ವಿವೇಕಾನಂದ ಜಯಂತಿ ಪ್ರಯುಕ್ತ ‌ಸ್ವಚ್ಚತಾ ಅಭಿಯಾನ

ದಾವಣಗೆರೆ.ಜ.೧೨; ಶ್ರೀ ಸ್ವಾಮಿ ವಿವೇಕಾನಂದ 158ನೇ ಜಯಂತಿ ಹಾಗೂ ರಾಷ್ಟ್ರೀಯ ಯುವಕರ ದಿನಾಚರಣೆ ಅಂಗವಾಗಿ ಹರಿಹರದ ರಾಘವೇಂದ್ರ ಸ್ವಾಮಿ ದೇವಾಲಯದ ತಟದಲ್ಲಿ ಹರಿಯುತ್ತಿರುವ ತುಂಗಭಧ್ರಾ ನದಿಯನ್ನು ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ  ವಚನಾನಂದ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಸ್ವಚ್ಛಗೊಳಿಸುವುದರೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ್,ಜಿಲ್ಲಾಧಿಕಾರಿಗಳಾದ ಮಹಾಂತೇಶ ಬೀಳಗಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಹನುಮಂತರಾಯ, ಹರಿಹರ ನಗರಸಭೆಯ ಆಯುಕ್ತರಾದ ಉದಯಕುಮಾರ ಹಾಗೂ “ನನ್ನ ಊರು, ನನ್ನ ಹೊಣೆ” ಬಳಗದ ಸದಸ್ಯರು ಭಾಗವಹಿಸಿದ್ದರು.