ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಉಚಿತ ನೇತ್ರಚಿಕಿತ್ಸಾ ಶಿಬಿರ

ಕಲಬುರಗಿ:ಏ.22:ಕರುಣೇಶ್ವರ ನಗರದವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಅನುಗ್ರಹಕಣ್ಣಿನಆಸ್ಪತ್ರೆಯ ವತಿಯಿಂದಉಚಿತ ನೇತ್ರಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಣ್ಣಿನಆರೋಗ್ಯದಕುರಿತುಅರಿವು ಮೂಡಿಸುವ ನಿಟ್ಟಿನಲ್ಲಿ’ಸ್ವಸ್ಥಕಣ್ಣು ಸ್ಪಷ್ಟದೃಷ್ಟಿ’ಯೋಜನೆ ಅಡಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.ಅನುಗ್ರಹಆಸ್ಪತ್ರೆಯ ನುರಿತ ನೇತ್ರತಜ್ಞರಾದಡಾ.ದೀಪ್ತಿ ಅಯ್ಯರ್, ಡಾ.ಐಶ್ವರ್ಯಅಂಬ್ರೆಅವರನ್ನು ಒಳಗೊಂಡ 18 ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದಶಿಬಿರಾರ್ಥಿಗಳಿಗೆ ಕಣ್ಣುಗಳ ತಪಾಸಣೆಕೈಗೊಂಡರು.
ಇದೇವೇಳೆ, ನೇತ್ರತಪಾಸಣೆಗೆ ಒಳಪಟ್ಟ 230ಕ್ಕೂ ಅಧಿಕ ಶಿಬಿರಾರ್ಥಿಗಳ ಪೈಕಿ 24ಕ್ಕೂ ಹೆಚ್ಚು ಜನರಿಗೆಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆವೈದ್ಯಕೀಯಸಲಹೆ ನೀಡಲಾಯಿತು.ಮೇಲಾಗಿ, ಶಿಬಿರಾರ್ಥಿಗಳಿಗೆ ಉಚಿತವಾಗಿ ಔಷಧಗಳನ್ನು ಪೂರೈಸಲಾಯಿತು.
ಕಣ್ಣುಗಳ ರಕ್ಷಣೆಗೆಒತ್ತು ನೀಡಿ:
ಇದಕ್ಕೂ ಮುಂಚೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನೇತ್ರತಜ್ಞರಾದಡಾ.ಐಶ್ವರ್ಯಅಂಬ್ರೆ ಮಾತನಾಡಿ, ಜೀವನ ಶೈಲಿಗೂ ನೇತ್ರಗಳ ಆರೋಗ್ಯಕ್ಕೂ ನೇರ ಸಂಬಂಧವಿದೆ. ಹೀಗಾಗಿ, ಆರೋಗ್ಯಕರಜೀವನಶೈಲಿ ಅಳವಡಿಸಿಕೊಳ್ಳಲು ಒತ್ತು ನೀಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿಅವರು ಮಾತನಾಡಿ, ನಿತ್ಯ ನಿಯಮಿತಕಾಲ್ನಡಿಗೆ ಮತ್ತು ಸರಳ ವ್ಯಾಯಾಮಗಳಿಂದ ನಾವು ಮಧುಮೇಹ ಬರದಂತೆತಡೆಯಲು ಸಾಧ್ಯವಿದೆ.ಸಾಮಾನ್ಯವಾಗಿ, ಮಧುಮೇಹಿಗಳಲ್ಲಿ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಹಾಗಾಗಿ, ಆರೋಗ್ಯಕರಜೀವನಶೈಲಿಗೆಒತ್ತು ನೀಡುವುದನ್ನುಕಲಿತಾಗಸಮಗ್ರಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆಎಂದರು.
ವಿವೇಕಾನಂದ ವಿದ್ಯಾ ನಿಕೇತನಎಜುಕೇಷನಲ್‍ಟ್ರಸ್ಟ್‍ಅಧ್ಯಕ್ಷೆ ಸುವರ್ಣಾಎಸ್.ಭಗವತಿಅಧ್ಯಕ್ಷತೆ ವಹಿಸಿದ್ದರು.ಅನುಗ್ರಹಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಅನಿಲ್‍ರೆಡ್ಡಿ ಮತ್ತುಟಿ.ಎಸ್.ಡೇರೆದ್, ನೇತ್ರತಜ್ಞೆಡಾ.ದೀಪ್ತಿ ಸೇರಿದಂತೆಇತರರು ವೇದಿಕೆಯಲ್ಲಿದ್ದರು.
ಅನುಗ್ರಹಆಸ್ಪತ್ರೆಯ ಸಿಬ್ಬಂದಿ ಹಾಗೂ ವಿವಿಎನ್ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.