ವಿವೇಕಾನಂದರ ಮಾತು ಎಂದೆಂದಿಗೂ ಪ್ರಸ್ತುತ-ಬಾಬು

ಕನಕಪುರ.ಜ೧೪-ಯುವಕರೆ ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ಹಿಂದೆ ತಿರುಗಿ ನೋಡದೆ ಮುನ್ನುಗ್ಗಿರಿ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತು ಅನಂತ ಕಾಲದವರೆಗೂ ಅಮರ ವಾಕ್ಯವಾಗಿಯೇ ಉಳಿದಿದೆ ಎಂದು ಬಿಜೆಪಿ ಹಿರಿಯಮುಖಂಡ ವಿ.ಬಾಬು ಹೇಳಿದರು.
ಇಲ್ಲಿನ ರಾಜರಾವ್ ರಸ್ತೆಯಲ್ಲಿರುವ ಬಿಜೆಪಿ ಎಸ್ಸಿ ಮೋರ್ಚ ಕಚೇರಿಯಲ್ಲಿ ಎಸ್ಸಿ ಮೋರ್ಚ ಘಟಕದ ವತಿಯಿಂದ ಮಂಗಳವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ದೇಶ ಮೊದಲು, ಆನಂತರ ನಾವು ಎಂದು ದೇಶವನ್ನೇ ತಮ್ಮ ಸರ್ವಶ್ವ ವನ್ನಾಗಿಸಿಕೊಂಡಿದ್ದರು. ಭಾರತ ದೇಶದ ಪರಂಪರೆಯನ್ನು ವಿಶ್ವದೆಲ್ಲೆಡೆ ಸಾರಿದ ಸ್ವಾಮಿ ವಿವೇಕಾನಂದರು, ಇಡೀ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು. ಅಂತವರನ್ನು ಪಡೆದ ನಾವು ಮತ್ತು ನಮ್ಮ ದೇಶವೇ ಧನ್ಯ ಎಂದರು.
ಯುವ ಶಕ್ತಿಯ ಮೇಲೆ ಅಪಾರವಾದ ನಂಬಿಕೆಯನ್ಕಿಟ್ಟುಕೊಂಡಿದ್ದ ಅವರು ಯುವ ಶಕ್ತಿಯೇ ಈ ದೇಶದ ಆಸ್ತಿ ಎಂದಿದ್ದರು. ಅಂತಹ ಯುವ ಶಕ್ತಿಯನ್ನು ಅತಿ ಹೆಚ್ಚು ಪಡೆದಿರುವ ಭಾರತ ದೇಶವು ತನ್ನ ಸಾಮಾರ್ಥವನ್ನು ವಿಶ್ವಕ್ಕೆ ಪರಿಚಯಿಸಬೇಕಾದ ಸಮಯ ಬಂದಿದೆ.
ಸ್ವಾಮಿ ವಿವೇಕಾನಂದರು ಬಾತೃತ್ವ ಮತ್ತು ಸೋದರತ್ವವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿ ಭಾರತ ದೇಶ ವಿಶ್ವಗುರು ಆಗಬೇಕೆಂದಿದ್ದರು. ಅವರ ಮಾರ್ಗದರ್ಶನದಲ್ಲಿ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಯುವಕರೆಲ್ಲರೂ ದೇಶ ಪ್ರೇಮವನ್ನು ಬೆಳೆಸಿಕೊಂಡು ಶಕ್ತಿಯುತ ರಾಷ್ಟ್ರ ಮಾಡಬೇಕೆಂದು ಕರೆ ನೀಡಿದರು. ಬಿಜೆಪಿ ಎಸ್ಸಿ ಮೋರ್ಚ ಅಧ್ಯಕ್ಷ ಶಿವಮುತ್ತು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶೇಖರ್, ಬಿಜೆಪಿ ಮುಖಂಡರುಗಳಾದ ರಾಮದಾಸ್, ಮಿಲ್ ನಾಗಣ್ಣ ಇದ್ದರು.