ವಿವೇಕ ಚಿಂತನೆಗಳಿದ್ದರೆ ಜೀವನದಲ್ಲಿ ಗೆದ್ದಂತೆ

ಬೀದರ್:ಫೆ.12:ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ ವತಿಯಿಂದ ಕಳೆದ ನವೆಂಬರ್ ತಿಂಗಳಲ್ಲಿ ಆಯೋಜಿಸಲಾಗಿದ್ದ ವಿವೇಕ ವಿದ್ಯಾರ್ಥಿ ಲಿಖಿತ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ರ್ಯಾಂಕ್ ಗಳಿಸಿದಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಶಿವನಗರದ ಪಾಪನಾಶ ರಸ್ತೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆ ಪರಿಸರದಲ್ಲಿ ಶನಿವಾರ ಸಂಜೆ ಜರುಗಿತು.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಹಾಗೂ ಶೈಕ್ಷಣಿಕ ಮಟ್ಟ ಸುಧಾರಣೆ ನಿಟ್ಟಿನಲ್ಲಿ 8ನೇ, 9ನೇ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶ್ರೀ ಸ್ವಾಮಿ ಪುರಷೋತ್ತಮಾನಂದ ಅವರು ಬರೆದ ವಿದ್ಯಾರ್ಥಿಗಳಿಗಾಗಿ ಮತ್ತು ವಿವೇಕಾನಂದರ ವಿದ್ಯಾರ್ಥಿ ಜೀವನ ಕಿರು ಪುಸ್ತಕಗಳನ್ನು ಆಧರಿಸಿ ವಿವೇಕ ವಿದ್ಯಾರ್ಥಿ ಪರೀಕ್ಷೆ ನಡೆಸಲಾಗಿತ್ತು. ಬೀದರ್ ಜಿಲ್ಲೆಯಲ್ಲಿ 8 ಸಾವಿರಕ್ಕೂ ಅ„ಕ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ರಾಜ್ಯದ ತುಮಕೂರು ಜಿಲ್ಲೆ ಹೊರತುಪಡಿಸಿದರೆ ಬೀದರ್ ಜಿಲ್ಲೆಯಲ್ಲಿಯೇ ಅತ್ಯ„ಕ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಮೂರೂ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ರ್ಯಾಂಕ್ ಗಳಿಸಿದಂತಹ ವಿದ್ಯಾರ್ಥಿಗಳಿಗೆ ಒಟ್ಟು 40 ಸಾವಿರ ರೂ. ನಗದು ಬಹುಮಾನ ನೀಡಿ, ಪ್ರಮಾಣಪತ್ರ ವಿತರಿಸಿ ಪೆÇ್ರೀತ್ಸಾಹಿಸಿ ಆಶೀರ್ವಚನ ನೀಡಿದ ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ಅಧ್ಯಕ್ಷರು, ಶ್ರೇಷ್ಠ ರಾಷ್ಟ್ರವಾದಿ ಚಿಂತಕ ವಾಗ್ಮಿಗಳಾದ ಪರಮಪೂಜ್ಯ ಶ್ರೀ ನಿರ್ಭಯಾನಂದ ಸರಸ್ವತಿಗಳು, ಸ್ವಾಮಿ ವಿವೇಕಾನಂದರ ಸಾಹಿತ್ಯ ಓದುವ ಮತ್ತು ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿ ಶ್ರೇಷ್ಠ ಸಾಧನೆ ಮಾಡಬಲ್ಲ. ವಿವೇಕಾನಂದರ ಚಿಂತನೆಗಳು ಸಾಮಾನ್ಯ ವ್ಯಕ್ತಿಯನ್ನು ಸಹ ಅಸಾಮಾನ್ಯನನ್ನಾಗಿ ಬದಲಿಸುವ ತಾಕತ್ತು ಹೊಂದಿವೆ. ವಿವೇಕಾನಂದರ ಆದರ್ಶ ತತ್ವಗಳು ಜಾತ್ಯತೀತ, ಧರ್ಮಾತೀತ ಹಾಗೂ ಸೀಮಾತೀತವಾಗಿವೆ. ಸಮಾಜ, ದೇಶ, ಮಾನವ ಕಲ್ಯಾಣ ಮಾತ್ರ ಹೊಂದಿರುವ ವಿವೇಕ ಚಿಂತನೆಗಳ ಪಾಲನೆಯಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರತಿಪಾದಿಸಿದರು.
ವಿವೇಕಾನಂದರ ಚಿಂತನೆ ಹೊಂದಿದ ವಿದ್ಯಾರ್ಥಿಗಳಲ್ಲಿ ಅಪರಿಮಿತ ಆತ್ಮವಿಶ್ವಾಸ ಬರುತ್ತದೆ. ಭಾರತದ ಸಂಸ್ಕøತಿ, ಪರಂಪರೆಯನ್ನು ಅರಿಯಬೇಕಾದರೆ ಮೊದಲು ವಿವೇಕಾನಂದರಿಗೆ ತಿಳಿದುಕೊಳ್ಳುವ ಅಗತ್ಯವಿದೆ. ನಾವೆಷ್ಟು ದಿನ ಬದುಕಿರುತ್ತೇವೆ ಎಂಬುದಕ್ಕಿಂತ ಸಮಾಜ, ದೇಶಕ್ಕೆ ಎಷ್ಟೊಂದು ಒಳ್ಳೆಯ ಕೆಲಸ ಮಾಡಿz್ದÉೀವೆ ಎಂಬುದು ಮುಖ್ಯ. ವಿವೇಕಾನಂದರು ಕೇವಲ 39 ವರ್ಷ ಬಾಳಿ ಜಗಕ್ಕೆ ಬೆಳಕಾದರು. ಅಂದಿನ ಅನಾನುಕೂಲ ಪರಿಸ್ಥಿತಿ ನಡುವೆಯೂ ಅವರು ಅಷ್ಟೊಂದು ಸಾಧನೆ ಮಾಡಿದ್ದಾಗ, ಎಲ್ಲ ತಂತ್ರಜ್ಞಾನ, ಸಾಧನ-ಸೌಕರ್ಯಗಳು ಸಿಗುತ್ತಿರುವಾಗ ನಾವೇಕೆ ಶ್ರೇಷ್ಠವಾದ ಸಾಧನೆ ಮಾಡಬಾರದು ಎಂಬ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿ, ಯುವಕರು ಚಿಂತನೆ ಮಾಡಬೇಕು ಎಂದು ಕರೆ ನೀಡಿದರು.
ವಿವೇಕ ಚಿಂತನೆಗಳಲ್ಲಿ ಯಾವುದೇ ಜಾತಿ, ಧರ್ಮ, ಮತ, ಪಂಥದ ಭೇದವಿಲ್ಲ. ವ್ಯಕ್ತಿ ನಿರ್ಮಾಣ ಮತ್ತು ಅದರ ಮೂಲಕ ಉತ್ತಮ ಸಮಾಜ ನಿರ್ಮಾಣವೇ ಇವುಗಳ ಏಕೈಕ ಧ್ಯೇಯ. ವಿದ್ಯಾರ್ಥಿಗಳು ವಿವೇಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧಕರಾಗಿ ಹೊರಹೊಮ್ಮಬೇಕು. ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮ ಕಳೆದ 20 ವರ್ಷಗಳಿಂದ ಇಲ್ಲಿ ವ್ಯಕ್ತಿ ನಿರ್ಮಾಣದ ನಿಟ್ಟಿನಲ್ಲಿ ನಿರಂತರ ನಡೆಸುತ್ತಿರುವ ಕಾರ್ಯಚಟುವಟಿಕೆಗಳು ಮಾದರಿಯಾಗಿವೆ. ಸಮಾಜಮುಖಿ ಸೇವೆಗಳಿಗೆ ಜನರ ಸಾಥ್ ಸಿಗಬೇಕು ಎಂದರು.

ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷರಾದ ಪೂಜ್ಯಶ್ರೀ ಸ್ವಾಮಿ ಜ್ಯೋತಿರ್ಮಯಾನಂದ ನೇತೃತ್ವ ವಹಿಸಿದ್ದರು. ಬೀದರ್ ಜಿಲ್ಲೆಯಲ್ಲಿ ವಿವೇಕ ವಿದ್ಯಾರ್ಥಿ ಪರೀಕ್ಷೆ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಹಿರಿಯ ಪತ್ರಕರ್ತ ಸದಾನಂದ ಜೋಶಿ, ಪ್ರಮುಖರಾದ ಚನ್ನಬಸವ ಹೇಡೆ, ಹಾವಗಿರಾವ ಕಳಸೆ, ಬಾಲಾಜಿ ಪವಾರ್, ಜಯಪ್ರಕಾಶ ಪೆÇದ್ದಾರ್, ಸಂತೋಷಕುಮಾರ ಪೂಜಾರಿ, ದತ್ತು ತುಪ್ಪದ, ಶರದ್ ನಾರಾಯಣಪೇಟಕರ್, ಶಾಂತಲಿಂಗ ಮಠಪತಿ, ಬಸವರಾಜ ಸೀರೆ, ಅಶೋಕ ಶೆಂಬೆಳ್ಳಿ, ಮಹಾಲಿಂಗ ಖಂಡ್ರೆ, ಮಾರುತಿ ಸಗರ್, ಸಂತೋಷ ಚಿಲ್ಲಾ ಇತರರನ್ನು ಪೂಜ್ಯರು ಸತ್ಕರಿಸಿದರು.

ಜಿಲ್ಲಾಮಟ್ಟದಲ್ಲಿ ರ್ಯಾಂಕ್ ಗಳಿಸಿದವರು
ವಿವೇಕ ವಿದ್ಯಾರ್ಥಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ರ್ಯಾಂಕ್ ಪಡೆದ 8, 9, 10ನೇ ತರಗತಿ ಮಕ್ಕಳಿಗೆ ಮೂರೂ ವಿಭಾಗದಲ್ಲಿ ಕ್ರಮವಾಗಿ 2500 ರೂ., 2,000 ಮತ್ತು 1500 ರೂ. ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. 10ನೇ ತರಗತಿಯಲ್ಲಿ ಬೀದರ್ ವಿದ್ಯಾಶ್ರೀ ಪ್ರೌಢಶಾಲೆಯ ವಿನಾಯಕ(ಪ್ರಥಮ), ಮಂಠಾಳ ಕೆಪಿಎಸ್ ಶಾಲೆಯ ಪ್ರೀತಿ ಶಿವಯ್ಯ(ದ್ವಿತೀಯ) ಹಾಗೂ ದುಬಲಗುಂಡಿ ಬಸವತೀರ್ಥ ವಿದ್ಯಾಪೀಠದ ಪ್ರಜ್ವಲ್ ಲಕ್ಷ್ಮಣ ತೃತೀಯ ಸ್ಥಾನ ಪಡೆದರು. 9ನೇ ತರಗತಿಯಲ್ಲಿ ಭಾಲ್ಕಿ ಕರಡ್ಯಾಳ ಗುರುಕುಲದ ಸ್ವಪ್ನಾ ರಾಜಕುಮಾರ(ಪ್ರಥಮ), ಸಂತಪುರ ಅನುಭವ ಮಂಟಪ ಗುರುಕುಲದ ಗಿರೀಶ್ ಬಸವರಾಜ(ದ್ವಿತೀಯ) ಮತ್ತು ಬೀದರ್ ಜನಸೇವಾ ಶಾಲೆಯ ಶ್ರೇಯಾ ತೃತೀಯ ಸ್ಥಾನ ಬಾಚಿದರು. 8ನೇ ತರಗತಿಯಲ್ಲಿ ಔರಾದ್ ಮೊರಾರ್ಜಿ ದೇಸಾಯಿ ಶಾಲೆಯ ದಿವ್ಯಾ ಬಸವರಾಜ(ಪ್ರಥಮ), ನಿಟ್ಟೂರ್ ವೀರಭದ್ರೇಶ್ವರ ಶಾಲೆಯ ರೇವಣಸಿದ್ದಯ್ಯ(ದ್ವಿತೀಯ) ಮತ್ತು ಹಳ್ಳಿಖೇಡ್ ಬಸವತೀರ್ಥ ಶಾಲೆಯ ವೆಂಕಟರೆಡ್ಡಿ ತೃತೀಯ ಪಡೆದರು. ತಾಲೂಕು ಮಟ್ಟದಲ್ಲಿ ಸಹ ಮೂರೂ ವಿಭಾಗದಲ್ಲಿನ ಮಕ್ಕಳಿಗೆ ಬಹುಮಾನ, ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು.


ವಿವೇಕ ಚಿಂತನೆಗಳು ಜಾಗತಿಕ ಮೌಲ್ಯ ಹೊಂದಿವೆ. ಭಾರತ ಮಾತ್ರವಲ್ಲ, ವಿಶ್ವದ ಯಾವುದೇ ರಾಷ್ಟ್ರದಲ್ಲಿ ಯುವಕರ ಬಗ್ಗೆ ಚಿಂತನೆ ನಡೆಯುತ್ತಿದ್ದರೆ ಅಲ್ಲಿ ಸ್ವಾಮಿ ವಿವೇಕಾನಂದರ ಸ್ಮರಣೆ ಆಗುತ್ತದೆ. ಇದು ಅವರ ಅದ್ಭುತ ವಿಚಾರಗಳಲ್ಲಿ ಇರುವ ಅಗಾಧ ಶಕ್ತಿಗೆ ನಿದರ್ಶನ. ಚಾರಿತ್ರ್ಯವಂತ ಸಾಧಕರು ಮಾತ್ರ ಇತಿಹಾಸದಲ್ಲಿ ಉಳಿಯಲು ಸಾಧ್ಯ. ವಿದ್ಯಾರ್ಥಿಗಳು ಸಂಸ್ಕಾರ, ಚಾರಿತ್ರ್ಯಕ್ಕೆ ಒತ್ತು ನೀಡಬೇಕು.
|ಪೂಜ್ಯ ಶ್ರೀ ನಿರ್ಭಯಾನಂದ ಸರಸ್ವತಿ
ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ಅಧ್ಯಕ್ಷರು,