ವಿವೇಕಾನಂದ ಯುವಕ ಸಂಘದಿಂದ:ರಾಜ್ಯೋತ್ಸವ

ಬಳ್ಳಾರಿ ನ 01 : ನಗರದ ಶ್ರೀ ವಿವೇಕಾನಂದ ಯುವಕ ಸಂಘದಿಂದ ಇಲ್ಲಿನ ದುರ್ಗಮ್ಮ ಗುಡಿ ಸರ್ಕಲ್‍ನಲ್ಲಿ 65ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಮುಖ್ಯ ಕೆ.ಸಿ.ಕೊಂಡಯ್ಯ ವಿವೇಕಾನಂದ ಯುವಕ ಸಂಘ ಅಧ್ಯಕ್ಷ ಪೂಜಾರಿ ಗಾದೆಪ್ಪ, ರಮೇಶ್, ಬ್ರಹ್ಮಯ್ಯ, ಇನ್ನು ಹಲವು ಮುಖಂಡರುಗಳು ಸೇರಿ ಧ್ವಜರೋಹಣವನ್ನು ನೇರವೇರಿಸಿದರು.
ಗಾಂಧಿನಗರ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಾದಬಿ.ಎಸ್. ಜಯಸೂದ, ಬಿ.ಮಂಜುಳಾ, ಕೆ.ಹೆಚ್.ಹುಲಿಗೇಮ್ಮ, ಎಂ.ಜಯಭಾರತಿ, ಹೆಚ್.ಇ. ಅಮೃತ, ವೈ. ಸರಸ್ವತಿ ಹಾಗೂ ಕೇರ್ ಕನ್ಸ್‍ವೇಷನ್ ಮತ್ತು ರೆಕ್ಸೋ ಸಂಸ್ಥೆಯವರು ಲಾಕ್‍ಡೌನ್ ಸಮಯದಲ್ಲಿ ಮೂಕ ಪ್ರಾಣಿಗಳಿಗೆ ಊಟದ ವ್ಯವಸ್ಥೆ ಹಾಗೂ ವೈದ್ಯಕೀಯ ವ್ಯವಸ್ಥೆ ನೀಡಿರುತ್ತಾರೆ. ಆ ತಂಡದ ಡಾ.ಬಿಂದು, ನಿಖಿತ, ಆಕಾಶ್ ಕುಮಾರ್ ಸೋನಿ ಇವರುಗಳನ್ನು ಗೌರವಿಸಲಾಯಿತು. ಹಾಗೂ ಮಾಜಿ ಬುಡಾ ಅಧ್ಯಕ್ಷ ಯೂಮೂನ್‍ಖಾನ್ ಹಾಗೂ ಎಂ.ಜಿ.ಕನಕ, ಅಧ್ಯಕ್ಷರು ದೃವಸರ್ಜ ಅಭಿಮಾನಿ ಬಳಗ, ಹಾಗೂ ಓ.ಪಿ.ಡಿ, ವಿಮ್ಸ್ ವಿಭಾಗದ ಶವಪರೀಕ್ಷೆ ಗೋಪಾಲ್ ರವನ್ನು ಸಹ ಸನ್ಮಾನಿಸಲಾಯಿತು.
ಹರಿಜ್ಞಾನ ಸಂಸ್ಥೆಯ ರಾಜ್ಯ ಸಂಚಾಲಕ ತಿರುಮಲ ಅವರ ತಂಡದಿಂದ ಸಂಸ್ಕಾತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಂಘದ ಪದಾಧಿಕಾರಿಗಳಾದ ಜಿ.ಶಿವಪ್ರಸಾದ್, ಅಬ್ದುಲ್, ಶಬ್ಬೀರ್, ಕೌಶೀಕ್, ಪವನ್, ಶೇಷಗಿರಿ, ಬಸವರೆಡ್ಡಿ ಯಾದವ್, ರಾಘವೇಂದ್ರ ಯಾದವ್ ಮೊದಲಾದವರು ಇದ್ದರು.