ವಿವೇಕಾನಂದರು ಹಿಂದೂ ಧರ್ಮ, ಸಂಸ್ಕøತಿಯ ಶ್ರೇಷ್ಠತೆಯನ್ನು ವಿಶ್ವಕ್ಕೆ ತಿಳಿಸಿದ ಭಾರತದ ಸಂತ

ಚಾಮರಾಜನಗರ, ಜ.14:- ಸನಾತನ ಹಿಂದೂಧರ್ಮ ಮತ್ತು ಸಂಸ್ಕøತಿಯ ಶ್ರೇಷ್ಠತೆಯನ್ನು ವಿಶ್ವಕ್ಕೆತಿಳಿಸಿದ ಭಾರತದ ಸಂತ, ಆಧ್ಯಾತ್ಮಿಕ ದಿವ್ಯ ಪುರುಷ ಸ್ವಾಮಿವಿವೇಕಾನಂದರು ಎಂದು ನಗರಸಭಾ ಸದಸ್ಯೆ ಮಮತಾ ಬಾಲಸುಬ್ರಹ್ಮಣ್ಯ ತಿಳಿಸಿದರು.
ಅವರುಜೈಹಿಂದ್ ಪ್ರತಿμÁ್ಠನ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಯುವದಿನದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಮಾತನಾಡಿ, ರಾಮಕೃಷ್ಣ ಮಠ ಸ್ಥಾಪಿಸಿ, ವಿಶ್ವ ಸಹೋದರತೆ, ಸ್ತ್ರೀ ಶಿಕ್ಷಣದ ಮಹತ್ವ ಸಾರಿದ ವಿವೇಕಾನಂದರನ್ನು ಸ್ಮರಿಸುವಕಾರ್ಯ ಭಾರತದಯುವ ಶಕ್ತಿಯಜಾಗೃತಿಗೆ ಪೂರಕವೆಂದು ಅವರು ಅಭಿಪ್ರಾಯಪಟ್ಟರು.
ವಿವೇಕಾನಂದ ವೇಷ ಧರಿಸಿ ವಿವೇಕಾನಂದರ ಬಗ್ಗೆ ಸೆಂಟ್ ಫ್ರಾನ್ಸಿಸ್ ಶಾಲೆಯ 3ನೇ ತರಗತಿಯ ವಿದ್ಯಾರ್ಥಿಕಿಶೋರ್ ಶ್ರೀನಿವಾಸ್ ಮಾತನಾಡಿ, ಜಗತ್ತಿಗೆ ಮೊದಲ ಭಾಷಣದಲ್ಲೇ ಭಾರತೀಯ ಸಂಸ್ಕೃತಿಯ ದಿವ್ಯ ಶಬ್ದಗಳಾದ ಸಹೋದರಿ, ಸಹೋದರರೇ ನುಡಿಗಳ ಮೂಲಕ ಜಗತ್ತಿನಜನರನ್ನು ಹೇಗೆ ಗೌರವಿಸಬೇಕು ಎಂಬ ಸಂದೇಶ ನೀಡಿಗೌರವಕ್ಕೆ ಪಾತ್ರರಾದವರು ವಿವೇಕಾನಂದರು. ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ ಎಂಬ ಶಕ್ತಿ ಮಂತ್ರವನ್ನುಯುವಕರಿಗೆ ನೀಡಿದವರು ಎಂದು ತಿಳಿಸಿ, ಚಿಕಾಗೋ ಸಮ್ಮೇಳನದ ವಿಶೇಷ ನುಡಿಗಳನ್ನು ತಿಳಿಸಿದ ಬಾಲಕ ಕಿಶೋರ್‍ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದಜೈಹಿಂದ್ ಪ್ರತಿμÁ್ಠನದಅಧ್ಯಕ್ಷ ಸುರೇಶ್‍ಎನ್‍ಋಗ್ವೇದಿ ಮಾತನಾಡಿ, ಭಾರತದ ಮಣ್ಣೇ ನನಗೆ ಪವಿತ್ರ, ಅದರ ಗಾಳಿಯೇ ನನಗೆ ಪವಿತ್ರ, ಅದೇ ನನ್ನತೀರ್ಥಕ್ಷೇತ್ರ, ಮಾತೃ ಭೂಮಿಎಂದ ವಿವೇಕಾನಂದರು ಭಾರತದ ಬಗ್ಗೆ ಅಭಿಮಾನ, ಸ್ವಾಭಿಮಾನದ ಸ್ಪೂರ್ತಿತುಂಬಿದವರು.
ವೇದಧರ್ಮವೇ ಶ್ರೇಷ್ಠ. ಉಪನಿಷತ್, ವೇದಗಳ ಆದರ್ಶಗಳನ್ನು ಪಾಲಿಸಿ. ಗೀತೆ ಯೋಗಗಳನ್ನು ಅನುಸರಿಸಿ, ಕಪಿಗಳಂತೆ ಪಾಶ್ಚಿಮಾತ್ಯ ನಾಗರಿಕತೆಯನ್ನು ಅನುಸರಿಸಬೇಡಿ. ಭಾರತ ಜಗತ್ತಿನ ಆಧ್ಯಾತ್ಮಿಕ ಶಕ್ತಿಯ ಕೇಂದ್ರವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದಚೂಡಾ ಮಾಜಿಅಧ್ಯಕ್ಷಎಸ್.ಬಾಲಸುಬ್ರಮಣ್ಯ, ಬಿಕೆ ಆರಾಧ್ಯ, ಶಂಕರಪುರ ಸಮಿತಿಯ ಶ್ರೀನಿವಾಸ, ನಾಗಸುಂದರ್ , ಹರದನಹಳ್ಳಿ ಗಜೇಂದ್ರ, ಶಿಕ್ಷಕರಾದ ಭಾಗ್ಯಜ್ಯೋತಿ, ಕುಸುಮ ಋಗ್ವೇದಿ, ಚಂದ್ರಕಲಾ, ಝಾನ್ಸಿ ಮಕ್ಕಳ ಪರಿಷತ್ ಶ್ರಾವ್ಯಋಗ್ವೇದಿ ಉಪಸ್ಥಿತರಿದ್ದರು.