ವಿವೇಕಾನಂದರು ಬೆಳಗಿದ ಜ್ಞಾನದ ಜ್ಯೊತಿ ನಿರಂತರವಾಗಿ ಇಂದು ಪ್ರಜ್ವಲಿಸುತ್ತಲಿದೆ: ಕೊಳಮಲಿ

ವಿಜಯಪುರ, ಏ.6-ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಯುವಕರಿಗೆ ಸ್ಪೂರ್ತಿದಾಯಕ ಶ್ರೇಷ್ಠ ಅಧ್ಯಾತ್ಮದ ಚಿಂತಕರಾಗಿ ಒಳ್ಳೆಯ ಮೇಧಾವಿಗಳಾಗಿ ಜಗತ್ತಿಗೆ ಜ್ಞಾನ ಬೆಳಗಿದ ಮಹಾನ ಚೇತನ ವಿವೇಕಾನಂದರು. ಅವರು ಅಂದು ಬೆಳಗಿದ ದಿವ್ಯ ಜ್ಞಾನದ ಜ್ಯೊತಿ ನಿರಂತರವಾಗಿ ಪ್ರಜ್ವಲಿಸುತ್ತಲೇ ಇದೆ ಎಂದು ಎ.ಎಚ್. ಕೊಳಮಲಿ ಹೇಳಿದರು.
ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಬಿ.ಎಲ್.ಡಿ.ಇ. ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯದಲ್ಲಿ ಭಾರತ ಯುವವೇದಿಕೆ ಚಾರಿಟೇಬಲ್ ಫೌಂಡೇಶನ್ (ರಿ) ವಿಜಯಪುರ ಹಾಗು ಬಸವನಬಾಗೇವಾಡಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡ ಮನ ಮನಕ್ಕು ವಿವೇಕ ಅಭಿಯಾನ ಹಾಗೂ ರಾಷ್ಟ್ರ ಜಾಗೃತಿ ಪುಸ್ತಕ ವಿತರಣಾ ಕಾರ್ಯಕ್ರಮ ಸ್ವಾಮಿ ವಿವೇಕಾನಂದರ ಕುರಿತು ವಿಶೇಷ ಉಪನ್ಯಾಸ ನೀಡಿ ವಿಜಯಪುರ ಚೇತನಾ ಕಾಲೇಜಿನ ಉಪನ್ಯಾಸ ಸಾಹಿತಿ ಪ್ರೊ. ಎ.ಎಚ್. ಕೊಳಮಲಿ ಮಾತನಾಡಿದ ಇವರು, ನನಗೆ ನಿಷ್ಠಾವಂತ ನೂರು ಜನ ಯುವಕರನ್ನು ಕೊಡಿ ಈ ದೇಶದ ಸೌಭಾಗ್ಯವನ್ನು ಅಮೋಘಗೊಳಿಸುತ್ತನೆ. ಏಳಿ ಎದ್ದೆಳಿ ನಿಮ್ಮ ಗುರಿ ಮುಟ್ಟುವವರೆಗೂ ನಿಲ್ಲಬೇಡಿ ಎಂಬ ವಾಣಿ ಯುವಕರಲ್ಲಿ ಸ್ಪೂರ್ತಿಯನ್ನು ತುಂಬುತ್ತದೆ. ಕಬ್ಬಿಣದ ಮೌಂಸಖಂಡ ಉಕ್ಕಿನ ನರಮಂಡಲ ವಿದ್ಯುತಶ್ಚಕ್ತಿಯ ಇಚ್ಚಾಭಲವನ್ನು ಹೊಂದಿ ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿ ಎಂಬ ವಿವೇಕಾನಂದರ ಮಾತು ಯುವಕರಲ್ಲಿ ಅಮೋಘವಾದ ಶಕ್ತಿಯನ್ನು ತುಂಬುತ್ತದೆ.
ಬಾಲ್ಯದಲ್ಲಿಯೂ ಕೂಡ ಆಕರ್ಷಕ ವ್ಯಕ್ತಿತ್ವ ಹೊಂದಿರುವವರು ತಂದೆ ವಿಶ್ವನಾಥದತ್ತಾ ತಾಯಿ ಭುವನೇಶ್ವರಿ ದೇವಿ ಇಬ್ಬರು ರಾಮಕೃಷ್ಣರ ಪರಮಹಂಸರ ಮಾರ್ಗದರ್ಶನ ವಿವೇಕಾನಂದರಲ್ಲಿ ಅತ್ಯಂತ ಘಟ್ಟಿತನ ಬೆಳೆಸುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯುವವೇದಿಕೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಜೈನಾಪೂರ ನಮ್ಮ ಭಾರತ ಯುವ ವೇದಿಕೆಯು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಅನೇಕ ಅರ್ಥಪೂರ್ಣವಾದ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಳ್ಳುತ್ತ ಬಂದಿದೆ. ವಿವೇಕಾನಂದ ಸಂದೇಶವನ್ನು ಯುವಕರ ಮನಮನಕ್ಕು ಮುಟ್ಟಿಸುವ ಸದುದ್ದೇಶಗೋಸ್ಕರ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಕ್ಷಕ ಸಾಹಿತಿ ಆರ್.ಎಸ್. ಪಟ್ಟಣಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ದೇಶಾಭಿಮಾನವನ್ನು ಹೊಂದಬೇಕು. ತಾಯಿ ಹಾಗೂ ತಾಯ್ನಾಡಿಗಾಗಿ ಹೋರಾಡುವ ಯುವಕರ ಅವಶ್ಯಕತೆ ಇದೆ. ಮೊಬೈಲ್ ಪ್ರೇಮಿಗಳಾಗದೆ ಪುಸ್ತಕದ ಪ್ರೇಮಿಗಳಾಗಬೇಕು. ಚಿಕ್ಯಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತ ದೇಶದ ಸಂಸ್ಕøತಿ ಹಾಗೂ ಧರ್ಮವನ್ನು ಕುರಿತು ಮಾತನಾಡಿದ ಭಾಷಣ ಎಲ್ಲರನ್ನು ಬೆರಗುಗೊಳಿಸಿದೆ. ವಿವೇಕಾನಂದರ ಏಕಾಗ್ರತೆಯಿಂದ ಅಧ್ಯಯನ ಮಾಡಿ ತಮ್ಮ ಜ್ಞಾನದಿಂದ ಜಗಬೆಳಗಿಸಿದ ಮಹಾನಬಾವರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಪನ್ಯಾಸಕರಾದ ಬಿ.ಕೆ. ಪಾಟೀಲ ಮಾತನಾಡಿ ಇಂದಿನ ಯುವಕರು ಸ್ವಾಮಿ ವಿವೇಕಾನಂದರ ಹಾಗೂ ರಾಷ್ಟ್ರದ ಮಹಾನ ಮೇಧಾವಿ ಚಿಂತಕರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಏಕಾಗ್ರತೆ, ಶ್ರದ್ದೆ ಆಚಾರ-ವಿಚಾರದಿಂದ ಸುಂದರವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದುÀ ಹೇಳಿದರು.
ಈ ಸಂದರ್ಭದಲ್ಲಿ ಎಸ್.ಬಿ. ಜೋತೆಖಾನ, ಯು.ಎಚ್.ಜಾಧವ, ಬೀರು ಗಾಡವೆ, ಶ್ರೀಕಾಂv, ಇಸ್ಮಾಯಿಲ ಹಾದಿಮನಿÀ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ, ಭಾರತ ಯುವವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.