ವಿವೇಕಾನಂದರ ವಿಚಾರಗಳು ಅಜರಾಮರ : ಮೇಟಿ

ಬೀದರ : ಜ.13: ಸ್ವಾಮಿ ವಿವೇಕಾನಂದರು ರಾಷ್ಟ್ರದ ದಿವ್ಯ ಸಂಪತ್ತು ಮತ್ತು ದೇಶದ ಆಶಯ ಕೂಡ ಅವರ ವಿಚಾರಗಳಲ್ಲಿ ಅಡಗಿದೆ . ಅವರ ಶಕ್ತಿ, ಸಾಮಥ್ರ್ಯಗಳು ಒಂದು ದೇಶದ ಸವಾರ್ಂಗೀಣ ಅಭಿವೃದ್ಧಿಗೆ ಪೂರಕ. ಸ್ವಾಮಿ ವಿವೇಕಾನಂದರು ಯುವ ಸಮೂಹಕ್ಕೆ ಸ್ಫೂರ್ತಿಮೂರ್ತಿ ಅವರ ವಿಚಾರಗಳು ಅಜರಾಮರ ಎಂದು ಶಿಕ್ಷಕ ಸಂಜೀವಕುಮಾರ ಮೇಟಿ ಹೇಳಿದರು.

ತಾಲ್ಲೂಕಿನ ಶಮಶಿರನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ವಾಮಿ ವಿವೇಕಾನಂದರ ಜಯಂತಿ ಒಂದು ದಿನಕ್ಕೆ ಸಿಮಿತವಾಗದಿರಲಿ ಅವರ ತತ್ವಾದರ್ಶಗಳು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸ್ವಾಮಿ ವಿವೇಕಾನಂದರು ವಿಶ್ವದ ಮೂಲೆ ಮೂಲೆಗೆ ಸಂಚಾರ ಮಾಡಿ ಭಾರತದ ಅಧ್ಯಾತ್ಮಿಕತೆಯನ್ನು ಬಾನೆತ್ತರಕ್ಕೆ ಕೊಂಡೈದ ಮಹಾನ ಸಂತ ವಿವೇಕರು. ಚಿಕಾಗೊ ಸರ್ವ ಧರ್ಮ ಸಮ್ಮೇಳನಕ್ಕೆ ತೆರಳಿ ಇಡಿ ವಿಶ್ವಕ್ಕೆ ಭಾರತದ ಪರಿಚಯ ಮಾಡಿಕೊಟ್ಟರು ಭಾರತದ ಭವ್ಯ ಪರಂಪರೆ ವಿಶ್ವಕ್ಕೆ ಪರಿಚಯಿಸುವ ಕಾರ್ಯವನ್ನು ಮಾಡಿದ್ದಾರೆ ಆದ್ದರಿಂದಲೇ ಸ್ವಾಮಿ ವಿವೇಕಾನಂದರನ್ನು ವಿಶ್ವವು ಇಂದು ಯುಗಪುರುಷ ಎಂದು ಕರೆಯುತ್ತಾರೆ, ಮತ್ತು ಭಾರತವನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ಶಿಕ್ಷಕ ಶಾಲಿವಾನ ಸಿದಬಟ್ಟೆ ರವರು 4ನೇ ತರಗತಿಯಿಂದ 8ನೇ ತರಗತಿಯ ಮಕ್ಕಳಿಗೆ “ಶುದ್ಧ ಬರಹ ” ಸ್ಪರ್ಧೆ ಯನ್ನು ಏರ್ಪಡಿಸಿದ್ದರು, ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಣೆ ಮಾಡಿ ಎಲ್ಲ ವಿದ್ಯಾರ್ಥಿಗಳಿಗೆ ಕಿರು ಕಾಣಿಕೆ ನೀಡಿದರು.

ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಚಂದ್ರಕಾಂತ , ಭಾರತಿ, ಎಸ್ಡಿಎಂಸಿ ಅಧ್ಯಕ್ಷರು ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.