ವಿಶಿಷ್ಟವಾಗಿ ಹರಕೆ ತೀರಿಕೆ


ನವಲಗುಂದ,ಮೇ.3: ದೇವರಿಗೆ ನಾನಾ ರೂಪದಲ್ಲಿ ಹರಕೆ ಕಟ್ಟಿಕೊಳ್ಳುವುದು ಕಾಮನ್. ಆದ್ರೆ ಇಲ್ಲೊಬ್ಬ ಯುವಕ ಎರಡು ಅಡಿ 2 ಇಂಚು ಎತ್ತರ ಕಟ್ಟಿಗೆ ಕಾಲಿಗೆ ಕಟ್ಟಿಕೊಂಡು 45 ಕಿಮೀ ಪ್ರಯಾಣ ಬೆಳೆಸಿ ತನ್ನ ಹರಕೆಯನ್ನು ತೀರಿಸುತ್ತಿರುವುದು ವಿಶೇಷ.
ಹೌದು ಪಟ್ಟಣದ ಪಕ್ಕೀರಪ್ಪ ಗುರಪ್ಪ ಗಡ್ಡಿ ಎಂಬ ಯುವಕ ಪ್ರತಿ ತಿಂಗಳು ನವಲಗುಂದ ದಿಂದ 45 ಕೀಮಿ ನಡೆದುಕೊಂಡು ಹೋಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶ್ರೀಕ್ಷೇತ್ರ ರೇಣುಕಾದೇವಿ ಯಲ್ಲಮ್ಮ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆದು ವಾಪಾಸ್ ಆಗುತ್ತಿದ್ದ ಆದರೆ ಈ ಬಾರಿ ಕಾಲಿಗೆ ಎರಡು ಅಡಿ 2 ಇಂಚಿನ ಕಟ್ಟಿಗೆಯ ಮರಗಾಲನ ಕಟ್ಟಿಕೊಂಡು ಚಕ್ಕಡಿಗೆ ಎರಡು ಎತ್ತಿನ ಬದಲಾಗಿ ಒಂದೇ ಎತ್ತನ್ನು ಹೊಡಿಕೊಂಡು ಹೋಗಿ ಹರಕೆ ತೀರಿಸುತ್ತಿದ್ದಾನೆ.
ಈತ ಸಿದ್ದಾಪುರ ಓಣಿಯ ಮನೆಯಿಂದ ಪ್ರಾರಂಭ ಮಾಡಿ ಪಟ್ಟಣದ ಶ್ರೀ ಜಗದ್ಗುರು ಅಜಾತ ನಾಗಲಿಂಗಸ್ವಾಮಿಗಳ ಮಠಕ್ಕೆ ಹೋಗಿ ಶ್ರೀಗಳ ಗದ್ದುಗೆ ದರ್ಶನ ಪಡೆದು ರೇಣುಕಾ ದೇವಿ ಯಲ್ಲಮ್ಮನ ದೇವಸ್ಥಾನಕ್ಕೆ ತರಳಿದರು.
ಸಾಧನೆಗೆ ಅಸಾಧ್ಯವಾದುದ್ದು ಯಾವುದೂ ಇಲ್ಲ. ಆದರೆ, ಸಾಧಿಸೋಕೆ ಛಲವೊಂದಿದ್ದರೆ ಸಾಕು, ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವುದಕ್ಕೆ ಪಕ್ಕೀರಪ್ಪ ಗಡ್ಡಿಯವರ ಸಾಧನೆ ಜನರ ಮುಂದಿದೆ.
ಶಂಕರಪ್ಪ ತೋಟದ, ಭರಮಪ್ಪ ಮರಲಕ್ಕಣ್ಣವರ, ಮಲ್ಲಪ್ಪ ಬೆಳ್ಳಿ, ಬಸಲಿಂಗಪ್ಪ ಮೂಲಂಗಿ, ಉಳಿವೆಪ್ಪ ಇಬ್ರಾಹಿಂಪುರ, ಚನ್ನಪ್ಪ ಬೆಳ್ಳಿ, ಮಂಜುನಾಥ್ ಗಡ್ಡಿ, ಲಕ್ಷ್ಮಣ ಹಳ್ಳದ, ದ್ಯಾಮಣ್ಣ ಸಾಮೋಜಿ ಸೇರಿದಂತೆ ಪಟ್ಟಣದ ಹಿರಿಯರು ಬೀಳ್ಕೊಟ್ಟರು.