ವಿವೇಕಾನಂದರು ಜ್ಞಾನದ ವಿಶ್ವವಿದ್ಯಾಲಯವಿದ್ದಂತೆ: ನಂದರಗಿ


ಬ್ಯಾಡಗಿ, ಜ 14: ಮಾತೃ ಪ್ರೇಮ ಮತ್ತು ದೇಶಭಕ್ತಿಗಳಿಗೆ ಪರ್ಯಾಯ ಶಕ್ತಿ ಇನ್ನೊಂದಿಲ್ಲ ಎಂದು ಇದನ್ನು ವಿಶ್ವಕ್ಕೆ ಸಾರಿದ ವಿವೇಕಾನಂದರು ಜ್ಞಾನದ ವಿಶ್ವವಿದ್ಯಾಲಯವಿದ್ದಂತೆ. ಯುವಕರು ಇದನ್ನು ಅರ್ಥೈಸಿಕೊಳ್ಳುವ ಮೂಲಕ ದೇಶ ಮುನ್ನಡೆಸುವ ಗುರುತರ ಜವಾಬ್ದಾರಿಯನ್ನು ಪಡೆದುಕೊಳ್ಳಬೇಕಾಗಿದೆ ಎಂದು ಬಿಇಎಸ್‍ಎಂ ಕಾಲೇಜಿನ ಪ್ರಾಚಾರ್ಯ ಪೆÇ್ರ.ಎಂ.ಜಿ.ನಂದರಗಿ ಹೇಳಿದರು.
ಪಟ್ಟಣದ ಬಿಇಎಸ್‍ಎಂ ಮಹಾವಿದ್ಯಾಲಯದಲ್ಲಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಯುವದಿನ ಹಾಗೂ ಯುವ ಸಪ್ತಾಹ- 2022ರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು, ಭಾರತದ ಪ್ರಜೆಗಳೆಂದರೆ ಕನಿಷ್ಟರೆಂದು ಅರ್ಥೈಸಿಕೊಳ್ಳುತ್ತಿದ್ದ ಕಾಲದಲ್ಲಿ ತಮ್ಮ ಚಿಂತನೆಗಳನ್ನು ಹೊರಹಾಕಿದ ವಿವೇಕಾನಂದರು ಭಾರತವೂ ಕೂಡ ಒಂದು ವಿಶಿಷ್ಟ ಪರಂಪರೆ ಮತ್ತು ಸಂಸ್ಕೃತಿ ಹೊಂದಿದ ದೇಶವೆಂದು ಇಡೀ ವಿಶ್ವಕ್ಕೆ ಸಾರುವ ಮೂಲಕ ದೇಶದ ಹಿರಿಮೆಯನ್ನು ಪರಿಚಯಿಸಿದ್ದಾರೆ. ಸತತ ಪರಿಶ್ರಮ ಹಾಗೂ ದೃಢ ಮನಸ್ಸಿನಿಂದ ಮಾಡಿದ ಸತ್ಕಾರ್ಯಗಳೇ ಸಮಾಜಕ್ಕೆ ಮಾರ್ಗದರ್ಶನವಾಗಲಿದೆ. ವಿಧ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಂಡಲ್ಲಿ ಯಶಸ್ಸಿನ ಹಾದಿ ಸುಲಭವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಪೆÇ್ರ.ಎಸ್.ಸಿ.ವೈದ್ಯ, ಯುವರೆಡ್ ಕ್ರಾಸ್ ಘಟಕದ ಸಂಯೋಜಕ ಪೆÇ್ರ.ಕೆ.ಎಮ್ ಕಟಗಿಹಳ್ಳಿ, ಜ್ಯೋತಿ ಹಿರೇಮಠ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪೆÇ್ರ.ಪ್ರಶಾಂತ್.ಎನ್.ಎಸ್ ಸ್ವಾಗತಿಸಿದರು, ಡಾ.ಎಸ್.ಪಿ.ಪಾಂಗಿ ವಂದಿಸಿದರು. ಕುಮಾರಿ ಚೈತ್ರಾ ಕನವಳ್ಳಿ ಹಾಗೂ ಸ್ನೇಹಾ ಕಾರ್ಯಕ್ರಮವನ್ನು ನಿರೂಪಿಸಿದರು.