ವಿವೇಕಾನಂದ ಕಾಲೇಜಿಗೆ ಉತ್ತಮ ಫಲಿತಾಂಶ

ದೇವದುರ್ಗ,ಏ.೨೬- ಪಿಯುಸಿ ದ್ವಿತೀಯ ವರ್ಷದ ಪಲಿತಾಂಶದಲ್ಲಿ ತಾಲ್ಲೂಕಿನ ಸುಂಕೇಶ್ವರಹಾಳ ಗ್ರಾಮದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯಕ್ಕೆ ಉತ್ತಮ ಫಲಿತಾಂಶ ದೊರಕಿದೆ ಎಂದು ಪ್ರಾಚಾರ್ಯ ಶಿವರಾಜ ಅಬಕಾರಿ ತಿಳಿಸಿದ್ದಾರೆ.
ಕಾಲೇಜಿನ ೭೧ವಿದ್ಯಾರ್ಥಿಗಳಲ್ಲಿ ೬೧ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.೮೯ರಷ್ಟು ಫಲಿತಾಂಶ ಲಭ್ಯಸಿದೆ. ೫ ವಿದ್ಯಾರ್ಥಿಗಳು ಉನ್ನತ ಶ್ರೇಣಿ, ೩೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು ೨೩ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಮಂಜುಳಾ ಸಾಬಣ್ಣ ಬೂದಿನಾಳ (ಕಲಾ ವಿಭಾಗ) ಶೇ.೯೩.೩೩ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ, ಅಶ್ವಿನಿ ರಾಚೋಟೆಪ್ಪ ಬೂದಿನಾಳ (ಕಲಾ ವಿಭಾಗ) ಶೇ.೯೧.೦೫ ದ್ವಿತೀಯ ಹಾಗೂ ಲಕ್ಷ್ಮೀ ರುದ್ರಮುನಿ ರಾಮದುರ್ಗ (ಕಲಾವಿಭಾಗ) ಶೇ ೯೦.೧೬ ತೃತೀಯ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಕಾಲೇಜಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಅಧ್ಯಕ್ಷರಾದ ನಾಗರಾಜ ಪಾಟೀಲ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.