ವಿಶೇಷ ಅಧಿಕಾರಿ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

ಹೊಸಪೇಟೆ(ವಿಜಯನಗರ),ಸೆ.18 : ಹೊಸಪೇಟೆಯ ವಿಶೇಷ ಅಧಿಕಾರಿ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ವಿಶೇಷ ಅಧಿಕಾರಿ ಅನಿರುದ್ಧ ಶ್ರವಣ್ ಅವರು ಶುಕ್ರವಾರ ಧ್ವಜಾರೋಹಣ ನೇರವೇರಿಸಿದರು.
ನಂತರ ಮಾತನಾಡಿದ ಅವರು ಎಲ್ಲರಿಗೂ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಶುಭಾಷಯಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ತಹಶಿಲ್ದಾರ್ ವಿಶ್ವನಾಥ, ಗ್ರೇಡ್-2 ತಹಶಿಲ್ದಾರ್ ಮೇಘನಾ ಮತ್ತು ವಿಶೇಷ ಅಧಿಕಾರಿ ಕಚೇರಿಯ ಸಿಬ್ಬಂದಿ ವರ್ಗದವರು ಇದ್ದರು.