ವಿವೇಕಾನಂದರ ತತ್ವ ಆದರ್ಶ ಮೈಗುಡಿಸಿಕೊಳ್ಳಲು ತೆಗನೂರ ಕರೆ

ಚಿತ್ತಾಪೂರ,ಜ.13- ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳು ನಮ್ಮ ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದು ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಪ್ರವೀಣ ತೆಗನೂರ ಅವರು ಕರೆ ನೀಡಿದರು.
ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ರವರ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರು ನೈಜ ಸಮಾಜವನ್ನು ಅರಿತು ಬದುಕಬೇಕು, ಒಳ್ಳೆಯದಕ್ಕೆ ಗೌರವಿಸಬೇಕು, ಕೆಟ್ಟದ್ದನ್ನು ತಿರಸ್ಕರಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
Àನಗರದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ವೀರು ಪಾಟೀಲ ರೈಕೋಡ್ ನಾಗರಾಜ ಹೂಗಾರ ಅವಿನಾಶ ಅರಳಿ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಶಿವಕುಮಾರ ಸುಣಗಾರ ,ಮಹೇಶ ಬಾಳಿ ಮತ್ತು ಪದಾಧಿಕಾರಿಗಳು ಮತ್ತು ಯುವ ಮೋರ್ಚಾ ಕಾರ್ಯಕರ್ತರು ಹಾಗೂ ಮಹಿಳಾ ಜಿಲ್ಲಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳು ಕವಿತಾ ಚೌಹಾನ್ ಹಾಗೂ ಲಿಂಗರಾಜ ಕಡಬೂರ ಯುವ ಮೋರ್ಚಾ ಉಪಾಧ್ಯಕ್ಷರು ಸಂಜುಕುಮಾರ ಕುಲಕರ್ಣಿ ಗುಂಡುಗೌಡ ಇಂಗಳಗಿ ಇದ್ದರು.