ವಿಶೇಷಚೇತನರಿಗೆ ತಾಯಂದಿರ ಸ್ಪೂರ್ತಿ ಅವಶ್ಯ

ಕಲಘಟಗಿ,ಡಿ 20:ವಿಶೇಷ ಚೇತನ ಮಕ್ಕಳಿಗೆ ಸತತವಾಗಿ ತಾಯಂದಿರು ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳನ್ನು ನೀಡುವುದರ ಮೂಲಕ ಈ ಮಕ್ಕಳಲ್ಲಿ ಸಾಮಾನ್ಯ ಬದಲಾವಣೆಯನ್ನು ಮಾಡಬಹುದು ಎಂದು ತಾಲೂಕಾ ವೈದ್ಯಾಧಿಕಾರಿಗಳಾದ ಡಾ|| ಬಿ ಎನ್ ಬಾಸೂರ ಕರೆ ನೀಡಿದರು.
ಕಲಘಟಗಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಶೇಷ ಚೇತನ ಮಕ್ಕಳ ಫಿಜಿಯೋಥೆರಫಿ ಉದ್ಘಾಟನೆ ನೆರವೇರಿಸಿ ಮಾತನಾಡಿ ಮೆದುಳಿನ ನರಗಳ ದೌರ್ಬಲ್ಯದಿಂದ ಈ ರೀತಿಯ ವಿಕಲತೇಯನ್ನು ಹೊಂದಿರುತ್ತಾರೆ. ಇದು ಹೆತ್ತ ತಾಯಂದಿರಿಂದ ವಿಶೇಷ ಚೇತನ ಮಕ್ಕಳಿಗೆ ಮಮತೆ, ಅವರೊಂದಿಗೆ ಉತ್ತಮ ಒಡನಾಟದಿಂದ ಅವರಲ್ಲಿ ಮನೋಸ್ಥೈರ್ಯ ತುಂಬುವ ಮೂಲಕ ಮುಂದೆ ಸಾಮಾನ್ಯ ವ್ಯಕ್ತಿಯಾಗಲು ಸಾಧ್ಯ ಎಂದು ಪಾಲಕರಿಗೆ ತಿಳುವಳಿಕೆ ನೀಡಿದರು. ವಿಶೇಷ ಚೇತನ ಮಕ್ಕಳು ಸಹ ಇತರೆ ಮಕ್ಕಳಂತೆ ಬೆಳೆಯಲು ,ವಿಕಸನ ಹೊಂದಲು ಕನಿಷ್ಠ ಪರಿಸರ ಒದಗಿಸುವುದು ಅವಶ್ಯ. ಇಂತಹ ಮಕ್ಕಳು ಯಾರಿಗೂ ಹೊರೆಯಲ್ಲ.ಬದಲಾಗಿ ಇದು ವ್ಯಕ್ತಿಗಳ ನಡುವೆ ಪ್ರೀತಿ,ಸಾಮರಸ್ಯ,ಸಮಾನತೆ,ಸ್ವಾವಲಂಬನೆ,ಸಹಬಾಳ್ವೆಯಿಂದ ಸಾಮಾನ್ಯರಂತೆ ಆಗಲು ಸರಕಾರ ಸಮನ್ವಯ ಶಿಕ್ಷಣ ಜಾರಿಗೆ ತಂದಿದೆ. ಇವರ ಸೇವೆಗೆ ನಾವು ನೀವು ಸದಾಸಿದ್ದರಾಗೊಣ ಎಂದರು.
ಮುಖ್ಯಅಥಿತಿಯಾಗಿ ಡಾ|| ಸತ್ಯನಾರಾಯಣ ಸಿರಿಗಿರಿ ಮಾತನಾಡಿ ಮಕ್ಕಳಿಗೆ ಸತತವಾಗಿ ಸ್ವಚ್ಛತೆ ಮತ್ತು ಫಿಜಿಯೋಥೆರಫಿ (ವ್ಯಾಯಾಮ) ಮಾಡಿಸುವುದರ ಮೂಲಕ ಇಂತಹ ಮಕ್ಕಳನ್ನು ಸಾಮಾಜದ ಮುಖ್ಯವಾಹಿನಿಗೆ ತರಬಹುದು ಎಂದು ತಿಳಿಸಿದರು. ಅಂಗವಿಕಲತೆಯನ್ನು ಹೊಂದಿರುವಂತಹ ಇಂತಹ ಮಗುವನ್ನು ತರಗತಿಯಲ್ಲಿ ಶಾಲೆಯಿಂದ ಹೊರಹಾಕದೆ, ಈ ಮಗುವಿನ ತಾಯಿಯು ಎದೆಗುಂದದೆ ಸಾಮಾನ್ಯ ಶಾಲೆಯಲ್ಲಿ ಸಾಮಾನ್ಯ ಭವಿಷ್ಯವನ್ನು ರೂಪಿಸಲು ಸತತ ಪರಿಶ್ರಮಪಡೊಣಾ ಎಂದು ಕರೆ ನೀಡಿದರು.ಇಂದು ಮಕ್ಕಳ ವೈದ್ಯಕೀಯ ಪರಿಕ್ಷೆ ಮಾಡಲಾಗಿದೆ. ಅವರ ಸೇವೆ ದೇವರ ಸೇವೆ ಎಂದರು.
ಪಾಂಡುರಂಗ ಎಸ್ ಪೂಜೇರಿ ಬಿ.ಆರ್.ಪಿ(ಪ್ರೌಢ) ಕಲಘಟಗಿ ಇವರು ಮಾತನಾಡುತ್ತಾ ವಿಶೇಷ ಚೇತನ ಮಕ್ಕಳು ದೇವರ ಮಕ್ಕಳೆಂದು ಹೇಳಿದರು. ಇವರಿಗೆ ತಂದೆ ತಾಯಂದಿರು ಸತತ ಪರಿಶ್ರಮ ಪಟ್ಟು ಸರಿಯಾದ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕೆಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ ಕೆ ಎಫ್ ಅಧ್ಯಕ್ಷತೆ ವಹಿಸಿದರು. ಎ ಬಿ ಬೆಟಗೇರಿ,ಎನ್ ಎ ದೇವಿಹೊಸೂರ,ಜಿ ಬಿ ಉಪರಿ,ಬಿ ಆಯ್ ಹೊಸಮನಿ, ದೀಪಾ ಹೊಕ್ರಾಣಿ,ಪರಶುರಾಮ ಯಳವತ್ತಿ ಉಪಸ್ಥಿತರಿದ್ದರು.