ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಹಂಪಿಗೆ ಭೇಟಿ

ಹೊಸಪೇಟೆ ಏ3: ವಿಜಯನಗರ ನೂತನ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ವಿಶ್ವವಿಖ್ಯಾತ ಹಂಪಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿರೂಪಾಕ್ಷೇಶ್ವರದ ದೇಗುಲದ ದರ್ಶನ ಪಡೆದು, ಅವರು, ಕಡಲೆಕಾಳು ಮತ್ತು ಸಾಸಿವೆಕಾಳು ಗಣಪತಿ, ಉಗ್ರನರಸಿಂಹ, ಕಮಲಮಹಲ್ ಸೇರಿ ಇತರೆ ಸ್ಮಾಕರಗಳನ್ನು ವೀಕ್ಷಣೆ ಮಾಡಿ, ನಂತರ ಬ್ಯಾಟರಿ ವಾಹನಗಳಲ್ಲಿ ವಿಜಯವಿಠ್ಠಲ ದೇಗುಲ ವೀಕ್ಷಣೆ ಮಾಡಿ, ನಂತರ ಹಳೆ ಬ್ಯಾಟರಿ ವಾಹನಗಳನ್ನು ಪರಿಶೀಲಿಸಿದರು. ಸ್ಮಾರಕಗಳ ಜಿರ್ಣೋಧಾರ ಸೇರಿ ಇತರೆ ಅಭಿವೃದ್ಧಿಯ ಕುರಿತು ಅಧಿಕಾರಿಗಳೊಂದಿಗೆ ಕೆಲ ಕಾಲ ಚರ್ಚಿಸಿದರು. ಹಂಪಿ ಅಭಿವೃದ್ಧಿ ಪ್ರಾಧಿಕಾರಿದ ಆಯುಕ್ತ ಸಿದ್ದರಾಮೇಶ್ವರ ಸೇರಿದಂತೆ ಹಿರಿಯ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.