ವಿಶೇಷಚೇತನರು ಅನುದಾನ ಸದ್ಬಳಕೆ ಮಾಡಿಕೊಳ್ಳಿ

ಸಿರವಾರ.ನಂ೯- ವಿಶೇಷಚೇತನರ ಶ್ರೇಯೋಬಿವೃದ್ದಿಗಾಗಿ ಪಂಚಾಯತಿಯಲ್ಲಿ ಶೇ೩% ಅನುದಾನ ಮಿಸಲಿರುತ್ತದೆ ಅದನ್ನು ಈಗಾಗಲೇ ಯಾವುದೇ ಸೌಲಭ್ಯ ಪಡೆದು ಕೊಳ್ಳದ ವಿಕಲಚೇತನರು ಬಳಸಿಕೊಳ್ಳಬೇಕು ಎಂದು ಪ.ಪಂಚಾಯತಿಯ ಉಪಾದ್ಯಕ್ಷ ಚನ್ನಬಸವ ಗಡ್ಲ ಅವರು ಹೇಳಿದರು.
ಪಟ್ಟಣ ಪಂಚಾಯತಿಯಲ್ಲಿ ಇಂದು ಬೆಳಗ್ಗೆ ವಿಶೇಷಚೇತನರು ನೂತನ ಅಧ್ಯಕ್ಷ-ಉಪಾದ್ಯಕ್ಷರಿಗೆ ಹಮ್ಮಿಕೊಂಡಿದ ಸನ್ಮಾನವನ್ನು ಸ್ವಿಕರಿಸಿ ಮಾತನಾಡಿದ ಅವರು ವಿಶೇಷಚೇತನರು ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದವರು ಅನೇಕರು ಇದ್ದಾರೆ ಅಂತವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು. ಕೆಲವರಿಗೆ ಸರ್ಕಾರ, ಜನಪ್ರತಿನಿಧಿಗಳು ಸಹಾಯ, ಸಹಕಾರ ಮಾಡಿರುತ್ತಾರೆ. ಆದರೆ ಇನ್ನೂ ಅನೇಕರ ಎಲೆ ಮರೆಕಾಯಿಯಂತೆ ಇದ್ದಾರೆ. ಗ್ರಾಮಾಂತರ ಪ್ರಧೇಶದಲ್ಲಿ ಅನೇಕ ವಿಶೇಷಚೇತನರಿಗೆ ಸರ್ಕಾರಿ ಸೌಲಭ್ಯಗಳು ತಲುಪಿರುವುದಿಲ್ಲ. ಅಂತವರನ್ನು ಗುರುತಿಸಿ, ಗ್ರಾ.ಪಂ ಪ.ಪಂ, ತಾ.ಪಂ ಗಳಲ್ಲಿ ವಿಶೇಷಚೇತನರಿಗೆ ಇರುವ ಅನುದಾನವನ್ನು ಬಳಕೆ ಮಾಡಿಸಿ ಸಮಾಜದ ಮುಖ್ಯವಾಹಿನಿಗೆ ಬನ್ನಿ. ಕಡಿಮೆ ಪ್ರಮಾಣದಲ್ಲಿ ಅಂಗವೈಕಲ್ಯ ಇರುವವರು, ಸರ್ಕಾರಿ ಕಚೇರಿಗಳಿಗೆ ಓಡಾಡುತ್ತಿರುವ ಪ್ರತಿಭಾವಂತರು ಇತ್ತರರಿಗೆ ತಿಳಿ ಹೇಳಬೇಕು ಎಂದರು.
ಪ.ಪಂ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ,ಅಧ್ಯಕ್ಷೆಯ ಪತಿ ಗುರುನಾಥರೇಡ್ಡಿ ಮಾತನಾಡಿದರು. ಸದಸ್ಯರಾದ ಚನ್ನಬಸವಗಡ್ಲ, ಖಾಸಿಂಮೋತಿ,ರಾಜಮಹ್ಮದ್, ಮುಖಂಡರಾದ ಮಲ್ಲಪ್ಪ, ಮಾರ್ಕಪ್ಪ, ಎನ್.ಮಲ್ಲಪ್ಪ, ವಿಕಲಚೇತನರ ಸಂಘದ ಅಧ್ಯಕ್ಷ ನರಸಪ್ಪ ಟೈಲರ್, ಉಪಾದ್ಯಕ್ಷ ನಾಗರಾಜ ಜಾಗಟಗಲ್, ಪ್ರ.ಕಾ ಮಾಲಾನ್, ನಂದಕುಮಾರ, ದುರುಗಮ್ಮ, ಮೌಲಾಸಾಬ, ರಾಜಾ, ಮೌನೇಶ, ಮಿನಾಕ್ಷಿ, ಮಾರ್ಥಮ್ಮ, ಶಿವಕುಮಾರ ಸುರೇಂದ್ರ ಸೇರಿದಂತೆ ಇನ್ನಿತರರು.

೯ ಸಿರವಾರ ೩ ಸಿರವಾರ ಪ.ಪಂ ಉಪಾದ್ಯಕ್ಷರಿಗೆ ವಿಕಲಚೇತನರಿಂದ ಸನ್ಮಾನಿಸಲಾಯಿತು.