ವಿವೇಕಾನಂದ ಆದರ್ಶ ಅಳವಡಿಸಿಕೊಳ್ಳಿ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಿ

ಬಳ್ಳಾರಿ,ಜ.13: ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ಸ್ವಾಮಿ ವಿವೇಕಾನಂದ ಯುತ್ ಅಸೊಸಿಯೆಷನ್ ದೋಣಿಮಲೈ ಮತ್ತು ಚಿಗುರು ಕಲಾ ತಂಡದ ಸಂಯುಕ್ತಾಶ್ರಯದಲ್ಲ್ಲಿ ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನಾಚರಣೆ ಕಾರ್ಯಕ್ರಮವು ನಗರದ ಶ್ರೀಗುರುತಿಪ್ಪೇರುದ್ರ ಮಹಾವಿದ್ಯಾಲಯದಲ್ಲಿ ನಿನ್ನೆ ನಡೆಯಿತು. ಕಾಂiÀರ್iಕ್ರಮದಲ್ಲಿ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಮಾಂಟು ಪತ್ತಾರ್ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ, ಅವರು ಬದುಕಿದ ರೀತಿ ಇತರರಿಗೆ ಮಾದರಿ. ಇಂದಿನ ಯುವಜನತೆಗೆ ಅವರು ಒಂದು ದಾರಿ ದೀಪವಿದ್ದಂತೆ, ಅವರ ಆದರ್ಶ ಜೀವನವನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ, ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ದೋಣಿಮಲೈ ವಿವೇಕಾನಂದ ಯೂತ್ ಅಸೊಸಿಯೆಷನ್ ಅಧಕ್ಷ ಜಗದೀಶ ಪೂಜಾರ್ ಅವರು ಮಾತನಾಡಿ, ರಾಷ್ಟ್ರೀಯತೆ ಮತ್ತು ರಾಷ್ಟ್ರಾಭಿಮಾನ ಯುವಜನರಿಂದ ಮರೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಯುವಜನರಲ್ಲಿ ಬಿತ್ತುವ ಪ್ರಯತ್ನ ಮಾಡಬೇಕು. ಯುವಜನತೆಯಲ್ಲಿ ದೇಶಾಭಿಮಾನದ ಬಗ್ಗೆ ಅರಿವು ಮೂಡಿಸಲು ಇಂತಹ ಮಹಾನ್ ವ್ಯಕ್ತಿಗಳ ಜೀವನ ಶೈಲಿಯೇ ಅತ್ಯುತ್ತಮ ಪಾಠ ಎಂದರು.
ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದಂತಹ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳು ಮತ್ತು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಸ್ವಾಮಿ ವಿವೇಕಾನಂದರ ಕುರಿತು ಎಸ್.ಎಮ್.ಹುಲಗಪ್ಪ ರವರು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ನಾಗರಾಜ್, ಪ್ರಾಶುಂಪಾಲ ತಿಪ್ಪೇಶ, ಉಪನ್ಯಾಸಕಮಲ್ಲಿಕಾರ್ಜುನ ಮೊದಲಾದವರು ಭಾಗವಹಿಸಿದ್ದರು.