ವಿಶಾಲಗೆ ಪಿಎಚ್‍ಡಿ ಪದವಿ


ಧಾರವಾಡ ಜ.9- ನಗರದ ಕೆ.ಎಲ್.ಇ ಸಂಸ್ಥೆಯ ಪಿ.ಸಿ. ಜಾಬಿನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿಶಾಲ ಉ.ಕಲೇಬಾರ ಇವರು “ಫಾರ್ಮಾಕೋಲಾಜಿಕಲ್ ಇವ್ಯಾಲ್ಯುವೇಶನ್ ಆಫ್ ಸೋಲಾನಮ್ ಮ್ಯಾಕ್ರನ್‍ಥಮ್. ಡ್ಯುನಲ್ ಫ್ರುಟ್ಸ್ ಎಕ್ಸಟ್ರ್ಯಾಕ್ಟ್ಸ ಅಗೇನಸ್ಟ್ ಬ್ರೆಸ್ಟ್ ಕ್ಯಾನ್ಸರ್ ಸೆಲ್ ಲೈನ್” ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ.
ಇವರಿಗೆ ಕವಿವಿ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮ ಜೀವಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು ಡಾ.ಎಂ.ಬಿ.ಹಿರೇಮಠ ಮಾರ್ಗದರ್ಶಕರಾಗಿದ್ದರು.