ವಿವೇಕಾನಂದರ ಜನ್ಮದಿನ ಪ್ರಯುಕ್ತ ಏಕತಾನಡಿಗೆ

ದಾವಣಗೆರೆ.ಜ.೧೧;  ಬಿಜೆಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ “ಏಕತಾ ನಡಿ”ದಾವಣಗೆರೆ, ಬಿಜೆಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನದ  ನಗರದ ಗುಂಡಿ ಸರ್ಕಲ್‌ನಿಂದ ಜಯದೇವ ಸರ್ಕಲ್‌ರವರೆಗೆ  “ಏಕತಾ ನಡಿ”ಗೆ ಯನ್ನು ದಾವಣಗೆರೆಯ ಸಂಸದರಾದ  ಜಿ. ಎಂ. ಸಿದ್ದೇಶ್ವರರವರ ನೇತೃತ್ವದಲ್ಲಿ ನಡೆಸಲಾಯಿತು… ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ನಂದೀಶ್‌ರವರು, ಜಿಲ್ಲಾ ಅಧ್ಯಕ್ಷರಾದ ವೀರೇಶ್ ಹನಗವಾಡಿರವರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶಿವಪ್ರಕಾಶ್‌ರವರು, ಮಾಜಿ ಜಿಲ್ಲಾ ಅಧ್ಯಕ್ಷರಾದ ಯಶವಂತರಾವ್ ಜಾಧವ್‌ರವರು, ದೂಡಾ ಅಧ್ಯಕ್ಷರಾದ ಶಿವಕುಮಾರ್‌ರವರು, ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ ದಾಸಕರಿಯಪ್ಪನವರು, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಂಜುಳಾ ಮಹೇಶ್‌ರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜಗದೀಶ್‌ರವರು, ಸವಿತಾ ರವಿಕುಮಾರ್‌ರವರು, ಯಲ್ಲೇಶ್‌ರವರು, ಸಚಿನ್, ವಿನಯ್, ಕಿರಣ್, ಗುರುರಾಜ್ ರಾಕೇಶ್, ತರಕಾರಿ ಶಿವು, ತಿಲಕ್‌ರವರು  ಉಪಸ್ಥಿತರಿದ್ದರು.