ವಿವೇಕಾನಂದರ ಆದರ್ಶದಿಂದ ಬೆಳಗಲಿದೆ ರಾಷ್ಟ್ರಪ್ರಜ್ಞೆ:ಯಳಸಂಗಿ

ಆಳಂದ:ಜ.17: ಭಾರತೀಯ ಧಾರ್ಮಿಕ ಪರಂಪರೆಯ ಸಾಕ್ಷಿಪ್ರಜ್ಞೆಯಂತಿದ್ದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವ ಜನತೆಗೆ ತಲುಪಿಸಿದರೆ ರಾಷ್ಟ್ರಪ್ರಜ್ಞೆ ಬೆಳಗಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಯಳಸಂಗಿ ಹೇಳಿದರು.

ತಾಲೂಕಿನ ನಿಂಬರ್ಗಾ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವೀರಸನ್ಯಾಸಿ ವಿವೇಕಾನಂದರು ಕಡಲಿನಾಚೆಯ ದೇಶಗಳಿಗೆ ತೆರಳಿ ಧಾರ್ಮಿಕ ಭಾರತೀಯತೆಯನ್ನು ಪರಿಚಯಿಸಿದರು. ಯುವ ಜನತೆಯ ಹೃದಯ ಮಂದಿರದಲ್ಲಿ ಶೌರ್ಯ, ಧೈರ್ಯದ ಪರಿಕಲ್ಪನೆಯನ್ನು ತುಂಬಲು ದೇಶಾದ್ಯಂತ ಸಂಚರಿಸಿದರು. ವಿಶ್ವದ ಆಧ್ಯಾತ್ಮಿಕತೆಯ ಸಂಕೇತದಂತಿರುವ ಭಾರತೀಯತೆಯ ಸಹಭಾಳ್ವೆ, ಶಾಂತಿ ಸಂದೇಶಗಳನ್ನು ಎಲ್ಲರಿಗೂ ತಿಳಿಸುವುದೇ ನಾವು ವಿವೇಕಾನಂದರಿಗೆ ಸಲ್ಲಿಸುವ ಗೌರವವಾಗಿದೆ ಎಂದರು.

ಈ ಸಂಧರ್ಭದಲ್ಲಿ ಶರಣಬಸವೇಶ್ವರ ದೇವಸ್ಥಾನದ ಕಾರ್ಯದರ್ಶೀ ಈರಣ್ಣ ಬೀರಾದಾರ ಮಾತನಾಡಿ, ಜಗತ್ತಿನಲ್ಲಿ ಯುವಕರಿಗೆ ಮಾರ್ಗದರ್ಶನವಾಗಿರುವ ವಿವೇಕಾನಂದರು ಭಾರತ ಸಂಸ್ಕøತಿಯನ್ನು ಇಡೀ ಜಗತ್ತೆ ಗೌರವಿಸುವಂತೆ ಮಾಡಿದರು. ವಿವೇಕಾನಂದರ ಉತ್ಸಾಹ, ಧೈರ್ಯ, ಸರಳತೆ ಎಲ್ಲರೂ ತಮ್ಮ ನಿತ್ಯ ಕಾರ್ಯದಲ್ಲಿ ಅಳವಡಿಸಿಕೋಳ್ಳಬೇಕು ಎಂದರು.

ಈ ಸಂಧರ್ಭದಲ್ಲಿ ಮಲ್ಲಿನಾಥ ನಾಗಶೆಟ್ಟಿ, ವೀರಭದ್ರಪ್ಪ ನಂದಿ, ಪರಮೇಶ್ವರ ಚಿತಕೋಟಿ, ಈರಯ್ಯ ಸ್ವಾಮಿ, ಮಹೇಶ ಮಿಟೆಕಾರ, ಮಂಜುನಾಥ ಮಠಪತಿ, ಸಂದೀಪ ಶೀಲವಂತ, ಗುರುಸಿದ್ದಪ್ಪ ದುರ್ಗದ ಸೆರಿದಂತೆ ಅನೇಕರು ಉಪಸ್ಥಿತರಿದ್ದರು.

ನಾಗರಾಜ ಪಾಟೀಲ ಸ್ವಾಗತಿಸಿದರು. ಈರಣ್ಣ ಶರಣ ನಿರೂಪಿಸಿದರು. ಅನೀಲ ನಾಗುರ ವಂದಿಸಿದರು.