ವಿವೇಕಾನಂದರ ತೇಜಸ್ವಿನ ಗುಟ್ಟು ಆತ್ಮಶಕ್ತಿ

ಮಾನ್ವಿ,ಜ.೧೯- ಸ್ವಾಮಿ ವಿವೇಕಾನಂದರು ಈ ಜಗತ್ತಿಗೆ ಅಪರೂಪದ ಮಾಣಿಕ್ಯ, ಅವರ ವಾಣಿಯಿಂದ ಯುವ ಜನತೆಗೆ ದಾರಿ ದೀಪ, ಜೀವನ ಶೈಲಿ ನಡೆಯ ನುಡಿ ಪ್ರಪಂಚಕ್ಕೆ ನಮ್ಮ ಸನಾತನ ಧರ್ಮದ ಸಾರವನ್ನು ಸಾರಿದ ಮಾಹಾನ್ ಚೇತನ ಯುವಕರನ್ನು ಬಡಿದೆಬ್ಬಿಸುವ ಅವರ ಸಂದೇಶ ನಮ್ಮ ದೇಶದ ಹಿರಿಮೆ ಘರಿಮೆ ಅವರ ತೇಜಸ್ಸಿನ ಗುಟ್ಟು ಅವರಲ್ಲಿರುವ ಆತ್ಮಸ್ಥೈರ್ಯವೆ ಕಾರಣ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ್ ನಾಯಕ ಕರಡಿಗುಡ್ಡ ಹೇಳಿದರು.
ಪಟ್ಟಣದ ಸರ್ಕಾರಿ ಭಾಷುಮೀಯಾ ಪದವಿ ಕಾಲೇಜಿನಲ್ಲಿ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಮಾನವಿ ವತಿಯಿಂದ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಕಾರ್ಯಕ್ರಮ ಕಾಲೇಜಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಾ. ಮಹಿಬೂಬ್ ಮದ್ಲಾಪುರ ಮಾತಾನಾಡಿ ಯುವಕರು ಸ್ವಾಮಿ ವಿವೇಕಾನಂದ ಅವರ ಜೀವನ ಶೈಲಿ ಇವತ್ತಿನ ಯುವಕರಿಗೆ ಬದುಕುವ ಛಲ, ನೀಡುತ್ತದೆ ಎಂದರು.
ಅಧ್ಯಕ್ಷತೆಯಲ್ಲಿ ಡಾ. ಸುರೇಶ್ ಪಾಟೀಲ್ ಮಾತನಾಡಿ ನಮ್ಮ ಕಾರ್ಯಕ್ರಮದ ತಿರುಳು ಯುವಕರನ್ನು ತಮ್ಮಗುರಿಯತ್ತ ಸಾಗುವ ನಿಟ್ಟಿನಲ್ಲಿ ಜನತೆ ಅವರ ಆದರ್ಶಗಳನ್ನು ಪಾಲಿಸಬೇಕು ಅವರ ಜೀವನ ಚರಿತ್ರೆಯ ಮಾರ್ಗಸೂಚಿ ನಮ್ಮ ಯುವ ಪೀಳಿಗೆಗೆ ಅನುಕೂಲ ಎಂದು ಹೇಳಿದರು, ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಪ್ರಿಯಧರ್ಶಿನಿ, ದ್ವೀತಿಯ ಸಂಗೀತಾ ತೃತಿಯ ಶಿಲ್ಪರವರಿಗೆ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕ ನೀಡಿ ಗಣ್ಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಚನ್ನಬಸವ, ಶಿವರಾಜ ಕೊಪ್ಪರ, ಡಾ. ಬಸವರಾಜ ಕರಡಿಗುಡ್ಡ, ಚಂದ್ರು, ತೇಜಸ್ವಿನಿ, ಶಾಂತ,ಬಸಮ್ಮ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.