ವಿಶಾಲ ಹಾಗೂ ಬೃಹತ್ ಸಂವಿಧಾನ ನಮ್ಮದು – ಕೆ.ವಿ.ಮೋಹನ್ ರಾವ್


ಸಂಜೆವಾಣಿ ವಾರ್ತೆ
ಸಂಡೂರು::ನ: 16:   ಸಂವಿಧಾನ ನಮ್ಮ ದೇಶದ ಅತಿ ಪ್ರಮುಖ ಹಾಗೂ ವಿಶಾಲವಾದ ಸಂವಿಧಾನವಾಗಿದ್ದು ಅದರ ಅಡಿಯಲ್ಲಿ ನಾವೆಲ್ಲರೂ ಸಮಾನವಾಗಿ, ಸೌಖ್ಯವಾಗಿ ಸಮೃದ್ಧವಾಗಿ ಇದ್ದೇವೆ ಎಂದು ಬಿಕೆಜಿ ಗ್ಲೋಬಲ್ ಶಾಲೆಯ ಪ್ರಾಂಶುಪಾಲ ಕೆ.ವಿ.ಮೋಹನರಾವ್ ತಿಳಿಸಿದರು.
ಅವರು ಪಟ್ಟಣದ ಬಿಕೆಜಿ ಗ್ಲೋಬಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಓದು ದಿನವನ್ನು ಉದ್ದೇಶಿಸಿ ಸಂವಿಧಾನವನ್ನು ಓದುವ ಮೂಲಕ ಎಲ್ಲರಿಗೂ ಪ್ರತಿಜ್ಞೆ ಮಾಡಿಸಿ ಅದಕ್ಕೆ ಬದ್ಧರಾಗಿರುತ್ತೇವೆ, ಎಲ್ಲರೂ ಸಹ ಗೌರವಿಸಬೇಕು, ಮತ್ತು ಅದರ ಚೌಕಟ್ಟನ್ನು ಮೀರಬಾರದು, ಅದು ಎಲ್ಲಾ ಅಂಶಗಳನ್ನು ನೀಡಿದೆ ಎಂದರು.
ಈ ಸಂದರ್ಭದಲ್ಲಿ ಬಿಕೆಜಿಗ್ಲೋಬಲ್ ಶಿಕ್ಷಣ ಸಂಸ್ಥೆಯ ಪ್ರಾಥಮಿಕ, ಪ್ರೌಢ, ಕಾಲೇಜಿನ ಎಲ್ಲಾ ಶಿಕ್ಷಕವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

One attachment • Scanned by Gmail