ವಿವೇಚನೆಯಿಂದ ಮತ ಚಲಾಯಿಸಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.05: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಜನರು ಕಡ್ಡಾಯವಾಗಿ ಮತ್ತು ವಿವೇಚನೆಯಿಂದ ಮತ ಚಲಾಯಿಸಬೇಕೆಂದು ಜಾಗೃತ ನಾಗರಿಕರು ಇಂದು‌ ನಗರದಲ್ಲಿ  ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಲೇಖಕರಾದ ವಸುಂಧರ ಭೂಪತಿ, ಎಸ್.ಜಿ.ಸಿದ್ದರಾಮಯ್ಯ ಮೊದಲಾದವರು  ಪ್ರಜಾಪ್ರಭುತ್ವದ ಅಳಿವು ಉಳಿವಿನ ಸಂವಿಧಾನದ ಸಂರಕ್ಷಣೆಯ  ಚುನಾವಣೆಯಾಗಿದೆ ಆದರೆ ಈಗ  ದ್ವೇಷ ರಾಜಕಾರಣ ತುಂಬಿ ತುಳುಕುತ್ತಿರುವ ಈ ಹೊತ್ತಿನಲ್ಲಿ ಇವೆರಡೂ ಅಪಾಯದ ಸ್ಥಿತಿಯಲ್ಲಿವೆ.  ಬಹುತ್ತ ಭಾರತದ ಸೌಹಾರ್ದತೆಗೆ ಧಕ್ಕೆ ಒದಗಿದೆ ಸಮಾಜವನ್ನು ಧರ್ಮ.ಭಾಷೆ.ಜಾತಿಗಳ ಹೆಸರಿನಲ್ಲಿ ಒಡೆಯುವುದನ್ನು ತಡೆಗಟ್ಟುವ ಅನಿವಾರ್ಯತೆ ಇದೆ, ಆದ್ದರಿಂದಲೇ 2024 ರ ಚುನಾವಣೆ ನಮ್ಮ ದೇಶದ ಗಣತಂತ್ರ ವ್ಯವಸ್ಥೆಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಈ ಕಾರಣದಿಂದ ಮತದಾರ ಬಂದುಗಳು ಯಾವುದೇ ಭಾವನಾತ್ಮಕ ಆವೇಶಗಳಿಗೆ ಬಲಿಯಾಗದೇ ವಿವೇಕಶಾಲಿಗಳಾಗಿ ಮತ ಚಲಾಯಿಸಬೇಕೆಂದಿದ್ದಾರೆ.
ದೇಶದ ರೈತರ ಬೆನ್ನು ಮೂಳೆ ಮುರಿಯುವ ಕರಾಳ ಕೃಷಿ ಕಾನೂನು ತಂದವರು, ಅದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ ರೈತರ ಮೇಲೆ ದಬ್ಬಾಳಿಕೆ ನಡೆಸಿ ನೂರಾರು ಜನರ ಸಾವಿಗೆ ಕಾರಣರಾದವರು ಬೆಂಬಲ ಬೆಲೆ ಘೋಷಿಸಿ ಕಾನೂನು ತರುವನೆಂದು ಮಾತಿಗೆ ತಪ್ಪಿದವರು ಮತ್ತೆ ಅಧಿಕಾರಕ್ಕೆ ಬಂದರೆ ಉಣ್ಣುವ ಅನ್ನಕ್ಕೂ ತತ್ವಾರವಾದೀತಲ್ಲವೇ?
ಮಹಿಳೆಯರ ಕುರಿತು ಉದ್ದಾನುದ್ದ ಭಾಷಣ ಮಾಡಿ ಭೇಟಿ ಬಚಾವ್ ಬೇಟಿ ಪಢಾವ್ ಎಂದವರು ಮಣಿಪುರದಲ್ಲಿ ಹಾಡು ಹಗಲು ಸಾವಿರಾರು ಜನ ಮಹಿಳೆಯರನ್ನು ಬೆತ್ತಲೆಗೊಳಿಸಿ.ಲೈಂಗಿಕ ದೌರ್ಜನ್ಯ ಅತ್ಯಾಚಾರ ನಡೆಸಿ ಕೊಲೆಗೈದರೂ ಸುಮ್ಮನಿದ್ದರಲ್ಲವೇ, ಕುಸ್ತಿಪಟುಗಳು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ನ್ಯಾಯ ಕೇಳಿದರೆ ಇವರು ನಿಂತಿದ್ದು ತಮ್ಮ ಪಕ್ಷದ ಸಂಸದರ ಪರವಾಗಿಯೇ ಅಲ್ಲವೇ? ಇವನ್ನೆಲ್ಲ ಕ್ಷಮಿಸಬೇಕೇ?
ತಾನೆಂದಿಗೂ ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಸಾರಿಕೊಂಡು ಅದಿಕಾರಕ್ಕೆ ಬಂದು ಈಗ ಚುನಾವಣಾ ಬಾಂಡ್ ಹೆಸರಿನಲ್ಲಿ ಭ್ರಷ್ಟಾಚಾರವನ್ನೇ ಕಾನೂನು ಬದ್ಧಗೊಳಿಸಿ. ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಲ್ಲದೇ ಭ್ರಷ್ಟಾಚಾರಿಗಳನ್ನು ಸಾಕಲು ಹೊರಟ. ಕೋಮುವಾದವನ್ನು ಬಿತ್ತಿ ಬೆಳೆಯುತ್ತಿರುವ ಬಿ.ಜೆ.ಪಿ.ಗೆ ಮತ ಹಾಕುವುದು ಬೇಡವೇ ಬೇಡ ಎಂದರು.
ಸುದ್ದಿಗೋಷ್ಟಿಯಲ್ಲಿ , ಜಾಣಗೆರೆ ವೆಂಕಟರಾಮಯ್ಯ,  ವಿಮಲಾ ಕೆ.ಎಸ್. ಪಿ.ಆರ್.ವೆಂಕಟೇಶ್, ಪಿ.ಗಾದೆಪ್ಪ  ಸಂಗನಕಲ್ಲು ವಿಜಯಕುಮಾರ್ ಮೊದಲಾದವರು ಇದ್ದರು.