ವಿಶಿಷ್ಟವಾಗಿ ಮಕ್ಕಳ ದಿನ ಆಚರಣೆ

ಶಿರಹಟ್ಟಿ, ನ15: ತಾಲೂಕಿನ ಅಲಗಿಲವಾಡ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಮಾಜಿ ಪ್ರಧಾನಿ ಜವಾಹರಲಾಲ ನೆಹರು ರವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ವಿಶಿಷ್ಟವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಂತ್ರಿ ಮಂಡಲವನ್ನು ರಚಿಸಿ ಸಂಸತ್‍ನ ಕಾರ್ಯಕಲಾಪಗಳನ್ನು ಮಕ್ಕಳಿಂದ ನೆರವೇರಿಸಿದರು. ಪ್ರಧಾನಮಂತ್ರಿಯಾಗಿ ಸಾನಿಯಾಬೇಗಂ ನದಾಫ, ಮಂತ್ರಿ ಮಂಡಲದ ಸದಸ್ಯರಾಗಿ ಶ್ಯಾಮ ದೊಡ್ಡಮನಿ, ಫಕ್ಕಿರೇಶ ಹಸವಿಮಠ, ಮಲ್ಲಿಕಾರ್ಜುನ ಮಾಯಕಾರ, ಸಾಗರ ಎ ಎಮ್., ಮಲ್ಲಿಕಾರ್ಜುನ ಬೆಳ್ಳಟ್ಟಿ, ವಿಶಾಲಾಕ್ಷಿ ಮಠಪತಿ, ಮಂಗಳಾ ಬೆಳ್ಳಟ್ಟಿ, ಸ್ವಪ್ನಾ ಟಪಾಲನವರ, ಬಾಂದಬೀ ದೊಡ್ಡಮನಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಧಾನ ಗುರುಗಳಾದ ಹಾಲೇಶ ಜಕ್ಕಲಿ ಮಾತನಾಡಿ, ಮಕ್ಕಳಿಗೆ ಸಂಸತ್‍ನಲ್ಲಿ ಜರುಗುವ ಕಾರ್ಯಕಲಾಪಗಳನ್ನು ಮನವರಿಕೆ ಮಾಡಿಕೊಡುವುದರ ಜೊತೆಗೆ ಆದರ್ಶಗಳನ್ನು ಬೆಳೆಸಿಕೊಳ್ಳಲು ಅನುಕೂಲಕಾರಿಯಾಗಲಿದೆ. ಜೊತೆಗೆ ಆಯಾ ಸ್ಥಾನದಲ್ಲಿರುವವರ ಜವಾಬ್ದಾರಿಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಈ ಎಲ್ಲ ವಿಚಾರಗಳನ್ನು ಮಕ್ಕಳು ಅರಿತುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೆಹರುರವರ (ಮಕ್ಕಳ ದಿನಾಚರಣೆ) ಜನ್ಮ ದಿನಾಚರಣೆ ಆಚರಿಸಿರುವುದು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಹೆಚ್.ರೆಡ್ಡರ, ಮಹಾದೇವಿ ಹಸವಿಮಠ, ಶಾಲಾ ಮಕ್ಕಳು ಉಪಸ್ಥಿತರಿದ್ದರು.