ವಿಶೇಷ ಅಗತ್ಯವುಳ್ಳ ಮಕ್ಕಳ ಕಾಳಜಿ ಹೆಚ್ಚಲಿ : ತಹಶೀಲ್ದಾರ ಸುರೇಶ ಮುಂಜೆ

ಅಥಣಿ :ನ.22: ವಿಶೇಷ ಅಗತ್ಯವುಳ್ಳ ಮಕ್ಕಳಿಗೂ ಎಲ್ಲರಂತೆ ಬದುಕನ್ನು ಕಟ್ಟಿಕೊಳ್ಳಲು ಪೆÇೀಷಕರು ಹಾಗೂ ಶಿಕ್ಷಕರು ಸಹಕಾರ ಹಾಗೂ ಸಮರ್ಥ ಆರೈಕೆ ಮಾಡಬೇಕು ಎಂದು ತಹಶೀಲ್ದಾರ ಸುರೇಶ ಮುಂಜೆ ಅವರು ತಿಳಿಸಿದರು.

ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಥಣಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಅಥಣಿ ಹಾಗೂ ಆರೋಗ್ಯ ಇಲಾಖೆ ಅಥಣಿ ಇವರ ಸಂಯುಕ್ತಾಶ್ರಯದಲ್ಲಿ ಅಥಣಿ ಗ್ರಾಮೀಣ ಭಾಗದ ಸಂಕ್ಕೋನಟ್ಟಿಯ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ತಾಲೂಕಾ ಮಟ್ಟದ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು, ಅವರು ಮುಂದೆ ಮಾತನಾಡುತ್ತಾ
ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಮಾನವೀಯತೆಯಿಂದ ಕಾಣಬೇಕು. ಅವರ ಬೌದ್ಧಿಕ ಮಟ್ಟ ಸುಧಾರಣೆಗಾಗಿ ಶಿಕ್ಷಣ ಇಲಾಖೆಯಲ್ಲಿ ಸಮನ್ವಯ ಕೇಂದ್ರವನ್ನು ಆರಂಭಿಸಲಾಗಿದೆ. ವಿಕಲಚೇತನ ಮಕ್ಕಳ ಆರೋಗ್ಯ ತಪಾಷಣೆಗಾಗಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆಯಡಿ ಎಲ್ಲ ತರಹದ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ತಾಲೂಕಿನ ವಿಶೇಷ ಅಗತ್ಯವುಳ್ಳ ಮಕ್ಕಳ ಪಾಲಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ತಾಲೂಕಿನಲ್ಲಿ 769 ಮಕ್ಕಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳು ಎಂದು ಗುರುತಿಸಲಾಗಿದೆ, 18 ವರ್ಷ ಮೇಲ್ಪಟ್ಟ ಎಲ್ಲ ವಿಶೇಷ ಚೇತನರಿಗೆ ಕಂದಾಯ ಇಲಾಖೆಯಿಂದ ಪ್ರತಿ ತಿಂಗಳು ಮಾಶಾಸನ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಅವರು ಮಾತನಾಡಿ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಅನೇಕ ಸವಲತ್ತು ಒದಗಿಸಿದೆ. ಇದನ್ನು ಬಳಸಿಕೊಳ್ಳುವಲ್ಲಿ ಪೆÇೀಷಕರು ಹೆಚ್ಚು ಗಮನ ಹರಿಸಬೇಕು ಶಿಕ್ಷಣಕ್ಕೆ ಬೇಕಾಗುವ ಎಲ್ಲಾ ಪರಿಕರಗಳನ್ನು ನೀಡುವುದರ ಜೊತೆಗೆ ಉಚಿತ ವೈದ್ಯಕೀಯ ಸೌಲಭ್ಯ ಹಾಗೂ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸೌಲಭ್ಯವನ್ನು ನೀಡಿರುವುದರಿಂದ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಶಿಬಿರದಲ್ಲಿ ಆಲಿಮ್‍ಕೋ ಸಂಸ್ಥೆ, ಮನೋವಿಕಾಸ ಸಂಸ್ಥೆ ಹುಬ್ಬಳ್ಳಿ, ಹಾಗೂ ಆರೋಗ್ಯ ಇಲಾಖೆ ಅಥಣಿ ಇವರು ವಿಶೇಷ ಅಗತ್ಯವುಳ್ಳ ಮಕ್ಕಳ ತಪಾಸಣೆಯಲ್ಲಿ ಭಾಗವಹಿಸಿದ್ದರು,
ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಕರಿಬಸಪ್ಪಗೋಳ, ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಗೌಡಪ್ಪ ಖೋತ, ಪ್ರವೀಣ ಪಾಟೀಲ, ವೈದ್ಯರಾದ ಡಾ. ಸಿ. ಟಿ ಮೈತ್ರಿ, ಡಾ, ದಬಾಡೆ, ಸುರೇಶ ಪಾಟೀಲ, ಎ ಸಿಡಿಪಿಓ ರೇಣುಕಾ ಹೊಸಮನಿ, ಜೆ. ಎಮ್ ಹಿರೇಮಠ, ಎಸ್. ಪಿ ಸನದಿ, ಎನ್. ಎಮ್ ಬಿರಾದಾರ, ಎನ್. ಎಮ್ ಹಿರೇಮಠ, ಬಿ.ಎಚ್ ಮಾಲಗಾರ, ಐ. ಎಸ್ ಹಂಪ್ಪಣ್ಣವರ, ಮೇಲ್ಗಡೆ ಸರ್, ರಾಮಣ್ಣ ಧರಿಗೌಡ, ಸುರೇಶ ವಾಲಿಕರ, ವಿಶ್ವನಾಥ ಮೋರೆ, ಶಿಕ್ಷಣ ಇಲಾಖೆಯ ಸಂಪನ್ಮೂಲ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಗೌಡಪ್ಪ ಖೋತ ಸ್ವಾಗತಿಸಿದರು. ಎ. ಎಚ್ ಮುಜಾವರ ಕಾರ್ಯಕ್ರಮ ನಿರೂಪಿಸಿದರು. ವಿ.ಎ. ಮಾಳಿ ವಂದಿಸಿದರು.