
ರಾಯಚೂರು, ಮಾ.೦೬-ಮಹಾರಾಷ್ಟ್ರದ ಕೊಲ್ಲಾಪುರು ಜಿಲ್ಲೆಯ ವಿಶಾಲಘಡದ ದರ್ಗಾದ ಮುಖ್ಯ ದ್ವಾರವನ್ನು ಜಖಂಗೊಳಿಸಿದ
ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಎಸ್ ಡಿಪಿ ಐ ಜಿಲ್ಲಾ ಸಮತಿ ಪದಾಧಿಕಾರಿಗಳು ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ರವಾನಿಸಿದರು.
ಫೆಬ್ರವರಿ ೧೮ ರಂದು ಮಹಾರಾಷ್ಟ್ರದ ವಿಶಾಲಘಡ ದರ್ಗಾ ಪ್ರವೇಶ ದ್ವಾರದ ಮುಂದೆ ಕೆಲವು ಜನರು ಮಹಾಶಿವರಾತ್ರಿ ಪೂಜೆಯನ್ನು ನೆರವೇರಿಸಲು ಭಕ್ತರ ವೇಷದಲ್ಲಿ ಕೋಮುವಾದಿ ಸಂಘಟನೆಯ ಮುಖಂಡರು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿದ್ದರು ವಿಶಾಲಘಡ ದರ್ಗಾ ಆವರಣವೂ ಸಂಪೂರ್ಣ ಪೊಲೀಸ್ ರಕ್ಷಣೆಯೊಂದಿಗೆ ಅನುಮತಿ ನೀಡಲಾಗಿತ್ತು ಆದರೆ ಅದೇ ದಿನ ಅವರು ಮದ್ದುಗುಂಡುಗಳನ್ನು ಫಿರಂಗಿ ತಂದು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ದರ್ಗಾದ ಮುಖ್ಯ ದ್ವಾರಕ್ಕೆ ಮದ್ದು ತುಂಬಿದ ಫಿರಂಗಿ ಯಿಂದ ಹೊಡೆದು ದರ್ಗಾದ ಮುಖ್ಯದ್ವಾರವನ್ನು ಜಕಂಗೊಳಿಸಿರುವ ತೀವ್ರ ಖಂಡನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರರು. ದರ್ಗಾವನ್ನು
ಹಾನಿಮಾಡಿ ನಿರ್ದಿಷ್ಟ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗಿ ಬಿಗುವಿನ ವಾತಾವರ್ಣ ನಿರ್ಮಾಣ ಮಾಡಿ ದೇಶದ ಸೌಹಾರ್ದತೆಗೆ ಧಕ್ಕೆ ತರುವಂತಹ ಪ್ರಯತ್ನ ಮಾಡಿದ್ದಾರೆ. ಆದರೆ ಅಲ್ಲಿ ಕರ್ತವ್ಯ ದಲ್ಲಿದ್ದಂತಹ ಪೊಲೀಸ್ ಅಧಿಕಾರಿಗಳು ಮೂಕಪ್ರೇಕ್ಷಕರಂತೆ ವೀಕ್ಷಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಈ ತರಹದ ಘಟನೆಗಳು ದೇಷ್ಯಾದಂತ ನಡೆಯುತ್ತಿವೆ ಹಾಗೂ ಕಾನೂನು ಉಲ್ಲಂಘನೆ ಮಾಡುವದು ಸಾಮಾನ್ಯ ವಾಗಿದೆ. ಆದ್ದರಿಂದ ಈ ದರ್ಗಾವು ಸುಮಾರು ಎಂಟುನೂರು ವರ್ಷಗಳ ಇತಿಹಾಸ ಇರುವಂತಹ ಸಂತರ ದರ್ಗಾ ವಾಗಿದೆ ಇದರಲ್ಲಿ ಎಲ್ಲಾ ಸಮುದಾಯದ ಭಕ್ತಾದಿಗಳ ಕೇಂದ್ರ ವಾಗಿದ್ದು, ಸದರಿ ವರ್ಗದ ಮುಖ್ಯ ದ್ವಾರ ವನ್ನು ಹಾನಿ ಮಾಡಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು
ಘಟನೆಯಲ್ಲಿ ತರಬೇತಿ ಪಡೆದು ಬಳಸಲು ತಂದ ಮದ್ದು ಹಾಗೂ ಫಿರಂಗಿ ಹಿಂದಿರುವವರ ಮೇಲೆ ನಿವೃತ್ತ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲಾಲಿ ಪಾಷಾ, ಸೈಯದ್ ಇಸಾಕ್ ಹುಸೇನ್,
ಸೈಯದ್ ಇರ್ಫಾನ್, ಸೇರಿದಂತೆ ಉಪಸ್ಥಿತರಿದ್ದರು.