ವಿವೇಕಾನಂದ ಅವರ ಚಿಂತನೆ ಪ್ರಸಕ್ತ ಸವಾಲುಗಳಿಗೆ ಉತ್ತರ

ಕಲಬುರಗಿ:ಜ.11:ಸ್ವಾಮಿ ವಿವೇಕಾನಂದ ಅವರ ಚಿಂತನೆ ರಾಷ್ಟ್ರದ ಪ್ರಸಕ್ತ ಸವಾಲುಗಳಿಗೆ ಉತ್ತರವಾಗಲಿದೆ ಎಂದು ಕಲ್ಬುರ್ಗಿಯ ರಾಜಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯಶ್ರೀ ಮಹೇಶ್ವರಾನಂದಜಿ ಮಹಾರಾಜರವರು ಹೇಳಿದರು
ಕಲ್ಬುರ್ಗಿ ಆಕಾಶವಾಣಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಮುನ್ನ ದಿನವಾದ ಜ. 11ರಂದು ಜೊತೆ ಜೊತೆಯಲಿ ನೇರ ಫೆÇೀನ್ ಇನ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ “ಸ್ವಾಮಿ ವಿವೇಕಾನಂದರ ಚಿಂತನೆಗಳು ನಮಗೆ ಆದರ್ಶ” ಎಂಬ ವಿಷಯದ ಕುರಿತಾಗಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ದೇಶದ ಹಲವಾರು ಸಮಸ್ಯೆಗಳಿಗೆ ವಿವೇಕಾನಂದರ ಚಿಂತನೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಪರಿಶ್ರಮ ಮತ್ತು ಪರಿಶುದ್ಧಿಯ ಮೂಲಕ ಪ್ರತಿಯೊಬ್ಬ ಭಾರತೀಯನು ಚೈತನ್ಯ ಪಡೆಯುವುದರೊಂದಿಗೆ ಶಾಂತಿ ಮತ್ತು ಪ್ರೀತಿಯ ಬದುಕನ್ನು ಸಾಧಿಸಲಿಕ್ಕೆ ಸಾಧ್ಯವಿದೆ. ಅದಕ್ಕಾಗಿ ವಿವೇಕಾನಂದರ ಚಿಂತನೆಗಳನ್ನ ಮನೆ ಮನೆಯಲ್ಲಿ ಅಧ್ಯಯನ ಮಾಡುವುದರ ಮೂಲಕ ಕುಟುಂಬ ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅಡಿಪಾಯವನ್ನಾಗಿಸಬೇಕು ಎಂದು ಅವರು ಹೇಳಿದರು. ವಿವೇಕಾನಂದರ ಚಿಂತನೆ ರಾಷ್ಟ್ರಕ್ಕೆ ಮಾದರಿಯಾಗಿ ಯುವಜನರ ಬದುಕನ್ನು ಹಸನ ಮಾಡಲು ಅತ್ಯಂತ ಉಚಿತ ಮಾರ್ಗ ಎಂದು ಅವರು ಹೇಳಿದರು ವಿವೇಕಾನಂದರ ಚಿಂತನೆಯನ್ನು ಯಾವುದೇ ಜಾತಿ ಮತ ಪಂಥ ಪಂಗಡಗಳೆಂಬ ಭೇದ ಭಾವವಿಲ್ಲದೆ ಅಧ್ಯಯನ ಮಾಡಿದಲ್ಲಿ ವ್ಯಕ್ತಿ ನಿರ್ಮಾಣದೊಂದಿಗೆ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು ಅದರೊಂದಿಗೆ ರಾಷ್ಟ್ರ ಪ್ರೇಮ ಮತ್ತು ಸಹ ಬಾಳ್ವೆಯ ಬದುಕನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

           ಸಂವಾದ ಕಾರ್ಯಕ್ರಮದಲ್ಲಿ ಸುರಪುರದ ರಾಘವೇಂದ್ರ ಭಕ್ರಿ, ಸುಲೇಪೇಟೆಯ ಬಸವರಾಜ್ ಪಾಂಚಾಳ, ಅಫ್ಜಲ್ಪುರದ ಸಿದ್ದರಾಮ ಕಂಬಾರ, ಶಿಕ್ಷಕಿ ನಂದಿನಿ ಸನ್ ಬಾಲ್, ಬೆಂಗಳೂರು ನಿವಾಸಿ ಮಲ್ಲಿಕಾರ್ಜುನ ತಾಡತೆಗನೂರು , ಆಪ್ತ ಸಮಾಲೋಚಕಿ ಸುಗುಲಾ ರಾಣಿ,  ಶ್ರೀನಿವಾಸ ಸರಡಗಿಯ ಸಂಗನಗೌಡ ಸಿದ್ಧಗೊಂಡ, ಅಂಕೋಲಾದ ಮನಮೋಹನ್ ಭಾಗವಹಿಸಿದ್ದರು ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಟ್ಟರು. ಸಂಗಮೇಶ್ ಮತ್ತು ಲಕ್ಷ್ಮಿಕಾಂತ್ ಪಾಟೀಲ್ ನೆರವಾದರು. ಅಶೋಕ್ ಸೋಂಕವಡೆ ಮತ್ತು ಅಬ್ದುಲ್ ರಾವ್ ತಾಂತ್ರಿಕ ನೆರವು ನೀಡಿದರು.