ವಿವೇಕಾನಂದ ಯುವಕರಿಗೆ ಆದರ್ಶ

ರಾಯಚೂರು,ಜ.೧೩- ಬಿಆರ್‌ಬಿ ಮಹಾವಿದ್ಯಾಲಯದಲ್ಲಿ ವೀರಸನ್ಯಾಸಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು.
ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕುಮಾರಿ ಕೃತಿ ತುಪ್ಪಸಕ್ಕರಿ ಕವನ ವಾಚನ ಮಾಡಿದಳು. ಮುರಳಿಕೃಷ್ಣ ವಿವೇಕಾನಂದರ ಕುರಿತು ಭಾಷಣ ಮಾಡಿದನು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀರಾಮ ಬೂಬ ಅಧ್ಯಕ್ಷರು ವ್ಯವಸ್ಥಾಪಕ ಮಂಡಳಿ ಬಿಆರ್‌ಬಿ ಕಾಲೇಜು ರಾಯಚೂರು ಅವರು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಡಾ.ಶೀಲಾಕುಮಾರಿ ದಾಸ ಅವರು ವಿವೇಕಾನಂದರ ಬಾಲ್ಯದಲ್ಲಿ ಪ್ರಭಾವ ಬೀರಿದ ರಾಮಕೃಷ್ಣ ಪರಮಹಂಸರು ಅವರ ಮಾರ್ಗದರ್ಶನದಲ್ಲಿ ಆಧ್ಯಾತ್ಮ ಲೋಕದಲ್ಲಿ ಸಾಧನೆ ಮಾಡಿ ವಿಶ್ವಕ್ಕೆ ಮಾದರಿಯಾದರು. ಭಾರತದ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸಿದರು. ಅವರ ಸರಳತೆ, ಜ್ಞಾನದ ಮೌಢತೆ, ಸರ್ವಧರ್ಮ ತತ್ವ ಎಲ್ಲರಿಗೂ ಆದರ್ಶವಾಗಿದೆ.
ಆದ್ದರಿಂದ ಇವರ ಜನ್ಮದಿನವನ್ನು ಯುವಕರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ವೇದಿಕೆಯ ಮೇಲೆ ಉಪ-ಪ್ರಾಚಾರ್ಯರಾದ ಪೂಜಿತ ಕೆ, ಐ.ಕ್ಯೂ.ಎ.ಸಿ. ಸಂಚಾಲಕರಾದ ಸಂದೀಪ ಕಾರಭಾರಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ರವಳಿಕಾ ಸಿ, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂದೀಪ ಕಾರಭಾರಿಯವರು ಸ್ವಾಗತಿಸಿ ವಂದನಾರ್ಪಣೆಯನ್ನು ಮಾಡಿದರು.