ವಿವೇಕರ ಸಾಲಿನಲ್ಲಿ ಯುವಕರು ನಡೆಯಲಿ:ಡಾ.ಮಾಳಗೆ

ಕಲಬುರಗಿ:ಜ.2: ವಿವೇಕಾನಂದರ ವಿಚಾರಗಳು ಜಗತ್ತಿಗೆ ದೊಡ್ಡ ಕಾಣಿಕೆ ನೀಡಿವೆ ಅವರ ಆದರ್ಶ ವಿಚಾರ ಚಿಂತ ನೆಗಳ ಮಾರ್ಗದಲ್ಲಿ ಯುವಕರು ನಡೆದರೆ ನಮ್ಮ ದೇಶ ಸದೃಢ ಭಾರತವಾಗುತ್ತದೆಂದು ವಿದ್ಯಾರ್ಥಿಗಳಿಗೆ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಮಾಳಗೆ ಕರೆ ನೀಡಿದರು.
ಸತ್ಯಂ ಕಾಲೇಜಿನಲ್ಲಿಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರ, ಬೆಂಗಳೂರುಜಿಲ್ಲಾ ಹಳಕಟ್ಟಿ ರಾಷ್ಟ್ರೀಯ ಬಳಗ,ಜಿಲ್ಲಾದಲಿತಜಿಲ್ಲಾದಲಿತ ಸಾಹಿತ್ಯ ಪರಿಷತ್ತು,
ಜಿಲ್ಲಾದಲಿತ ಸಾಹಿತ್ಯ ಪರಿಷತ್ತು,ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಕಲಬುರಗಿ ಸಂಯುಕ್ತ ಆಶ್ರಯದಲ್ಲಿಕಾಲೇಜಿನಿಂದ ಕಾಲೇಜಿಗೆ ವಿವೇಕಾನಂದ ಉಪನ್ಯಾಸ ಮಾಲೆಯಲ್ಲಿ ಉಪನ್ಯಾಸ ನೀಡಿ ಬೌದ್ಧ ಧರ್ಮದ ವಿಚಾರಧಾರೆಗಳನ್ನು ಅರಿತವರು.ಅವತ ವಿ ವೇಕ ಜಗತ್ತಿನ ಅರಿವಾಗಿದೆಯೆಂದರು.
ಸಾಹಿತಿ ಜಿಲ್ಲಾ ಹಳಕಟ್ಟಿ ರಾಷ್ಟ್ರೀಯ ಬಳಗದ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ಯುವಕರಿಂದ ಮಾತ್ರ ದೇಶದ ಚಿತ್ರಣ ಬದಲಾಯಿಸ ಬಹುದೆಂದು ವಿವೇಕಾನಂದರು ಯುವಕರಿಗೆ ಏಳಿ ಎದ್ದೇಳಿ ಎಚ್ಚರಗೊಳ್ಳಿ ಎಂದು ಕರೆ ನೀಡಿ ಚಿಕಾಗೋ ಭಾಷಣದಿಂದ ಪ್ರಪಂಚದ ದಾರ್ಶನಿಕರಲ್ಲಿ ಒಬ್ಬರಾಗಿ ದ್ದಾರೆಂದು. ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಬಿ.ಎಚ್. ನಿರಗುಡಿಯವರು ವಿದ್ಯಾರ್ಥಿ ಜೀವನದಲ್ಲಿ ಇಂಥ ಮಹಾತ್ಮರ ವಿಚಾರಗಳು ಪಾಠದ ಜೊತೆ ಜ್ಞಾನ ವಿಸ್ತರಿಸಲು ಕಾರಣವಾಗುತ್ತದೆಂದರು.ವಿದ್ಯಾರ್ಥಿಗಳು, ಉಪನ್ಯಾಸಕ ಸಿಬ್ಬಂದಿ ಭಾಗವಹಿಸಿದ್ದರು