ವಿವೇಕಾನಂದರ ಆದರ್ಶಗಳನ್ನು ಪಾಲಿಸೋಣ

ಮಾನ್ವಿ.ಜ.೧೪-ಭಾರತದ ಮಹಾನ್ ಪುರುಷ ಹಾಗೂ ಯುವಕರ ಸ್ಪೂರ್ತಿ ಮತ್ತು ವಿಶ್ವಕ್ಕೆ ವೇದಾಂತವನ್ನು ಕಾಣಿಸಿದ ಮೇರು ವ್ಯಕ್ತಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪತ್ರಿಯೂಬ್ಬರು ಪಾಲಿಸೋಣ ಎಂದು ಮುಖಂಡ ಹನುಮಂತಗೌಡ ಕೊಟ್ನೆಕಲ್ ತಿಳಿಸಿದರು.
ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದ ಜ್ಞಾನಸಂತ ವಿವೇಕಾನಂದ ತರಬೇತಿ ಕೇಂದ್ರ ವತಿಯಿಂದ ಏರ್ಪಡಿಸಿದ್ದ ಸ್ವಾಮಿವಿವೇಕಾನಂದರ ೧೫೮ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ ದಿನದಂಗವಾಗಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಯುವಕರೇ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವ ಸಂದೇಶವನ್ನು ನೀಡಿ ಯುವಕರ ಪಾಲಿನ ಸ್ಪೂರ್ತಿ ಚಿಲುಮೆ ಆಗಿರುವ ಸ್ವಾಮಿವಿವೇಕಾನಂದ ಕುರಿತಾದ ಚಿಂತನೆಗಳನ್ನು ಆಳವಡಿಸಿಕೊಳ್ಳೋಣ ಎಂದು ಹನುಮಂತಗೌಡ ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಿದ್ದಾರ್ಥ ಪತ್ತಿನ ಸೌಹಾರ್ದ ಸಹಕಾರಿ ಅಧ್ಯಕ್ಷ ಪಿ.ತಿಪ್ಪಣ್ಣ ವಕೀಲ ಬಾಗಲವಾಡ ವಿಶೇಷ ಉಪನ್ಯಾಸ ನೀಡಿದರು. ಮುಖಂಡರಾದ ಶ್ರೀನಿವಾಸನಾಯಕ ಮಾತನಾಡಿದರು.
ಸನ್ಮಾನ ಃ ೨೦೨೦ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಗೊಂಡಿರುವ ಮೇಘನಾ, ಮಂಜುಳಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಸಂಸ್ಥೆಯ ಉಪನ್ಯಾಸಕರು, ಗ್ರಾಮದ ಮುಖಂಡರು, ವಿದ್ಯಾರ್ಥಿಗಳು ಇದ್ದರು.