ವಿವೇಕಾನಂದರ ಜಯಂತಿ ಆಚರಣೆ

ಸಂಜೆವಾಣಿ ವಾರ್ಥೆ
ಸಿರುಗುಪ್ಪ ಜ 14 : ನಗರದ ಸದಾಶಿವನಗರದ ನಗರಸಭಾ ಅಧ್ಯಕ್ಷೆ ಕೆ.ಸುಶೀಲಮ್ಮರು ತಮ್ಮ ಕಚೇರಿ ನಿವಾಸದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಶ್ರೀಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
   ನಂತರ ಮಾತನಾಡಿ ಪ್ರತಿಯೊಬ್ಬರು ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು, ವಿವೇಕಾನಂದರು ಇಡೀ ವಿಶ್ವಕ್ಕೆ ಭಾರತದ ಸಂಸ್ಕøತಿ ಪರಿಚಯಿಸಿದವರು ಮತ್ತು ದೇಶಕ್ಕೆ ಅವರು ಪೂಜ್ಯನೀಯರಾಗಿದ್ದು, ಇವರ ಆದರ್ಶಗಳನ್ನು, ಸದ್ಗುಣಗಳನ್ನು ಪಾಲಿಸಿ ಅಳವಡಿಸಿಕೊಳ್ಳೋಣವೆಂದು ತಿಳಿಸಿದರು.
   ಪುರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟ ರಾಮ ರೆಡ್ಡಿ, ಯುವ ಕಾಂಗ್ರೇಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭೆ ಸದಸ್ಯ ಚಿದಾನಂದರಾಯುಡು, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಬನ್ನಿಗೌಡ, ನಗರ ಸಭಾ ಸದ್ಯಸ ಮಹೇಶ್ ಗೌಡ, ಮುಖಂಡ ಸುಂಕಪ್ಪ ಸೇರಿದಂತೆ ಯುವ ಕಾರ್ಯಕರ್ತರು ಇದ್ದರು