ವಿವೇಕಾನಂದ ಪುತ್ಥಳಿಗೆ ಶಾಸಕರಿಂದ 7 ಲಕ್ಷ ರೂ

ಇಂಡಿ:ಜ.13:ಪಟ್ಟಣದ ಸಿಂದಗಿ ರಸ್ತೆಯಲ್ಲಿ ನೂತನವಾಗಿ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ನಿರ್ಮಿಸಲಾಗುತ್ತಿರುವ ನೂತನ ವಿವೇಕಾನಂದರ ಪುತ್ಥಳಿಗೆ ರೂ 7 ಲಕ್ಷ ನೀಡುವದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ನಡೆದ ಯುವದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ವಿವೇಕಾನಂದರವರ ಸ್ಪೂರ್ತಿ ಚಿಂತನೆಗಳನ್ನು ಧ್ಯೇಯವಾಗಿಸಿಕೊಂಡು ಬದುಕುತ್ತಿರುವ ಅನೇಕ ಈ ದೇಶದ ಯುವಕರ ಮೂಲಕ ಜನುಮಾಂತರದಲ್ಲೂ ಬದುಕಿದ್ದಾರೆ ಎಂದರು.

ಯುವಕರಲ್ಲಿರುವ ರಚನಾತ್ಮಕ ಶಕ್ತಿ ಬಳಸಿಕೊಂಡು ದೇಶ ಕಟ್ಟಬೇಕಿದೆ. ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ ಎಂಬ ಸ್ವಾಮಿ ವಿವೇಕಾನಂದರ ನುಡಿಗಳ ನೆಲೆಗಟ್ಟಿನಲ್ಲಿ ರೂಪಿತವಾದ ನೀತಿಯಲ್ಲಿ ಮಕ್ಕಳ ವ್ಯಕ್ತತ್ವ ರೂಪಿಸಿಕೊಳ್ಳಬೇಕಗಿದೆ ಎಂದರು.

ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ, ತಹಸೀಲ್ದಾರ ನಾಗಯ್ಯ ಹಿರೇಮಠ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ರಾಮಸಿಂಗ ಕನ್ನೊಳ್ಳಿ, ವೇಂಕಟೇಶ ಕುಲಕರ್ಣಿ, ಜಗದೀಶ ಕ್ಷತ್ರಿ, ಯಮುನಾಜಿ ಸಾಳೂಂಕೆ, ರಾಜ ಗುರು ದೇವರ, ಸತೀಶ ಕುಂಬಾರ, ಸುಜೀತ ಲಾಳಸಂಗಿ, ಸಿದ್ದಲಿಂಗ ಹಂಜಗಿ, ಸೋಮು ನಿಂಬರಗಿಮಠ ಪ್ರತೀಕ ಬೇವನೂರ, ಸಿದ್ದು ಗೋರನಾಳ, ಮುತ್ತು ಸಿಂದಗಿ, ಸ್ವರೂಪ ಶಿಂದೆ, ರತನ ಹಲವಾಯಿ ಮತ್ತಿತರಿದ್ದರು.

ರಾಜಸ್ಥಾನದ ನಿರ್ಮಿಸಲಾದ ಇಂಡಿಯಲ್ಲಿ ಸ್ಥಾಪಿಸಲಿರುವ ಸ್ವಾಮಿ ವಿವೇಕಾನಂದ ರ ಕಂಚಿನ ಪುತ್ಥಳಿ ಇಂದು ವಿಜಯಪುರದಿಂದ ಇಂಡಿಗೆ ತರಲಾಯಿತು. ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘದ ಅಧ್ಯಕ್ಷ ರಾಮಸಿಂಗ ಕನ್ನೊಳ್ಳಿ,ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ,ಶ್ರೀಕಾಂತ ಕುಡಿಗನೂರ, ಸತೀಶ ಕುಂಬಾರ,ಪ್ರಕಾಶ ಬಿರಾದಾರ,ಮಹೇಶ ಕಂಬಾರ,ಶ್ರೀಧರ ಝಂಪಾ ಮತ್ತಿತರಿದ್ದರು.