ವಿವೇಕಾನಂದ ಯುವ ಶಕ್ತಿ ಪ್ರತೀಕ: ಯಶಸ್ವಿ ಸೋಮಶೇಖರ್

ಮೈಸೂರು: ಜ.12:- ಸ್ವಾಮಿ ವಿವೇಕಾನಂದರು ಭಾರತದ ಯುವಶಕ್ತಿಯ ಪ್ರತೀಕ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಯಶಸ್ವಿ ಸೋಮಶೇಖರ್ ರವರು ಹೇಳಿದರು
ಯುವ ಭಾರತ್ ಸಂಘಟನೆ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಅಂಗವಾಗಿ ಯುವ ಸಪ್ತಾಹ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು, ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮೂಡ ಅಧ್ಯಕ್ಷರಾದ ಯಶಸ್ವಿ ಸೋಮಶೇಖರ್ ರವರು ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು ನಂತರ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ಭಾರತದ ಯುವ ಶಕ್ತಿಗೆ ಪ್ರೇರಣೆ ಮತ್ತು ಪ್ರತೀಕ. ಈ ಮೂಲಕ ಯುವ ಭಾರತವನ್ನು ಜಗತ್ತಿಗೆ ಪರಿಚಯಿಸಿದರು ಎಂದು ಹೇಳಿದರು,
ಇಂದಿನ ಯುವ ಸಮುದಾಯ ವಿವೇಕಾನಂದರ ವಾಣಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಉನ್ನತ ವಿದ್ಯಾಭ್ಯಾಸದ ಗುರಿ ಹೊಂದುವ ಮೂಲಕ ದೇಶದ ಕೀರ್ತಿಯನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸಬೇಕು. ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳನ್ನ ಪಾಲಿಸುವಂತೆ ಯುವಜನಾಂಗ ಮುಂದಾಗಬೇಕು ಎಂದರು
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್ ರವರು ಮಾತನಾಡಿ ಸ್ವಾಮಿ ವಿವೇಕಾನಂದರು ಜಗತ್ತಿನ ಎಲ್ಲಾ ಯುವ ಸಮುದಾಯದ ಪ್ರೇರಕ ಶಕ್ತಿ ಎಂದರು. ಶ್ಣ ವಯಸ್ಸಿನಲ್ಲೆ ವಿದ್ಯಾರ್ಥಿ ದೆಸೆಯಿಂದಲೇ ವಿವೇಕಾನಂದರ ಸಂದೇಶಗಳನ್ನ ಮೈಗೂಡಿಸಿಕೊಳ್ಳುವ ಮೂಲಕ ಅವರ ಜಯಂತಿಗೆ ಸಾರ್ಥಕತೆ ತರಬೇಕು ಎಂದರು,
ವಿಶ್ವಕ್ಕೆ ಸಹೋದರತೆಯನ್ನು ಸಾರಿದ ಮಹಾನ್ ಸನ್ಯಾಸಿ ಸ್ವಾಮಿ ವಿವೇಕಾನಂದರು. ಸರ್ವಧರ್ಮ ಸಹಿಷ್ಣುತೆಯ ಧರ್ಮ ಎಂದು ಭಾರತ ಧರ್ಮವನ್ನು ಚಿಕ್ಯಾಗೋ ಸಮ್ಮೇಳನದ ಮೂಲಕ ಜಗತ್ತಿಗೆ ಸಾರಿದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮೂಡ ಅಧ್ಯಕ್ಷರಾದ ಯಶಸ್ವಿ ಸೋಮಶೇಖರ್, ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಶಿವಕುಮಾರ್, ನಗರ ಪಾಲಿಕ ನಾಮನಿರ್ದೇಶಕರಾದ ಜಗದೀಶ್, ಅಪೂರ್ವ ಸುರೇಶ್, ಕೃಷ್ಣಕುಮಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಇಂಜಿನಿಯರ್ ಕೆ. ಶಿವರಾಜ್, ನಂದಕುಮಾರ್, ಹೆಚ್.ಆರ್ ರಾಘವೇಂದ್ರ, ನಿರೂಪಕರಾದ ಅಜಯ್ ಶಾಸ್ತ್ರಿ,ಯುವ ಭಾರತ್ ಸಂಘಟನೆಯ ಸಂಚಾಲಕರಾದ ಆನಂದ್, ಕಡಕೋಳ ಜಗದೀಶ್, ರಾಜಣ್ಣ, ಶ್ರೀಕಾಂತ್ ಕಶ್ಯಪ್, ಸಿದ್ದೇಶ್, ಲಿಂಗರಾಜು, ದಿವ್ಯನಾದನ್, ಸುರೇಶ್ ಗೋಲ್ಡ್, ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.