯ-ಸಹಕಾರ ನೀಡಬೇಕು ಕೋರಲಾಯಿತು.
ಈ ವೇಳೆ ಟ್ರಸ್ಟ್‍ನ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಸುರೇಶ ರಾಚನಾಯ್ಕರ, ನೀಲಪ್ಪ ಕರ್ಜೆಕಣ್ಣವರ, ನೀಲಪ್ಪ ಕನವಳ್ಳಿ, ಮಲ್ಲೇಶಪ್ಪ ಕಣವಿ, ಶಿವಪ್ಪ ಡಂಬಳ, ಶೇಖಪ್ಪ ಹುರಕಡ್ಲಿ ಇದ್ದರು.