ವಿವೇಕಾನಂದರ ಆದರ್ಶಗಳನ್ನು ಯುವಜನರು ಮೈಗೂಡಿಸಿಕೊಳ್ಳಲಿ: ಸೋನಾರೆ

ಬೀದರ್: ಜ.16:ವಿವೇಕಾನಂದರ ಆದರ್ಶ ಗುಣಗಳನ್ನು ಯುವಜನರು ಮೈಗೂಡಿಸಿಕೊಳ್ಳಲಿ ಎಂದು ಸಾಹಿತಿ ಪಾರ್ವತಿ ಸೋನಾರೆ ಹೇಳಿದರು.
ನಗರದ ಜನವಾಡ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯತ್ ಬೀದರ ಹಾಗೂ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ದಿವ್ಯ ಚೇತನ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಜಗತ್ತಿನ ಮಹಾತ್ಮರನ್ನು ತಯ್ಯಾರು ಮಾಡುವ ಮಹತ್ತರ ಸಾಧನವೇ ಹೆಣ್ಣು. ಆಕೆ ಕೊಡುವ ಸಂಸ್ಕಾರ ಹಾಗೂ ಸಂಸ್ಕøತಿಯಿಂದ ಜಗತ್‍ಪ್ರಸಿದ್ಧಿ ಪಡೆಯಲು ಸಾಧ್ಯವಾಗಲಿದೆ. ತಾಯಿ ಭುವನೇಶ್ವರಿ ದೇವಿಯು ವಿವೇಕಾನಂದರಿಗೆ ಜನ್ಮ ನೀಡಿದರೆ ಮಾತೆ ಶಾರದಾದೇವಿಯು ಅವರಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡಿದರು. ಅವರಿಬ್ಬರ ಫಲಶ್ರುತಿಯಿಂದ ವಿವೇಕಾನಂದರ ಸಿಡಿಲು ಸನ್ಯಾಸಿಯಾಗಿ, ಸದುವಿನಯದ ಸಾಕಾರ ಮೂರ್ತಿಯಾಗಿ ಹಾಗೂ ಮಾಣಿಕ್ಯದ ದೀಪ್ತಿಯಂತೆ ಹೊರ ಹೊಮ್ಮಿದರು ಎಂದರು.
ಇಂದಿನ ಯುವಜನರು ಇಂದಿನ ಪ್ರಜೆಗಳು. ಭಾರತದ ಭವಿಷ್ಯ ಯುವಜನರ ಮೇಲಿದ್ದು, ಉನ್ನತ ಗುರಿ ಹಾಗೂ ಶ್ರೇಷ್ಠ ಗುರುವಿನ ಮಾರ್ಗದರ್ಶನದಿಂದ ನೈಜ ಬದುಕು ರೂಪಿಸಿಕೊಳ್ಳುವ ಮಹತ್ವಕಾಂಕ್ಷಿ ಬೆಳೆÀಸಿಕೊಳ್ಳುವಂತೆ ಪಾರ್ವತಿ ಕರೆ ಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಮನೋಜಕುಮಾರ ಮಾತನಾಡಿ, ಒಂದು ಇತಿಹಾಸ ಗಟ್ಟಿಯಾಗಬೇಕಾದರೆ ಅದರ ಮುಖ್ಯ ರುವಾರಿ ಶ್ರೇಷ್ಠರಾಗಬೇಕು. ಆವಾಗ ಮಾತ್ರ ಜಗತ್ತು ಅದನ್ನು ಅನುಸರಿಸುತ್ತದೆ. ಹಾಗೇ ವಿವೇಕಾನಂದರು ಅಂದು ಅಮೇರಿಕಾದಲ್ಲಿ ಹೇಳಿದ ಆ ಎರಡು ವಾಕ್ಯಗಳು ಇಂದಿಗೂ ಜಗತ್ತು ಪ್ರಶಂಸಿಸುತ್ತಿದೆ. ಅದರಿಂದ ಭಾರತ ವಿಶ್ವದ ಮುಂದೆ ಎದೆ ತಟ್ಟಿ ನಿಲ್ಲಲ್ಲು ಸಾಧ್ಯವಾಗಿದೆ ಎಂದರು.
ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗೌತಮ ಅರಳಿ ಪ್ರಾಸ್ತಾವಿಕ ಮಾತನಾಡಿ, ಪ್ರತಿ ವರ್ಷ ಜನೆವರಿ 12 ವಿವೇಕಾನಂದರ ಜನ್ಮದಿನ. ಕಬ್ಬಿಣದಂಥ ಶರೀರ, ಸಿಡಿಲಿನಂತಹ ಧ್ವನಿ ಹಾಗೂ ಉಕ್ಕಿನಂತಹ ಧೈರ್ಯ ಬೆಳೆಸಿಕೊಂಡಲ್ಲಿ ವಿವೇಕರ ನಿಜವಾದ ವಾರಸುದಾರರಾಗಲು ಸಾದ್ಯವಿದೆ ಎಂದರು.
ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕøತ ಶಿವಯ್ಯ ಸ್ವಾಮಿ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ವಿರುಪಾಕ್ಷ ಗಾದಗಿ ಮಾತನಾಡಿದರು.
ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕøತರಾದ ಓಂಪ್ರಕಾಶ ರೊಟ್ಟೆ, ಪ್ರಭುಲಿಂಗ ಬಿರಾದಾರ, ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಶಿವಕುಮಾರ ಸ್ವಾಮಿ, ಮಹೇಶ ಗೋರ್ನಾಳಕರ್, ಸುನಿಲ ಬಾವಿಕಟ್ಟಿ, ಯುವ ಸಂಘ, ಸಂಸ್ಥೆಗಳ ಒಕ್ಕೂಟದ ಗೌರವಾದ್ಯಕ್ಷ ವಿಜಯಕುಮಾರ ಸೋನಾರೆ ವೇದಿಕೆಯಲ್ಲಿದ್ದರು. ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಮೌಲಪ್ಪ ಮಾಳಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇಲಾಖೆಯ ಸಿಬ್ಬಂದಿ ಖುದ್ದೂಸ್ ವಂದಿಸಿದರು. ಇಲಾಖೆಯ ಸಿಬ್ಬಂದಿಗಳಾದ ಪದ್ಮಾವತಿ, ಸತೀಶ, ಕಾಲೇಜಿನ ಎಲ್ಲ ಪ್ರಾಧ್ಯಾಪಕ ವೃಂದದವರು, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.